ಹಂಪಿ ಉತ್ಸವ: ಆಗಸದಲ್ಲಿ ಲೋಹದ ಹಕ್ಕಿಗಳ ಹಾರಾಟ..!

By Kannadaprabha News  |  First Published Jan 31, 2024, 10:12 PM IST

ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಿಂದ ಎರಡು ಹೆಲಿಕಾಪ್ಟರ್‌ಗಳು ಫೆಬ್ರವರಿ ಒಂದರಿಂದ ಐದನೇ ತಾರೀಖಿನವರೆಗೆ ಹಾರಾಟ ನಡೆಸಲಿವೆ. ತುಂಬೇ ಏವಿಯೇಷನ್ಸ್ ಪ್ರೈ. ಲಿಮಿಟೆಡ್ ಹಾಗೂ ಚಿಪ್ಸಾನ್‌ ಏವಿಯೇಷನ್ಸ್ ಪ್ರೈ. ಲಿಮಿಟೆಡ್ ಸಂಸ್ಥೆಯ ಎರಡು ಹೆಲಿಕಾಪ್ಟರ್‌ಗಳು ಆಗಸದಲ್ಲಿ ಹಾರಾಟ ನಡೆಸಲಿವೆ.


ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಜ.31): ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಆಗಸದಿಂದ ಕಣ್ತುಂಬಿಕೊಳ್ಳಲು ಲೋಹದ ಹಕ್ಕಿಗಳು ಆಗಸದಲ್ಲಿ ಹಾರಾಟ ನಡೆಸಲಿದ್ದು, ಹಂಪಿ ಉತ್ಸವದಲ್ಲಿ ಹೆಲಿಕಾಪ್ಟರ್‌ಗಳು ಉತ್ಸಾಹ ತುಂಬಲಿವೆ. ಫೆಬ್ರವರಿ ಒಂದರಿಂದ ಐದರವರೆಗೆ `ಹಂಪಿ ಬೈ ಸ್ಕೈ’ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ. ಈ ಮೂಲಕ ಉತ್ಸವ ನೋಡಲು ಬರುವ ಜನರಿಗೆ ಆಗಸದಿಂದ ಹಂಪಿ ಸ್ಮಾರಕಗಳನ್ನು ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಿದೆ.

Latest Videos

undefined

ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಿಂದ ಎರಡು ಹೆಲಿಕಾಪ್ಟರ್‌ಗಳು ಫೆಬ್ರವರಿ ಒಂದರಿಂದ ಐದನೇ ತಾರೀಖಿನವರೆಗೆ ಹಾರಾಟ ನಡೆಸಲಿವೆ. ತುಂಬೇ ಏವಿಯೇಷನ್ಸ್ ಪ್ರೈ. ಲಿಮಿಟೆಡ್ ಹಾಗೂ ಚಿಪ್ಸಾನ್‌ ಏವಿಯೇಷನ್ಸ್ ಪ್ರೈ. ಲಿಮಿಟೆಡ್ ಸಂಸ್ಥೆಯ ಎರಡು ಹೆಲಿಕಾಪ್ಟರ್‌ಗಳು ಆಗಸದಲ್ಲಿ ಹಾರಾಟ ನಡೆಸಲಿವೆ.

ವಿಜಯನಗರ: ಹಂಪಿ ಉತ್ಸವದಲ್ಲಿ ಧ್ವನಿ, ಬೆಳಕಿನ ರಸದೌತಣ..!

ಹಂಪಿ ಬೈ ಸ್ಕೈ: 

ಹಂಪಿ ಸ್ಮಾರಕಗಳನ್ನು ಹೆಲಿಕಾಪ್ಟರ್‌ ಏರಿ ಕಣ್ತುಂಬಿಕೊಳ್ಳುವ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಿದೆ. ಹಂಪಿಯ ಮಯೂರ ಭುವನೇಶ್ವರಿ ಹೋಟೆಲ್ ಆವರಣದಿಂದ ರಾಣಿ ಸ್ನಾನಗೃಹ, ಕಮಲ್‌ ಮಹಲ್‌, ಮಹಾನವಮಿ ದಿಬ್ಬ, ಹಜಾರ ರಾಮ ದೇವಾಲಯ, ವಿಜಯ ವಿಠ್ಠಲ, ಕಲ್ಲಿನತೇರು, ಗಜಶಾಲೆ, ತುಂಗಭದ್ರಾ ನದಿ ತೀರ, ಎದುರು ಬಸವಣ್ಣ ಮತ್ತು ಶ್ರೀವಿರೂಪಾಕ್ಷೇಶ್ವರ ದೇವಾಲಯ, ಶ್ರೀಕೃಷ್ಣ ದೇವಾಲಯ, ಶ್ರೀವಿರೂಪಾಕ್ಷ ಬಜಾರ ಸೇರಿದಂತೆ ಹಂಪಿಯ ಸ್ಮಾರಕಗಳನ್ನು ಆಗಸದಿಂದಲೇ ಕಣ್ತುಂಬಿಕೊಳ್ಳಬಹುದು.

ಉತ್ಸವದ ಆಕರ್ಷಣೆ: 

ಹಂಪಿ ಉತ್ಸವಕ್ಕೆ ಜನರನ್ನು ಆಕರ್ಷಿಸಲು ಹೆಲಿಕಾಪ್ಟರ್‌ಗಳ ಹಾರಾಟವೂ ಪ್ರಮುಖ ಕಾರಣವಾಗಲಿದೆ. ಹಾಗಾಗಿ ಜಿಲ್ಲಾಡಳಿತ ಎರಡು ಸಂಸ್ಥೆಗಳ ಜತೆಗೆ ಚರ್ಚಿಸಿ ಎರಡು ಹೆಲಿಕಾಪ್ಟರ್‌ಗಳ ವ್ಯವಸ್ಥೆ ಮಾಡಿದೆ. ಇದರಿಂದ ಈ ಭಾಗದಲ್ಲಿ ಹೆಲಿ ಟೂರಿಸ್ಂ ಬೆಳವಣಿಗೆಗೂ ಸಹಕಾರಿಯಾಗಲಿದೆ. ಹಂಪಿ ಭಾಗದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದ್ದು, ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಕೂಡ ಸಹಕಾರ ನೀಡಿದೆ. ಉತ್ಸವದಲ್ಲಿ ಹೆಲಿಕಾಪ್ಟರ್‌ಗಳ ಹಾರಾಟ ಮುದ ನೀಡಲಿದೆ. ಹಾಗಾಗಿ ಜನರನ್ನು ಲೋಹದ ಹಕ್ಕಿಗಳು ಆಕರ್ಷಿಸಲಿವೆ.

ಟಿಕೆಟ್‌ ಪಡೆಯುವುದು ಹೇಗೆ?:

ಹಂಪಿ ಬೈ ಸ್ಕೈ ಕಾರ್ಯಕ್ರಮದ ಉದ್ಘಾಟನೆ ಫೆಬ್ರವರಿ ಒಂದರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಹೆಲಿಕಾಪ್ಟರ್‌ ಮೂಲಕ ಹಂಪಿ ಸ್ಮಾರಕಗಳು, ತುಂಗಾಭದ್ರಾ ಜಲಾಶಯ ಹಾಗೂ ಇತರೆ ಸ್ಥಳಗಳ ವೀಕ್ಷಣೆ ಮಾಡಬಹುದು. ಸ್ಥಳದಲ್ಲಿಯೇ ನಗದು ಪಾವತಿಸಿ ಟಿಕೆಟ್ ಪಡೆಯಬಹುದು. ಆನ್‌ಲೈನ್ ಪಾವತಿ ಕೂಡ ಲಭ್ಯವಿರುತ್ತದೆ.

ಪಂಚಮಸಾಲಿ ಮೀಸಲಿಗೆ ಸರ್ಕಾರದ ನಿರ್ಲಕ್ಷ್ಯ: ಜಯಮೃತ್ಯುಂಜಯ ಶ್ರೀ ಕಿಡಿ

ಎಂಟು ನಿಮಿಷಗಳ ಕಾಲ ಹಾರಾಟಕ್ಕೆ ಪ್ರತಿ ವ್ಯಕ್ತಿಗೆ ಶುಲ್ಕ ₹4299 ಮತ್ತು ಏಳು ನಿಮಿಷಗಳ ಹಾರಾಟಕ್ಕೆ ₹3800 ಟಿಕೆಟ್ ದರ ನಿಗದಿಪಡಿಸಲಾಗಿದೆ. ಎರಡು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಪ್ರತಿ ಹಾರಾಟದಲ್ಲಿ ಕರೆದೊಯ್ಯುವ ಪ್ರಯಾಣಿಕರ ಸಂಖ್ಯೆಯು 5ರಿಂದ 6 ಆಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ವೈಮಾನಿಕ ಸಂಸ್ಥೆಗಳಾದ ತುಂಬೇ ಏವಿಯೇಷನ್ಸ್ ಪ್ರೈ. ಲಿಮಿಟೆಡ್ ಮೊ. 9008124819, 9900124819, 9400399999 ಹಾಗೂ ಚಿಪ್ಸಾನ್‌ ಏವಿಯೇಷನ್ಸ್ ಪ್ರೈ.ಲಿಮಿಟೆಡ್ ಮೊ. 9945058538, 9845251546 ಸಂಪರ್ಕಿಸಬಹುದು.

ಜನೋತ್ಸವ:

ಹಂಪಿ ಸ್ಮಾರಕಗಳನ್ನು ಆಗಸದಿಂದ ವೀಕ್ಷಣೆಗೆ ಎರಡು ಹೆಲಿಕಾಪ್ಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಫೆಬ್ರವರಿ ಒಂದರಿಂದ ಐದರವರೆಗೆ `ಹಂಪಿ ಬೈ ಸ್ಕೈ’ ಕಾರ್ಯಕ್ರಮ ನಡೆಸಲಾಗುತ್ತಿದೆ. ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ಹೆಲಿಪ್ಯಾಡ್‌ಗಳನ್ನು ಕೂಡ ನಿರ್ಮಿಸಲಾಗಿದೆ. ಈ ಬಾರಿಯ ಉತ್ಸವ ಜನೋತ್ಸವವನ್ನಾಗಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ತಿಳಿಸಿದರು.

click me!