Dharwad| ಕನ್ನಡಪ್ರಭದ ಶಶಿಕುಮಾರ ಸೇರಿ 12 ಪತ್ರಕರ್ತರಿಗೆ ಧಾಜಿಕಾನಿಪ ಪ್ರಶಸ್ತಿ

By Kannadaprabha News  |  First Published Oct 9, 2021, 10:58 AM IST

*   ಧಾಜಿಕಾನಿಪ  ವಾರ್ಷಿಕ ಪ್ರಶಸ್ತಿ ಪ್ರಕಟ 
*  10 ಪುರಸ್ಕಾರಗಳಿಗೆ 12 ಜನ ಆಯ್ಕೆ
*  ಅ. 10ರಂದು ಪ್ರಶಸ್ತಿ ಪ್ರದಾನ 
 


ಹುಬ್ಬಳ್ಳಿ(ಅ.09):  ಧಾರವಾಡ(Dharwad) ಜಿಲ್ಲಾ ವ್ಯಾಪ್ತಿಯಲ್ಲಿನ ಪತ್ರಕರ್ತರಿಗೆ(Journalists) ಪ್ರೋತ್ಸಾಹಿಸುವ ಉದ್ದೇಶದಿಂದ ಧಾರವಾಡ  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 2020-21ನೇ ಸಾಲಿನಲ್ಲಿ ದಿನಪತ್ರಿಕೆಗಳಲ್ಲಿ(Newspaper) ಪ್ರಕಟವಾದ ಹಾಗೂ ಟಿ.ವಿ.(TV) ವಾಹಿನಿಗಳಲ್ಲಿ ಬಿತ್ತರಗೊಂಡ ಉತ್ತಮ ವರದಿ, ಲೇಖನ ಛಾಯಾಚಿತ್ರ ಹಾಗೂ ವಿಡಿಯೋಗಳಿಗೆ(Video) ಈ ಬಾರಿ 7ವಿಭಾಗದಲ್ಲಿನ 10 ಪ್ರಶಸ್ತಿಗಳಿಗೆ(Award) 12 ಜನರನ್ನು ಆಯ್ಕೆ ಮಾಡಲಾಗಿದೆ. 

ಪ್ರಶಸ್ತಿಯ ಹೆಸರು ಹಾಗೂ ಪುರಸ್ಕೃತರ ವಿವರ ಇಂತಿದೆ:

Tap to resize

Latest Videos

1. ಶ್ರೀಮತಿ ಕಮಲವ್ವ ಸೋಮಶೇಖರಪ್ಪ ಬುರ್ಲಬಡ್ಡಿ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿ
ಪುರಸ್ಕೃತರು: ಆನಂದ ಅಂಗಡಿ, ವರದಿಗಾರರು, ವಿಜಯವಾಣಿ, ಹುಬ್ಬಳ್ಳಿ
ವರದಿ ವಿಷಯ: ಇವರೇ ನಿಜವಾದ ಕೊರೊನಾ ಸೇನಾನಿಗಳು.
2. ಶ್ರೀಮತಿ ಮುರಿಗೆಮ್ಮ ಬಸಪ್ಪ ಹೂಗಾರ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿ
ಪುರಸ್ಕೃತರು: ಓದೇಶ ಸಕಲೇಶಪುರ ವರದಿಗಾರರು, ಪ್ರಜಾವಾಣಿ, ಹುಬ್ಬಳ್ಳಿ
ವರದಿ ವಿಷಯ: ಸಂಕಷ್ಟದಲ್ಲಿ ಸ್ಮಶಾನ ಕಾರ್ಮಿಕರು 
3. ಜೀತೇಂದ್ರ ದಯಾಳಜಿ ಮಜೇಥಿಯಾ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ 
ಪುರಸ್ಕತರು: ಶಶಿಕುಮಾರ ಪತಂಗೆ, ವರದಿಗಾರರು, ಕನ್ನಡಪ್ರಭ,ಅಳ್ನಾವರ
ವರದಿ ವಿಷಯ: ಅಳ್ನಾವರದಲ್ಲಿl ‘ಮದುವೆ ದಂಧೆ’ ಜೋರು
4. ಶ್ರೀ ಸುಲೇಮಾನ ಅಬ್ದುಲ್ ಅಜೀಜಸಾಬ ಮುನವಳ್ಳಿ (ಪೊಲೀಸ್ ಇಲಾಖೆ) ಅತ್ಯುತ್ತಮ ಲೇಖನ ಪ್ರಶಸ್ತಿ
ಪುರಸ್ಕೃತರು: ಸುನೀಲ ಪಾಟೀಲ, ಉಪಸಂಪಾದಕರು,ಸಂಯುಕ್ತ ಕರ್ನಾಟಕ ಹುಬ್ಬಳ್ಳಿ
ವರದಿ ವಿಷಯ: ಧಾರವಾಡ ದೀದಿಗೆ ಮೂರು ನಕ್ಷತ್ರ
5. ದಿ. ಕೃಷ್ಣಾಚಾರ್ಯ ರಾಘವಾಚಾರ್ಯ ಗಂಡಮಾಲಿ (ಮಾಮಾ) ಅತ್ಯುತ್ತಮ ಲೇಖನ ಪ್ರಶಸ್ತಿ
ಪುರಸ್ಕೃತರು: ವೀಣಾ ಕುಂಬಾರ, ಉಪಸಂಪಾದಕರು, ವಿಜಯ ಕರ್ನಾಟಕ ಹುಬ್ಬಳ್ಳಿ
ವರದಿ ವಿಷಯ: ಕಠಿಣ ಸಾಧನೆಯಲ್ಲೇ ಆನಂದ!
6. ದಿ. ಆರ್.ರಾಮು (ಶೆಟ್ಟಿ) ಅತ್ಯುತ್ತಮ ಆಂಗ್ಲ ಭಾಷಾ ವರದಿ/ ಲೇಖನ ಪ್ರಶಸ್ತಿ
ಪುರಸ್ಕೃತರು : ದಿವ್ಯಶ್ರೀ ಮುದಕವಿ ,ಹಿರಿಯ ಉಪಸಂಪಾದಕರು, ಡೆಕ್ಕನ್ ಹೆರಾಲ್ಡ್,ಹುಬ್ಬಳ್ಳಿ 
ವರದಿ ವಿಷಯ : ವಾಟರ್ ಹೆರಿಟೇಜ್ ಇನ್ ದ ಏಜ್ ಆಫ್ ಸ್ಕೇರ್‌ಸಿಟಿ
7. ಶ್ರೀ ಎಂ.ಡಿ.ಗೊಗೇರಿ ಅತ್ಯುತ್ತಮ ಛಾಯಾಗ್ರಾಹಣ ಪ್ರಶಸ್ತಿ
ಪುರಸ್ಕೃತರು;  ಮಂಜುನಾಥ ಜರತಾರಘರ, ಛಾಯಾಗ್ರಾಹಕರು, ಹೊಸದಿಗಂತ, ಹುಬ್ಬಳ್ಳಿ
ವಿಷಯ: ಅವಳಿ ನಗರ ಸ್ತಬ್ದ 
8. ಡಾ. ಬಿ.ಎಫ್ ದಂಡಿನ್ ಅತ್ಯುತ್ತಮ ಪುಟವಿನ್ಯಾಸ ಪ್ರಶಸ್ತಿ
 ಪುರಸ್ಕೃತರು :ಆನಂದ ಹುದ್ದಾರ, ಪುಟ ವಿನ್ಯಾಸಕ, ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ
ವಿಷಯ: ಕಳೆಗುಂದಿದ ಬಂಗಾರ
9. ಶ್ರೀ ವಸಂತ ಹೊರಟ್ಟಿ (ಆಕ್ಸ್‌ಫರ್ಡ್‌ ಕಾಲೇಜ್) 
ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿ 
ಪುರಸ್ಕೃತರು; ಶ್ರೀಧರ ಮುಂಡರಗಿ (ವರದಿಗಾರರು), 
ಪ್ರಕಾಶ ಮುಳ್ಳೊಳ್ಳಿ(ಕ್ಯಾಮರಾಮನ್), ನ್ಯೂಸ್ ಫಸ್ಟ ಹುಬ್ಬಳ್ಳಿ
ವಿಷಯ: ಕಾಂಕ್ರಿಟ್ ಕಾಡಲ್ಲಿ ಚಂಬು ಕುಟಿಕದ ಜೀವನ
10.  ದಿ.ಅಣ್ಣಪ್ಪ ಶೆಟ್ಟಿ ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿ 

DVG Award|ರವಿ ಹೆಗಡೆ ಸೇರಿ 18 ಪತ್ರಕರ್ತರಿಗೆ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ

ಪುರಸ್ಕೃತರು; ಕಿರಣ ಬಾಕಳೆ (ವರದಿಗಾರರು), ವಿನಾಯಕ ಬಾಕಳೆ (ಕ್ಯಾಮರಾಮನ್), ದೂರದರ್ಶನ, ಹುಬ್ಬಳ್ಳಿ

DVG Award|ರವಿ ಹೆಗಡೆ ಸೇರಿ 18 ಪತ್ರಕರ್ತರಿಗೆ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ

ಪ್ರಶಸ್ತಿಯು ತಲಾ ಐದು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ಅಲ್ಲದೆ ಎಲೆಕ್ಟ್ರಾನಿಕ್ ಮಾಧ್ಯಮದವರಿಗೆ ಪ್ರಶಸ್ತಿಯು (ವರದಿಗಾರ ಹಾಗೂ ಕ್ಯಾಮೆರಾಮನ್ ಇಬ್ಬರಿಗೂ ಸೇರಿ 10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಪ್ರಶಸ್ತಿ ಆಯ್ಕೆ ಸಮಿತಿಯು ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜು ವಿಜಾಪುರ ಅಧ್ಯಕ್ಷತೆಯಲ್ಲಿ ಜಗದೀಶ ಬುರ್ಲಬಡ್ಡಿ, ತನುಜಾ ನಾಯ್ಕ, ಕೃಷ್ಣಾ ದಿವಾಕರ, ಮಧುಕರ ಭಟ್ಟ,  ಗುರುರಾಜ ಹೂಗಾರ, ಹಾಗೂ ಗುರು ಭಾಂಡಗೆ ಅವರನ್ನೊಳಗೊಂಡಿತ್ತು.

ಅ. 10ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

click me!