Mysuru ದಸರಾ ಬಳಿಕ ಮೈಸೂರು ಅಭಿವೃದ್ಧಿ, ಟೂರಿಸಂ ಪ್ಯಾಕೇಜ್‌ ಬಗ್ಗೆ ಚರ್ಚೆ

By Kannadaprabha News  |  First Published Oct 9, 2021, 11:49 AM IST
  • ಮೈಸೂರು ಅಭಿವೃದ್ಧಿ ಮತ್ತು ದಸರಾ ಪ್ರವಾಸ ಪ್ಯಾಕೇಜ್‌ ಮಾಡುವ ಬಗ್ಗೆ ಪರಿಶೀಲನೆ
  • ದಸರಾ ಮುಗಿದ ಬಳಿಕ ಮೈಸೂರು ಅಭಿವೃದ್ಧಿ, ದಸರಾ ಟೂರಿಸಂ ಪ್ಯಾಕೇಜ್‌ ಬಗ್ಗೆ ಮುಖ್ಯಮಂತ್ರಿ ಜೊತೆ ಸಭೆ

ಮೈಸೂರು (ಅ.09):  ಮೈಸೂರು (Mysuru) ಅಭಿವೃದ್ಧಿ ಮತ್ತು ದಸರಾ (Dasara) ಪ್ರವಾಸ ಪ್ಯಾಕೇಜ್‌ (Tourism package) ಮಾಡುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಅವರು ಹೇಳಿದ್ದಾರೆ. ದಸರಾ ಮುಗಿದ ಬಳಿಕ ಮೈಸೂರು ಅಭಿವೃದ್ಧಿ, ದಸರಾ ಟೂರಿಸಂ ಪ್ಯಾಕೇಜ್‌ ಬಗ್ಗೆ ಮುಖ್ಯಮಂತ್ರಿ ಜೊತೆ ಸಭೆ ನಡೆಸಲಾಗುವುದು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ತಿಳಿಸಿದರು.

ಮೈಸೂರು ಅರಮನೆ (Mysuru palace) ಬಳಿ ದಸರಾ ಗಜಪಡೆಗೆ ಶುಕ್ರವಾರ ನಡೆದ ಕುಶಾಲತೋಪು ತಾಲೀಮು ವೀಕ್ಷಣೆ ಬಳಿಕ ಮಾತನಾಡಿದ ಅವರು, ದಸರಾ ಉದ್ಘಾಟನೆ ಸಂದರ್ಭದಲ್ಲಿ ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರು ನೀಡಿದ ದಸರಾ ಟೂರ್‌ ಪ್ಯಾಕೇಜ್‌ ಸಲಹೆ ಕುರಿತು ದಸರಾ ಮುಕ್ತಾಯದ ಬಳಿಕ ಮುಖ್ಯಮಂತ್ರಿಗಳು ಸಭೆ ನಡೆಸಿ ಪರಾಮರ್ಶಿಸಲಿದ್ದಾರೆ ಎಂದರು.

Latest Videos

undefined

ಮೈಸೂರು : ಅ.10 ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಾರ್ಯಕ್ರಮ

ಚಿತ್ರನಗರಿ ಮೈಸೂರಿಗೆ ಬಂದಿದ್ದು ಅದನ್ನು ಅನುಷ್ಠಾನ ಮಾಡುವುದು, ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ಎಸ್‌.ಎಂ. ಕೃಷ್ಣ ಅವರು ನೀಡಿದ ಟೂರಿಸಂ ಕುರಿತು ಕಾರ್ಯಕ್ರಮ ರೂಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಟೂರಿಸಂಗೆ ಸಂಬಂಧಿಸಿದಂತೆ ಮೈಸೂರು, ಚಾಮರಾಜನಗರ (Chamarajanagar) ಸುತ್ತಮುತ್ತಲಿನ ಅಧಿಕಾರಿಗಳು ವರದಿ ಸಿದ್ಧಪಡಿಸಲಿದ್ದು, ಅವರ ಜೊತೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ದಸರಾ ವೀಕ್ಷಣೆಗೆ 500 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೋವಿಡ್‌ (Covid) ನಿಯಮ ಮೀರುವಂತಿಲ್ಲ. ಸಾರ್ವಜನಿಕರು ಫೇಸ್‌ಬುಕ್‌ (facebook), ಯೂಟ್ಯೂಬ (Youtube)…, ವರ್ಚುವಲ್(virtual)  ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ ಎಂದರು.

ಇನ್ನು 9 ದಿನ ದಸರಾ ಸಂಭ್ರಮ: ರಾಜ್ಯಾದ್ಯಂತ ವಿಭಿನ್ನ ರೀತಿಯಲ್ಲಿ ನವರಾತ್ರಿ ಆಚರಣೆ!

ಆನೆಗಳಿಗೆ (Elephant) ಕುಶಾಲತೋಪು ತಾಲೀಮನ್ನು ನಮ್ಮ ಅಧಿಕಾರಿಗಳು ಅಚ್ಚುಕಟ್ಟಾಗಿ ನೀಡಿದ್ದಾರೆ. ಪ್ರಾಣಾಪಾಯವನ್ನು ಲೆಕ್ಕಿಸದೆ ತರಬೇತಿ ನೀಡುತ್ತಿದ್ದು ಅವರಿಗೆ ವಿಮೆ ಸೌಲಭ್ಯ (Insurance) ಕೂಡ ಕಲ್ಪಿಸಲಾಗಿದೆ. ಆನೆಗಳಿಗೆ ಪ್ರಾಮಾಣಿಕ ತರಬೇತಿ ನೀಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌, ಜಂಗಲ್‌ ಲಾಡ್ಜ್‌ ಅಧ್ಯಕ್ಷ ಅಪ್ಪಣ್ಣ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ…, ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿ ಗೀತಾ ಪ್ರಸನ್ನ, ಡಿಸಿಎಫ್‌ ಕರಿಕಾಳನ್‌ ಮೊದಲಾದವರು ಇದ್ದರು.

click me!