ಟೆಂಡರ್ ಪ್ರಕ್ರಿಯೆ ಮಾತ್ರ ಬಾಕಿ ಇರೋದು ಸೇತು ನಿರ್ಮಾಣ ಮಾಡ್ತೇವೆ : ಶ್ರೀರಾಮುಲು

By Ravi Nayak  |  First Published Jul 15, 2022, 5:58 PM IST
  • ನೆರೆಯಲ್ಲೂ ರಾಜಕೀಯ ಮಾಡ್ತಿರೋ ಬಳ್ಳಾರಿ ನಾಯಕರು
  • ತುಂಗಭದ್ರಾ ಜಲಾಶಯದಿಂದ ‌ನೀರು ಬಿಟ್ಟ ಹಿನ್ನಲೆ ಕಂಪ್ಲಿ ಸೇತುವೆ ಮುಳುಗಡೆ
  • ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರ  ಮನಸ್ಸು ಮಾಡ್ತಿಲ್ಲ : ಶಾಸಕ ಗಣೇಶ್

ಬಳ್ಳಾರಿ,(ಜು.15): ಅಭಿವೃದ್ಧಿ ವಿಚಾರದಲ್ಲಿ ಅಲ್ಲ ನೆರೆ ಬಂದಾಗಲೂ ಬಳ್ಳಾರಿ ನಾಯಕರು ರಾಜಕೀಯ ಮಾಡ್ತಿದ್ದಾರೆ. ಹೌದು, ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಟ್ಟಿದ್ದಾರೆ. ಪರಿಣಾಮ ಹಂಪಿಯ ಹಲವು ಸ್ಮಾರಕ ಸೇರಿದಂತೆ ಕಂಪ್ಲಿ ಮತ್ತು ಗಂಗಾವತಿ ಮಧ್ಯೆ ಇರೋ ಸೇತುವೆ ಸಂಪೂರ್ಣ  ಮುಳುಗಡೆಯಾಗಿದೆ. ಈ ವೇಳೆ ಜನರಿಗೆ ಸಹಕಾರಿಯಾಗೋ ರೀತಿಯಲ್ಲಿ ವರ್ತಿಸಬೇಕಾದ ಜನಪ್ರತಿನಿಧಿಗಳು ಸೇತುವೆ ವಿಚಾರವಾಗಿ ಒಬ್ಬರಿಗೊಬ್ಬರು ಟಾಂಗ್ ಕೊಟ್ಟಿದ್ದಾರೆ.  ನೂತನವಾಗಿ ಕಂಪ್ಲಿ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಇಚ್ಛೆಯೆ ಇಲ್ಲ. ಇಲ್ಲಿಯ ಆಡಳಿತರೂಢ ಜನಪ್ರತಿನಿಧಿಗಳಿಗೆ ಇದು ಬೇಕಿಲ್ಲವೆಂದು ಕಾಂಗ್ರೆಸ್ ಕಂಪ್ಲಿ ಶಾಸಕ ಗಣೇಶ್ ಹೇಳಿದ್ರೇ, ಈಗಾಗಲೇ  ಸೇತುವೆ ನಿರ್ಮಾಣಕ್ಕೆ ಜಿ.ಓ. ಆಗಿದೆ. ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಇದೆಲ್ಲ ತಿಳಿಯದೇ ಮಾತನಾಡಬಾರದು ಎಂದು ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಇದೆಲ್ಲವೂ ಮುಳುಗಡೆಯಾದ ಸೇತುವೆ ಮುಂಭಾಗದಲ್ಲಿ ನಡೆದ ವಾಗ್ಯೂದ್ಧದ ಪ್ರಸಂಗವಾಗಿದೆ.

ಮುಳುಗಡೆಯಾದ ಸೇತುವೆ ವೀಕ್ಷಣೆಗೆ ಬಂದ್ರೂ ಒಬ್ಬರನ್ನೊಬ್ಬರು ಮತನಾಡಿದ ನಾಯಕರು:  ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರ ಬಿಟ್ಟ ಹಿನ್ನಲೆ..ಕಂಪ್ಲಿ ಗಂಗಾವತಿ ಮಧ್ಯೆ ಇರೋ ಸೇತುವೆ ಮುಳುಗಡೆ ಹೊಂದಿದೆ. ಕಲ್ಯಾಣ ಕರ್ನಾಟಕದಿಂದ ಬೆಂಗಳೂರಿಗೆ ಹೋಗುವ ಒಂದು ಮಾರ್ಗ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರತಿ ವರ್ಷ ನೀರು ಬಿಟ್ಟಾಗ‌ ಮುಳುಗೋ ಈ ಸೇತುವೆಗೆ ಇದೀಗ ಕುಸಿಯೋ ಭೀತಿ ಎದುರಾಗಿದೆ.. ಮುಳುಗಡೆಯಾದ ಸೇತುವೆ ಮೇಲೆ ಪರಿಶೀಲಿಸಲು ಬಂದ ಶಾಸಕ ಸಚಿವರ ನೂತನ ಸೇತುವೆ ವಿಚಾರವಾಗಿ ಪರಸ್ಪರ ಕೆಸರೆಚಾಟ ಮಾಡಿಕೊಂಡಿದ್ದಾರೆ.  ಮೊದಲಿಗೆ  ಸೇತುವೆ ಬಳಿ ಬಂದಿದ್ದ ಶಾಸಕ ಗಣೇಶ್,  ಬಿಜೆಪಿ ಸರ್ಕಾರ ನೂತನ ಸೇತುವೆ ಮಾಡ್ತಿಲ್ಲ. ಹಲವು ಬಾರಿ ಮನವಿ ಮಾಡಿದ್ರೂ ನಿರ್ಮಾಣ ಮಾಡದ ಹಿನ್ನಲೆ, ನೀರು ಕಡಿಮೆಯಾದ ಬಳಿಕ ಸೇತುವೆ ಮೇಲೆ ಹೋರಾಟ ಮಾಡ್ತೆನೆ ಎಂದರು ಅಲ್ಲದೇ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರ್ಕಾರ ನಮಗೆ ಬೆಂಬಲ ನೀಡ್ತಿಲ್ಲವೆಂದು ವಾಗ್ದಾಳಿ ನಡೆಸಿದ್ರು.

Tap to resize

Latest Videos

undefined

ಇದನ್ನೂ ಓದಿ: Kodagu News: ಮೂರು ವರ್ಷ ಕಳೆದರೂ ನಿರಾಶ್ರಿತ ಕುಟುಂಬಕ್ಕೆ ಸಿಕ್ಕಿಲ್ಲ ಸೂರು!

ಸೇತುವೆ ನಿರ್ಮಾಣ ಟೆಂಡರ್ ಕಾಮಗಾರಿ ಪ್ರಗತಿಯಲ್ಲಿದೆ: ಆದ್ರೇ ನೂತನ ಸೇತುವೆ ನಿರ್ಮಾಣಕ್ಕೆ ಜಿ.ಓ ಅಗಿದ್ದು, ಟೆಂಡರ್ ಆಗಬೇಕಿದೆ ಎಂದು ಶ್ರೀರಾಮುಲು ತಿರುಗೇಟು ಕೊಟ್ಟಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದ ಮಾತ್ರಕ್ಕೆ ಹೋರಾಟ ಮಾಡ್ತೇವೆ. ಜನರಿಗೆ ತಪ್ಪು ದಾರಿಗೆಳೆಯುತ್ತೇವೆ ಅಂದ್ರೇ ಹೇಗೆ ಎಂದು ಶ್ರೀರಾಮುಲು ಪ್ರಶ್ನಿಸಿದರು. ಯಾವುದಕ್ಕೂ ತಾಳ್ಮೆ ಇರಬೇಕು. ಈಗಾಗಲೇ  ಕಂಪ್ಲಿಗೆ ಬಂದು ಹೋಗಿರೋ ಮುಖ್ಯಮಂತ್ರಿಗಳು ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧವೆಂದು ಹೇಳಿದ್ದಾರೆ. ಮಾಜಿ ಶಾಸಕ ಸುರೇಶ್  ಎಲ್ಲ ರೀತಿಯ ಅಭಿವೃದ್ಧಿ ಮಾಡೋ ಕೆಲಸ ಮಾಡುತ್ತಿದ್ದಾರೆ. ಆದ್ರೇ, ಸ್ಥಳೀಯ ಶಾಸಕರು ಕಾಂಗ್ರೆಸ್ನವರು ಎನ್ನುವ ಒಂದೇ ಕಾರಣಕ್ಕೆ ಎಲ್ಲವನ್ನು ವಿರೋಧಿಸಬಾರದು ಎಲ್ಲದಕ್ಕೂ ತಾಳ್ಮೆಯಿಂದ ಇದ್ದು , ಸಹಕಾರ ನೀಡಬೇಕು. ಸೇತುವೆ ನಿರ್ಮಾಣಗೊಂಡ್ರೇ, ನಿಮಗೂ ಒಳ್ಳೆಯ ಹೆಸರು ಬರುತ್ತದೆ ಎಂದು ಶಾಸಕರ ಹೆಸರನ್ನು ಹೇಳದೇ ಟಾಂಗ್ ನೀಡಿದ್ರು.

ಇದನ್ನೂ ಓದಿ: ಬೈಕಂಪಾಡಿ ತೀರದಲ್ಲಿ ಮನೆ ಸಮುದ್ರಪಾಲು, ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಒಬ್ಬರನನ್ನೊಬ್ಬರು ಮಾತನಾಡಿಸದ ನಾಯಕರು: ಎರಡು ನಿಮಿಷದ ಅಂತರದಲ್ಲಿ ಸೇತುವೆ ಮೇಲೆ ಬಂದ್ರೂ ಒಬ್ಬರ ಮುಖ ಒಬ್ಬರು ನೋಡಲಿಲ್ಲ.. ಪರಸ್ಪರ ಇಬ್ಬರು ಸುವರ್ಣ ನ್ಯೂಸ್ಗೆ ಸೇತುವೆ ವಿಚಾರದಲ್ಲಿ ಪ್ರತ್ಯೇಕವಾಗಿ ಮಾತನಾಡಿದ್ರು. ತಾವುಗಳು ಮಾತ್ರ ಒಬ್ಬರನ್ನೊಬ್ಬರು ಮಾತನಾಡಿಸಲಿಲ್ಲ. 2008 ಮತ್ತು 2013ರಲ್ಲಿ ಕಂಪ್ಲಿ ಕ್ಷೇತ್ರದಿಂದ ಗೆಲುವನ್ನು ಸಾಧಿಸಿದ್ದು, ಶ್ರೀರಾಮುಲು ಅಳಿಯ ಸುರೇಶ್ ಬಾರು, 2018ರಲ್ಲಿ ಗಣೇಶ್ ವಿರುದ್ಧ ಸೋಲನ್ನು ಅನುಭವಿಸಿದ್ರು. ಆಗಿನಿಂದಲೂ ಇಬ್ಬರ ಮಧ್ಯೆ ಮುಸುಕಿನ ಗುದ್ದಾಟವಿದೆ. ಇನ್ನೂ ಹಿಂದೆ 2013ರಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಗಣೇಶ್ ಅವರು ಸುರೇಶ್ ಬಾಬು ವಿರುದ್ಧ ಸೋತಿದ್ರು. ಆದ್ರೇ, 2018ರಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾದ ಗಣೇಶ್ ಅವರು, ಸುರೇಶ್ ಬಾಬುವನ್ನು ಸೋಲಿಸುವಲ್ಲಿ ಯಶಸ್ಸಿಯಾದ್ರು. 

click me!