ಹೊಸಕೋಟೆ (ನ.13): ಒಬ್ಬ ಮನುಷ್ಯನ ರಕ್ತವನ್ನು (blodd) ಇನ್ನೊಬ್ಬರ ಜೀವ ಉಳಿಸುವ ಜೊತೆಗ ಅದರ ಬಿಳಿ ರಕ್ತ (white Blood cells) ಹಾಗೂ ಪ್ಲಾಸ್ಮಾ (Plasma) ಅಂತಹ ಅಂಶಗಳಿಂದ ಮೂರು ಜನರ ಜೀವನ ಉಳಿಸಬಹುದು ಎಂದು ಕೆ.ಸಿ.ಜನರಲ್ ಅಸ್ಪತ್ರೆ (Hospital) ವೈದ್ಯಾಧಿಕಾರಿ ಡಾ.ಸುನೀತಾ ಹೇಳಿದರು.
ತಾಲೂಕಿನ ಸೂಲಿಬೆಲೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (Primary Health centre) ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್, ಶ್ರೀ ಮಹರ್ಷಿ ವಾಲ್ಮೀಕಿ ಸೇವಾ ಟ್ರಸ್ಟ್, ಕೆ.ಸಿ.ಜನರಲ್ ಆಸ್ಪತ್ರೆ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ರಕ್ತದಾನ ಶಿಬಿರ (blood Donation Camp) ಕಾರ್ಯಕ್ರಮದಲ್ಲಿ ಮಾತನಾಡಿದರು.
ತನ್ನ ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಪ್ರತಿಫಲಾಕ್ಷೆಯಿಲ್ಲದೇ ಕೊಡುವುದಕ್ಕೆದಾನ ಎನ್ನುವರು. ಒಮ್ಮೆ ದಾನಿಗಳಿಂದ ಸ್ವೀಕರಿಸಿದ ರಕ್ತ 35 ದಿನಗಳವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತದಾನ ಮಾಡುವುದು ಪ್ರತಿ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿದರೆ ಮಾತ್ರ ರೋಗಗ್ರಸ್ಥರು ಮತ್ತು ಗಾಯಗೊಂಡವರ ಬದುಕಿಸಲು ಸಾಧ್ಯ. ರಕ್ತದಾನದಿಂದ (Blood) ಯಾವುದೇ ಅಡ್ಡಪರಿಣಾಮಗಳಿಲ್ಲ ಒಂದೇರೆಡು ವಾರಗಳಲ್ಲಿ ರಕ್ತ ಉತ್ಪತ್ತಿಯಾಗುತ್ತದೆ ಎಂದರು.
ಸೂಲಿಬೆಲೆ ಸರ್ಕಾರಿ ಡಿಗ್ರಿ ಕಾಲೇಜಿನ (College) ಪ್ರಾಚಾರ್ಯ ಡಾ.ಎನ್.ಎ.ಆದಿನಾರಾಯಣ ಮಾತನಾಡಿ, ಸಮುದಾಯದ ಅಭಿವೃದ್ದಿ ಸಹಬಾಗತ್ವದಿಂದ ಮಾತ್ರ ಸಾಧ್ಯ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರೆ ಯಶಸ್ಸು ಕಾಣಬಹುದು ಎಂದರು.
ಸೂಲಿಬೆಲೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ, ಗ್ರಾಮಪಂಚಾಯತ್ ಉಪಾಧ್ಯಕ್ಷ ಶಿವರುದ್ರಪ್ಪ, ಮುಖಂಡರಾದ ಅಲ್ತಾಪ್, ಶ್ರೀಮಹರ್ಷಿ ವಾಲ್ಮೀಕಿ ಟ್ರಸ್ಟ್ ಅದ್ಯಕ್ಷ ಎಸ್.ಕೆ.ರವಿಕಿರಣ್, ಜೇನುಗೂಡು ಟ್ರಸ್ಟ್ ನಿರ್ದೇಶಕ ಎನ್.ಸುರೇಶ್, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಮರವೆಕೃಷ್ಣಪ್ಪ, ಸದಸ್ಯರಾದ ಸಾಬಿರ್, ಗ್ರಾಪಂ ಕಾರ್ಯದರ್ಶಿ ಶ್ರೀನಿವಾಸ್, ಲೆಕ್ಕಿಗ ರಂಗಸ್ವಾಮಿ ಇತರರು ಇದ್ದರು.
ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಬೇಕು :
ದೇಶಾದ್ಯಂತ ಕೊರೋನಾ ಹಾವಳಿ ಮಿತಿ ಮೀರಿದೆ. ನಿಯಂತ್ರಣ ಮೀರಿರುವ ಈ ಮಹಾಮಾರಿಯಿ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಸರ್ಕಾರಗಳು ಕಠಿಣ ಕ್ರಮ ಕೈಗೊಂಡಿವೆ. ಹೀಗಿದ್ದರೂ ಕೊರೋನಾ ಪ್ರಕರಣಗಳು ಮಾತ್ರ ಇಳಿಕೆಯಾಗುತ್ತಿಲ್ಲ. ಇಷ್ಟೇ ಅಲ್ಲದೇ ಎರಡನೇ ಕೊರೋನಾ ಅಲೆ ಎಂಟ್ರಿ ಕೊಟ್ಟಾಗಿನಿಂದ ಔಷಧ ಹಾಗೂ ಆಮ್ಲಜನಕ ಕೊರತೆಯುಂಟಾಗಿದ್ದು, ಸರ್ಕಾರಕ್ಕೆ ಮತ್ತೊಂದು ತಲೆ ನೋವಾಗಿದೆ. ಈ ಸಾವು, ನೋವಿನ ನಡುವೆಯೇ ಕೊರೋನಾ ನಿಯಂತ್ರಿಸಲು ಲಸಿಕೆ ಅಭಿಯಾನ ಮುಂದುವರೆದಿದೆ. ಈವರೆಗೆ ನಲ್ವತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗಷ್ಟೇ ಸೀಮಿತವಾಗಿದ್ದ ಲಸಿಕೆ, ಮೇ 1 ರಿಂದ ಹದಿನೆಂಟು ವರ್ಷದಿಂದ 45ರ ವಯೋಮಾನದ ಮೇಲಿನ ಎಲ್ಲರಿಗೂ ನೀಡಲು ಸರ್ಕಾರ ಆದೇಶಿಸಿದೆ.
ಕೊರೋನಾ ತಾಂಡವ: ಯಾವ ಮಾಸ್ಕ್ ಎಷ್ಟು ಸೇಫ್? ಇಲ್ಲಿದೆ ವಿವರ
ಆದರೀಗ ಈ ಆದೇಶ ಹೊರಬಿದ್ದ ಬೆನ್ನಲ್ಲೇ ರಕ್ತದಾನ ಮಾಡುವ ಬಗ್ಗೆ ಮಹತ್ವದ ಸಂದೇಶವೊಂದು ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಸೌಂಡ್ ಮಾಡುತ್ತಿದೆ. ಹೌದು ಲಸಿಕೆ ಪಡೆದ ಸುಮಾರು ಎರಡು ತಿಂಗಳವರೆಗೆ ಯಾರೂ ರಕ್ತದಾನ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ(NBTC) ಇತ್ತೀಚೆಗಷ್ಟೇ ಈ ಸಂಬಂಧ ಮಾರ್ಗಸೂಚಿ ಹೊರಡಿಸಿದ್ದು, ಇದರಲ್ಲಿ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದ ದಿನದಿಂದ ಎರಡನೇ ಡೋಸ್ ಪಡೆದ ಇಪ್ಪತ್ತೆಂಟು ದಿನಗಳವರೆಗೆ ಲಸಿಕೆ ಪಡೆದವರು ರಕ್ತದಾನ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ರಕ್ತದಾನ ಯಾಕೆ ಸಾಧ್ಯವಿಲ್ಲ?
ಇನ್ನು ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯುವ ಮಧ್ಯೆ ಸುಮಾರು 28 ದಿನಗಳ ಅಂತರವಿರುತ್ತದೆ. ಹೀಗಿರುವಾಗ ರಕ್ತದಾನ ಮಾಡಲು ಸಾಧ್ಯವಿಲ್ಲದ ಅವಧಿ ಕನಿಷ್ಟ 57 ದಿನಗಳಾಗುತ್ತದೆ. ಲಸಿಕೆ ಪಡೆದ ಬಳಿಕ ಜ್ವರ, ಮೈ-ಕೈ ನೋವು ಸೇರಿ ಇತರ ಕೆಲ ಅಡ್ಡ ಪರಿಣಾಮಗಳು ಕಂಡು ಬರುತ್ತವೆ. ಈ ನಿಟ್ಟಿನಲ್ಲಿ ಲಸಿಕೆ ಪಡೆದ 28 ದಿನಗಳವವರೆಗೆ ರಕ್ತದಾನ ಮಾಡುವುದು ಸೂಕ್ತವಲ್ಲ ಎಂದು ಮಂಡಳಿ ತಿಳಿಸಿದೆ.