ಅರಮನೆ ಸುತ್ತಾ ಏಕಮುಖ ವಾಹನ ಸಂಚಾರ ವ್ಯವಸ್ಥೆ :ವಾಹನ ನಿಲುಗಡೆಗೆ ನಿಷೇಧ

By Sujatha NR  |  First Published Oct 7, 2022, 4:50 AM IST

ದಸರಾ ಮಹೋತ್ಸವದ ದೀಪಾಲಾಂಕಾರವನ್ನು ಅ.10 ರವರೆಗೆ ವಿಸ್ತರಿಸಿರುವುದರಿಂದ ವಾಹನಗಳ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ವಾಹನಗಳ ಸಂಚಾರ ಮತ್ತು ವಾಹನಗಳ ನಿಲುಗಡೆ ವ್ಯವಸ್ಥೆಯಲ್ಲಿ ಈ ಕೆಳಕಂಡ ನಿರ್ಬಂಧಗಳನ್ನು ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ವಿಧಿಸಿದ್ದಾರೆ.


 ಮೈಸೂರು (ಅ.07) :ದಸರಾ ಮಹೋತ್ಸವದ ದೀಪಾಲಾಂಕಾರವನ್ನು ಅ.10 ರವರೆಗೆ ವಿಸ್ತರಿಸಿರುವುದರಿಂದ ವಾಹನಗಳ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ವಾಹನಗಳ ಸಂಚಾರ ಮತ್ತು ವಾಹನಗಳ ನಿಲುಗಡೆ ವ್ಯವಸ್ಥೆಯಲ್ಲಿ ಈ ಕೆಳಕಂಡ ನಿರ್ಬಂಧಗಳನ್ನು ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ವಿಧಿಸಿದ್ದಾರೆ.

ಅ.6 ರಿಂದ 10 ರವರೆಗೆ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 11 ಗಂಟೆಯವರೆಗೆ ಅರಮನೆಯ (Palace) ಸುತ್ತಲಿನ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಿದ್ದು, ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ - ಕುಸ್ತಿ ಅಖಾಡ ಜಂಕ್ಷನ್‌- ಬಿ.ಎನ್‌. ರಸ್ತೆ - ಜಯಚಾಮರಾಜ ಒಡೆಯರ್‌ ವೃತ್ತ- ಆಲ್ಬರ್ಚ್‌ ವಿಕ್ಟರ್‌ ರಸ್ತೆ- ಚಾಮರಾಜ ವೃತ್ತ- ಕೆ.ಆರ್‌. ವೃತ್ತ- ನ್ಯೂ ಸಯ್ಯಾಜಿರಾವ್‌ ರಸ್ತೆ - ಬಸವೇಶ್ವರ ವೃತ್ತ - ಚಾಮರಾಜ ಜೋಡಿ ರಸ್ತೆ - ಶಿವರಾತ್ರಿ ರಾಜೇಂದ್ರ ವೃತ್ತ.

Tap to resize

Latest Videos

ಈ ರಸ್ತೆಗಳಲ್ಲಿ (Road) ಅರಮನೆಯನ್ನು ಮಧ್ಯ ಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ (ಆಂಟಿ ಕ್ಲಾಕ್‌ ವೈಸ್‌) ವಾಹನಗಳು ಸಂಚರಿಸಲು ಅವಕಾಶ ನೀಡಿರುತ್ತದೆ. ಈ ರಸ್ತೆಗಳಲ್ಲಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿನಲ್ಲಿ (ಕ್ಲಾಕ್‌ ವೈಸ್‌) ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. (ಬಸವೇಶ್ವರ ವೃತ್ತದಿಂದ ಪೂರ್ವಕ್ಕೆ ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತದವರೆಗಿನ ರಸ್ತೆ ಹೊರತುಪಡಿಸಿ)

ನ್ಯೂ ಸಯ್ಯಾಜಿರಾವ್‌ ರಸ್ತೆ, ಕೆ.ಆರ್‌. ವೃತ್ತದಿಂದ ವಿಶ್ವೇಶ್ವರಯ್ಯ ವೃತ್ತ- ಕೆ.ಆರ್‌. ವೃತ್ತದಿಂದ ನ್ಯೂ ಸಯ್ಯಾಜಿರಾವ್‌ ರಸ್ತೆಯಲ್ಲಿ ಬರುವಂತಹ ವಾಹನಗಳು (Vehicle) ಬಾಟಾ ಜಂಕ್ಷನ್‌ - ವಿಶ್ವೇಶ್ವರಯ್ಯ ವೃತ್ತ - ಇರ್ವಿನ್‌ ರಸ್ತೆ - ನೆಹರು ವೃತ್ತ - ಅಶೋಕ ರಸ್ತೆ - ಮಹಾವೀರ ವೃತ್ತ - ಚಾಮರಾಜ ವೃತ್ತ - ಕೆ.ಆರ್‌. ವೃತ್ತ. ಈ ರಸ್ತೆಗಳ ಮಧ್ಯ ಇರುವ ಪ್ರದೇಶವನ್ನು ಮಧ್ಯ ಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಾಹನಗಳು ಸಂಚರಿಸಲು ಅವಕಾಶ ನೀಡಿರುತ್ತದೆ. ಗಡಿಯಾರದ ಮುಳ್ಳು ಸುತ್ತುವ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸದಂತೆ ನಿರ್ಬಂಧಿಸಲಾಗಿದೆ.

ಅಶೋಕ ರಸ್ತೆಯಲ್ಲಿ ದಾವೂದ್‌ಖಾನ್‌ ರಸ್ತೆ ಜಂಕ್ಷನ್‌ (ಗಾಂಧಿ ಮೆಡಿಕಲ್ಸ್‌) ಯಿಂದ ನೆಹರು ಸರ್ಕಲ್‌ವರೆಗೆ ದಕ್ಷಿಣಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿರುತ್ತದೆ. ಅಶೋಕ ರಸ್ತೆಯಲ್ಲಿ ನೆಹರು ಸರ್ಕಲ್‌ನಿಂದ ದಾವೂದ್‌ ಖಾನ್‌ ರಸ್ತೆ ಜಂಕ್ಷನ್‌ವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಬನುಮಯ್ಯ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ನಿಂದ ಬನುಮಯ್ಯ ಚೌಕದ ವರೆಗೆ- ಚಾಮರಾಜ ಜೋಡಿ ರಸ್ತೆಯಿಂದ ಬನುಮಯ್ಯ ಚೌಕದವರೆಗೆ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿರುತ್ತದೆ. ಬನುಮಯ್ಯ ಚೌಕದಿಂದ ಚಾಮರಾಜ ಜೋಡಿ ರಸ್ತೆವರೆಗೆ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ತ್ಯಾಗರಾಜ ರಸ್ತೆಯಲ್ಲಿ ಎನ್‌. ಮಾಧವರಾವ್‌ ವೃತ್ತ (ಅಗ್ರಹಾರ ವೃತ್ತ) ದಿಂದ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ವರೆಗೆ- ಅಗ್ರಹಾರ ವೃತ್ತದಿಂದ ಉತ್ತರಕ್ಕೆ ತ್ಯಾಗರಾಜ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆಯವರೆಗೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿರುತ್ತದೆ. ಚಾಮರಾಜ ಜೋಡಿ ರಸ್ತೆಯಿಂದ ತ್ಯಾಗರಾಜ ರಸ್ತೆಯಲ್ಲಿ ಅಗ್ರಹಾರ ವೃತ್ತದವರೆಗೆ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಚಂದ್ರಗುಪ್ತ ರಸ್ತೆಯಲ್ಲಿ ಬಿ.ಎನ್‌. ರಸ್ತೆ ಜಂಕ್ಷನ್‌ನಿಂದ ಅಶೋಕ ರಸ್ತೆ ಜಂಕ್ಷನ್‌ವರೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿದ್ದು, ಅ.10 ರವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ತಾತ್ಕಲಿಕವಾಗಿ ರದ್ದುಗೊಳಿಸಿ ಅಶೋಕ ರಸ್ತೆಯಿಂದ ಬಿ.ಎನ್‌. ರಸ್ತೆ ಜಂಕ್ಷನ್‌ವರೆಗೆ ಪಶ್ಚಿಮದಿಂದ ಪೂರ್ವ ದಿಕ್ಕಿಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಎಫ್‌ಕೆ ಇರಾನಿ ವೃತ್ತದಿಂದ ಚಿರಾಗ್‌ ಹೋಟೆಲ್‌ ಜಂಕ್ಷನ್‌ವರೆಗೆ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಚಿರಾಗ್‌ ಹೋಟೆಲ್‌ ಜಂಕ್ಷನ್‌ನಿಂದ ಎಫ್‌.ಕೆ. ಇರಾನಿ ವೃತ್ತದವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿರುತ್ತದೆ.

ವಾಹನ ನಿಲುಗಡೆಗೆ ನಿಷೇಧ

ಹಾಗೆಯೇ, ಅ.6 ರಿಂದ 10 ರವರೆಗೆ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 11 ಗಂಟೆಯವರೆಗೆ ಮೈಸೂರು ಅರಮನೆಯ ಸುತ್ತಲಿನ ರಸ್ತೆಗಳಾದ ಬಿ.ಎನ್‌. ರಸ್ತೆ, ಎ.ವಿ. ರಸ್ತೆ, ಸಯ್ಯಾಜಿರಾವ್‌ ರಸ್ತೆ, ಪುರಂದರ ರಸ್ತೆಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ರಮಾವಿಲಾಸ ರಸ್ತೆಯಲ್ಲಿ ಎಂಡಿಎ ಜಂಕ್ಷನ್‌ನಿಂದ ಬನುಮಯ್ಯ ಕಾಲೇಜು ಜಂಕ್ಷನ್‌ವರೆಗೆ, ನ್ಯೂ ಸಯ್ಯಾಜಿರಾವ್‌ ರಸ್ತೆಯಲ್ಲಿ ಬಸವೇಶ್ವರ ವೃತ್ತದಿಂದ ಅಗ್ರಹಾರ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಅಗ್ರಹಾರ ವೃತ್ತದಿಂದ ಸಿದ್ದಪ್ಪ ಚೌಕದವರೆಗೆ ರಸ್ತೆಯ ಎಡ ಭಾಗದಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಜೆಎಲ್‌ಬಿ ರಸ್ತೆಯಲ್ಲಿ ಶ್ರೀನಿವಾಸ ವೃತ್ತದದಿಂದ ಎಲೆ ತೋಟ ಜಂಕ್ಷನ್‌ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಅಶೋಕ ರಸ್ತೆಯಲ್ಲಿ ಮಿಲಾದ್‌ ಪಾರ್ಕ್ ಜಂಕ್ಷನ್‌ನಿಂದ ಹರ್ಷ ರಸ್ತೆ ಜಂಕ್ಷನ್‌ವರೆಗೆ ಹಾಗೂ ಗಾಂಧಿ ಚೌಕದ ಸುತ್ತಲಿನಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ, ಓಲ್ಡ್‌ ಬ್ಯಾಂಕ್‌ ರಸ್ತೆಯಲ್ಲಿ ಗಾಂಧಿ ಚೌಕದಿಂದ ಸಯ್ಯಾಜಿರಾವ್‌ ರಸ್ತೆ ಜಂಕ್ಷನ್‌ವರೆಗೆ, ಚಂದ್ರಗುಪ್ತ ರಸ್ತೆಯಲ್ಲಿ ಅಶೋಕ ರಸ್ತೆ ಜಂಕ್ಷನ್‌ ನಿಂದ ಬಿ.ಎನ್‌ ರಸ್ತೆ ಜಂಕ್ಷನ್‌ವರೆಗೆ, ನೆಹರು ವೃತ್ತದಿಂದ (ಮಿನಿ ವಿಧಾನಸೌಧ ರಸ್ತೆ ಮೂಲಕ) ನೇಮಿನಾಥ ಸ್ಟೀಲ್‌ ಜಂಕ್ಷನ್‌ವರೆಗೆ, ಬಿ.ಎನ್‌ ರಸ್ತೆ, ಹೈದರಾಲಿ ಖಾನ್‌ ವೃತ್ತ (ಫೈವ್‌ಲೈಟ್‌ ಸರ್ಕಲ್‌) ದಿಂದ ಸೆಂಟ್ರಲ್‌ ಮಾಲ್‌ (ಛತ್ರಿ ಮರ) ಜಂಕ್ಷನ್‌ವರೆಗೆ, ಜೆ.ಕೆ. ಗ್ರೌಂಡ್‌ ಜಂಕ್ಷನ್‌ನಿಂದ ಟಿ.ಎನ್‌. ನರಸಿಂಹಮೂರ್ತಿ ವೃತ್ತದವರೆಗೆ, ಡಾ. ರಾಜಕುಮಾರ್‌ ವೃತ್ತ (ಫೌಂಟನ್‌ ವೃತ್ತ) ದಿಂದ ಬನ್ನಿಮಂಟಪ ರಸ್ತೆ ಮಾರ್ಗವಾಗಿ ನಾಡಪ್ರಭು ಕೆಂಪೇಗೌಡ ವೃತ್ತದವರೆಗೆ, ಸರ್ಕಾರಿ ಭವನದ ರಸ್ತೆಯಲ್ಲಿ, ಸರ್ಕಾರಿ ಭವನದ ದಕ್ಷಿಣ ದ್ವಾರದ ಜಂಕ್ಷನ್‌ನಿಂದ ದಕ್ಷಿಣಕ್ಕೆ ಜಯಚಾಮರಾಜೇಂದ್ರ ಒಡೆಯರ್‌ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

click me!