ಕೇರಳ ವಿಧಾನಸಭೆಯಲ್ಲಿ ಕನ್ನಡ ಕಾವ್ಯ ಹೇಳಿದ ಶಾಸಕ ಅಶ್ರಫ್‌!

By Kannadaprabha NewsFirst Published Jun 8, 2021, 7:02 AM IST
Highlights
  • ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಮಂಜೇಶ್ವರದ ಶಾಸಕ
  • ವಿಧಾನಸಭೆಯಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಕಾವ್ಯದ ಸಾಲು ಹಾಡಿದ  ಶಾಸಕ ಎ.ಕೆ.ಎಂ. ಅಶ್ರಫ್‌  
  • ಇಲ್ಲಿ ಕನ್ನಡ ಕವಿಯೊಬ್ಬರ ಕಾವ್ಯದ ಸಾಲುಗಳನ್ನು ಯಾರೂ ಹೇಳಿರಲಿಲ್ಲ. 

ಮಂಗಳೂರು (ಜೂ.08): ಇತ್ತೀಚೆಗಷ್ಟೆ ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಮಂಜೇಶ್ವರದ ಶಾಸಕ ಎ.ಕೆ.ಎಂ. ಅಶ್ರಫ್‌ ಇದೀಗ ವಿಧಾನಸಭೆಯಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಕಾವ್ಯದ ಸಾಲುಗಳನ್ನು ಕಾವ್ಯಮಯವಾಗಿ ಪ್ರಸ್ತುತಪಡಿಸಿ ಗಮನ ಸೆಳೆದಿದ್ದಾರೆ. 

ಇದುವರೆಗೂ ಕೇರಳ ವಿಧಾನಸಭೆಯ ಕಲಾ​ಪ​ದಲ್ಲಿ ಪಾಲ್ಗೊಂಡ ಸಂದರ್ಭ ಕನ್ನಡ ಕವಿಯೊಬ್ಬರ ಕಾವ್ಯದ ಸಾಲುಗಳನ್ನು ಯಾರೂ ಹೇಳಿರಲಿಲ್ಲ. 

ಕೇರಳ ಅಸೆಂಬ್ಲೀಲಿ ಕನ್ನಡಲ್ಲಿ ಶಾಸಕ ಅಶ್ರಫ್‌ ಪ್ರಮಾಣ! ..

ಅಶ್ರಫ್‌ ಈ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಗೋವಿಂದ ಪೈ ಅವರು ರಚಿಸಿದ ‘ಹೆಬ್ಬೆರಳು’ ನಾಟಕದಲ್ಲಿ ಬರುವ ‘ನಾವು ನೀವೆಂಬ ಹಳೆಬೇರು ಅಳಿಸು, ಸರಿಸಮಾನ ಸೌಂದರ್ಯದಿ ಸೌಹಾರ್ದದಿ ಐಕ್ಯತೆಯಿಂದ ಐಕ್ಯಮಂತ್ರದಿ ಬಾಳುವುದೇ ತಾಯ ಇಳೆಯ ಹೆಬ್ವಳಿಕೆಯ ಮರ್ಮ’ ಎನ್ನುವ ಕಾವ್ಯಮಯ ಸಾಲುಗಳನ್ನು ರಸವತ್ತಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಧಾರ್ಮಿಕ ಸೌಹಾರ್ದತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕವಿಯ ಕಾವ್ಯದ ಸಾಲುಗಳು ಅಭಿಮಾನ ಮೂಡಿಸುವಂತಿವೆ ಎಂದೂ ವಿವರಿಸಿದ್ದಾರೆ.

ಗೋವಿಂದ ಪೈಗಳು ಮಂಜೇಶ್ವರದವರು. ಅಶ್ರಫ್‌ ಕೂಡ ಅದೇ ಕ್ಷೇತ್ರದಿಂದ ಶಾಸಕರಾದವರು. ಗಡಿನಾಡ ಕನ್ನಡಿಗ ಕವಿಯ ಸಾಲನ್ನು ಅದೇ ಪ್ರದೇಶದ ಶಾಸಕ ವಾಚಿಸಿದ್ದು ವಿಶೇಷ.

click me!