ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಮತ್ತು ಉದ್ಯಾನವನಗಳ ಸಮರ್ಪಕ ನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ ನೆಡೆಸಲು ಆಸಕ್ತಿವುಳ್ಳ ಬೆಂಗಳೂರಿನ ನಾಗರೀಕರನ್ನು “ಕೆರೆ ಮಿತ್ರ” ಹಾಗೂ “ಹಸಿರು ಮಿತ್ರ” ರಾಗಿ ಪಾಲಿಕೆಯ ವೆಬ್‌ಸೈಟ್‌ನಲ್ಲಿ ನೊಂದಾಯಿಸಿಕೊಳ್ಳುವ ಅವಧಿಯನ್ನು ವಿಸ್ತರಿಸಲಾಗಿದೆ.
ವರದಿ: ರಕ್ಷಾ
ಬೆಂಗಳೂರು (ಜ.31): ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಮತ್ತು ಉದ್ಯಾನವನಗಳ ಸಮರ್ಪಕ ನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ ನೆಡೆಸಲು ಆಸಕ್ತಿವುಳ್ಳ ಬೆಂಗಳೂರಿನ ನಾಗರೀಕರನ್ನು “ಕೆರೆ ಮಿತ್ರ” ಹಾಗೂ “ಹಸಿರು ಮಿತ್ರ” ರಾಗಿ ಪಾಲಿಕೆಯ ವೆಬ್‌ಸೈಟ್‌ನಲ್ಲಿ ನೊಂದಾಯಿಸಿಕೊಳ್ಳುವ ಅವಧಿಯನ್ನು ದಿನಾಂಕ: 12-02-2024ರವರೆಗೆ ವಿಸ್ತರಿಸಲಾಗಿದೆ.
undefined
ಬೆಂಗಳೂರಿನ ನಿವಾಸಿಗಳು ಅವರು ವಾಸವಿರುವ ವಾರ್ಡ್/ ಸಮೀಪದಲ್ಲಿರುವ ಕೆರೆ ಅಥವಾ ಉದ್ಯಾನವನಕ್ಕೆ ಆಸಕ್ತಿ ಇದ್ದಲ್ಲಿ ಕೆರೆ ನಿರ್ವಹಣೆ ಬಗ್ಗೆ ಪ್ರತಿನಿತ್ಯ ಪರಿಶೀಲಿಸಿ, ಅಂತರ್ಜಾಲದಲ್ಲಿ ವಿವರಗಳನ್ನು ದಾಖಲಿಸುವ ಮೂಲಕ ಸಾರ್ವಜನಿಕರ ಅವಶ್ಯಕತೆ ಹಾಗೂ ಕೆರೆ/ಉದ್ಯಾನವನಗಳ ಆಗು-ಹೋಗುಗಳನ್ನು ಇನ್ನು ಉತ್ತಮವಾಗಿ ನಿಗಾವಹಿಸಲು ಅನುವು ಮಾಡಿಕೊಳ್ಳುವ ಉದ್ದೇಶವಾಗಿದೆ. https://www.bbmp.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಕೆರೆ ಮಿತ್ರ ಹಾಗೂ ಹಸಿರು ಮಿತ್ರ ಆಗಿ ನೊಂದಾಯಿಸಿಕೊಳ್ಳಬಹುದಾಗಿದ್ದು, ದಿನಾಂಕ: 31-01-2024ರ ಬದಲಾಗಿ ದಿನಾಂಕ: 12-02-2024ರ ಸಂಜೆ 5:00 ಒಳಗಡೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸದರಿ ಸದಾವಕಾಶವನ್ನು ನಾಗರಿಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳು ಸದುಪಯೋಗಪಡಿಸಿಕೊಳ್ಳಲು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಸಾರ್ವಜನಿಕ ಪ್ರಕಟಣೆಯ ಮೂಲಕ ಕೋರಿದ್ದಾರೆ.
ಲಂಡನ್‌ನಲ್ಲಿ ಬಾಲಿವುಡ್ ನಟಿ ಜೊತೆ ಪ್ರೀತಿಲಿ ಬಿದ್ದ ಟೀಂ ಇಂಡಿಯಾ ಸ್ಟಾರ್, 8 ವರ್ಷಗಳ ಡೇಟಿಂಗ್ ಬಳಿಕ ಮದುವೆ
ಕೆರೆ ಮಿತ್ರ ಹಾಗೂ ಹಸಿರು ಮಿತ್ರರಾಗಲು ನೇರವಾಗಿ ಕೆಳಗಿನ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಬಹುದು -
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಮತ್ತು ಉದ್ಯಾನವನಗಳ ಸಮರ್ಪಕ ನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ ನೆಡೆಸಲು ಆಸಕ್ತಿವುಳ್ಳ ಬೆಂಗಳೂರಿನ ನಾಗರೀಕರು “ಕೆರೆ ಮಿತ್ರ”ರಾಗಿ https://keremithra.bbmpgov.in/registration ಹಾಗೂ “ಹಸಿರು ಮಿತ್ರ” ರಾಗಿ https://hasirumithra.bbmpgov.in/registration ಲಿಂಕ್ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ.