ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಪುಂಡರು

By Kannadaprabha News  |  First Published Jun 8, 2021, 8:45 AM IST
  • ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಪುಂಡರು
  • ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ವಿಡಿಯೋ ವೈರಸ್
  • ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅರೆಸ್ಟ್ - ಕೇಸ್ ದಾಖಲು

ರಾಮ​ನ​ಗರ (ಜೂ.08):  ಮೋಜಿಗಾಗಿ ತಮ್ಮ ದೊಡ್ಡಪ್ಪ ಮತ್ತು ಚಿಕ್ಕಪ್ಪನ ಮಕ್ಕಳಿಗೆ ಬಾಡೂಟ ಉಣಬಡಿಸಿ, ಮದ್ಯ ಕುಡಿಸಿ, ಅವರು ಮದ್ಯದ ಅಮಲಿನಲ್ಲಿ ಬೈದಾಡುತ್ತಿರುವ ವಿಡಿಯೋ ಮಾಡಿರುವ ಪುಂಡರು ಅದನ್ನು ಸಾಮಾಜಿಕ ಜಾಲತಾಣಗಳನ್ನು ಹರಿಬಿಟ್ಟು ವಿಕೃತಿ ಮೆರೆದಿದ್ದಾರೆ.

ಕನ​ಕ​ಪುರ ತಾಲೂಕಿನ ಮರ​ಳಿ​ಪುರ ಗ್ರಾಮದ ತೋಟದ ಮನೆ​ಯಲ್ಲಿ ಕೃತ್ಯ ಜರುಗಿದ್ದು, ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತೋಟದ ಮಾಲೀಕನನ್ನು ಬಂಧಿಸಲಾಗಿದೆ.

Tap to resize

Latest Videos

ಲಸಿಕೆ ಹಾಕಿಸಿಕೊಳ್ಳುವವರಿಗೆ ಪುಕ್ಕಟೆ ಬೀಯರ್, ಮತ್ತಷ್ಟು ಆಫರ್! ..

7ರಿಂದ 8 ಮಕ್ಕಳು ಬಾಡೂಟ ಸವಿಯುತ್ತಾ, ಮದ್ಯ ಕುಡಿಯುತ್ತಾ ಬಾಯಿಗೆ ಬಂದ ರೀತಿ ಕೆಟ್ಟಕೆಟ್ಟಪದಗಳನ್ನು ಬಳಸಿ ಮಾತನಾಡುತ್ತಿರುವ ವಿಡಿಯೋ ವೈರಲ್‌ ಆಗಿ, ಸಾಕಷ್ಟುಚರ್ಚೆಗೆ ಗ್ರಾಸವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣದ ತನಿಖೆಗೆ ಮುಂದಾಗಿದ್ದು, ಮಕ್ಕಳು ಆಡುತ್ತಿರುವ ಭಾಷೆಯು ಮಳವಳ್ಳಿ ಭಾಗ​ಕ್ಕೆ ಹೋಲಿಕೆಯಾಗಿದ್ದ ಕಾರಣ ಪತ್ತೆ ಹಚ್ಚುವುದು ಕೊಂಚ ಕಷ್ಟವಾಗಿತ್ತು.

ಲಾಕ್‌ಡೌನ್‌ ಎಫೆಕ್ಟ್‌: ಹೆಚ್ಚಿದ ಅಕ್ರಮ ಮದ್ಯದ ಹಾವಳಿ

ಕೊನೆಗೆ ವ್ಯಕ್ತಿಯೊಬ್ಬರು ಸ್ಥಳವನ್ನು ಗುರುತಿಸಿ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ ಹಾಕಿದ್ದರು. ಕೂಡಲೇ ಪೊಲೀಸರು ತೋಟದ ಮನೆ ಮಾಲೀಕ ಗಣೇಶ್‌ನನ್ನು ಬಂಧಿಸಿದ್ದು, ಗಣೇಶ್‌ ಸೇರಿದಂತೆ ಇದೇ ಗ್ರಾಮದ ಪ್ರಮೋದ್‌, ಸೋಮಸುಂದರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಗಣೇಶ್‌ಗೆ ಕೊರೋನಾ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಆತನನ್ನು ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಲಾಗಿದೆ. ಇನ್ನುಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಡಿವೈಎಸ್ಪಿ ರಮೇಶ್‌ ಪ್ರತಿ​ಕ್ರಿಯೆ ನೀಡಿ​ದ್ದಾ​ರೆ.

click me!