* ಬೆಂಗಳೂರು ನಗರದಲ್ಲಿ 2ನೇ ಅಲೆಯ ಕನಿಷ್ಠ ಕೋವಿಡ್ ಪ್ರಕರಣ ದಾಖಲು
* ಜು.25ರ ಬಳಿಕ 140 ಮಂದಿಗೆ ಸೋಂಕು, ಮೂವರ ಸಾವು
* ಬೆಳ್ಳಂದೂರು ವಾರ್ಡ್‌ನಲ್ಲಿ ನಿತ್ಯ ಸರಾಸರಿ 6 ಕೋವಿಡ್ ಪ್ರಕರಣಗಳು ಪತ್ತೆ
ಬೆಂಗಳೂರು(ಅ.09): ಕೊರೋನಾ(Coronavirus) ಎರಡನೇ ಅಲೆಯ ನಂತರ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಸೋಂಕು ಪ್ರಕರಣಗಳು ನಗರದಲ್ಲಿ ಪತ್ತೆಯಾಗಿವೆ. 140 ಜನರಲ್ಲಿ ಸೋಂಕು ದೃಢಪಟ್ಟಿದ್ದು ಮೂವರು ಸೋಂಕಿಗೆ ಬಲಿಯಾಗಿದ್ದಾರೆ.
ಎರಡನೇ ಅಲೆಯ ನಂತರ ಜುಲೈ 25ರಂದು ಪತ್ತೆಯಾಗಿದ್ದ 165 ಸೋಂಕಿತ ಪ್ರಕರಣಗಳೇ ಈವರೆಗಿನ ಅತೀ ಕನಿಷ್ಠ ಸಂಖ್ಯೆಯಾಗಿದೆ. ಹೊಸ ಪ್ರಕರಣಗಳ ಪತ್ತೆಯಿಂದಾಗಿ ಇದುವರೆಗಿನ ಸೋಂಕಿತರ ಸಂಖ್ಯೆ 12,24,237ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ 148 ಮಂದಿ ಗುಣಮುಖರಾಗಿದ್ದು ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,24,237ಕ್ಕೆ ಹೆಚ್ಚಳವಾಗಿದೆ. ಮೂವರು ಸೋಂಕಿನಿಂದ ಮೃತಪಟ್ಟಿದ್ದು(Death) ಇವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 16,180ಕ್ಕೆ ಏರಿದೆ. ನಗರದಲ್ಲಿ(Bengaluru) 7552 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ(Health Department) ವರದಿ ಮಾಹಿತಿ ನೀಡಿದೆ.
undefined
ಕರ್ನಾಟಕದಲ್ಲಿ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿ ದಿನಾಂಕ ವಿಸ್ತರಣೆ
ಕಳೆದ ಹತ್ತು ದಿನಗಳಲ್ಲಿ ಪಾಲಿಕೆ(BBMP) ವ್ಯಾಪ್ತಿಯ ಬೆಳ್ಳಂದೂರು ವಾರ್ಡ್‌ನಲ್ಲಿ ನಿತ್ಯ ಸರಾಸರಿ 6 ಕೋವಿಡ್(Covid19) ಪ್ರಕರಣಗಳು ಪತ್ತೆಯಾಗುತ್ತಿವೆ. ದೊಡ್ಡನೆಕ್ಕುಂದಿ, ವರ್ತೂರು, ಸಿಂಗಸಂದ್ರ ವಾರ್ಡ್‌ಗಳಲ್ಲಿ ತಲಾ 5 ಸೋಂಕಿತ ಪ್ರಕರಣಗಳು ಪತ್ತೆಯಾದರೆ, ಬೇಗೂರು, ಹೊರಮಾವು, ರಾಜರಾಜೇಶ್ವರಿ ನಗರ ವಾರ್ಡ್‌ಗಳಲ್ಲಿ ತಲಾ 4 ಮತ್ತು ಬಸವನಪುರ, ಹೊಯ್ಸಳ ನಗರ ಮತ್ತು ಬಾಣಸವಾಡಿ ವಾರ್ಡ್‌ಗಳಲ್ಲಿ ತಲಾ 3 ಪ್ರಕರಣಗಳು ಪತ್ತೆಯಾಗುತ್ತಿವೆ.
69 ಮೈಕ್ರೋ ಕಂಟೈನ್ಮೆಂಟ್:
ನಗರದಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಎಂಟು ವಲಯಗಳಲ್ಲಿ 66 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ಬೊಮ್ಮನಹಳ್ಳಿ 18, ದಕ್ಷಿಣ 14, ಮಹದೇವಪುರ 12, ಪೂರ್ವ 11, ಪಶ್ಚಿಮ 7, ಯಲಹಂಕ 4, ರಾಜರಾಜೇಶ್ವರಿ ನಗರ 3 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ದಾಸರಹಳ್ಳಿ ವಲಯ ಮೈಕ್ರೋ ಕಂಟೈನ್ಮೆಂಟ್ ಮುಕ್ತವಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.