ವೃದ್ದೆಯ ಶವವನ್ನು ನೆರೆ ನೀರಿನ ನಡುವೆ, ಹೊತ್ತುಸಾಗುವ ವಿಡಿಯೋ ಕರಾವಳಿ ಭಾಗದಲ್ಲಿ ವೈರಲ್ ಆಗಿದೆ. ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಮಟ್ಟು ಪರಿಸರದಲ್ಲಿ ಕಂಡುಬಂದ ಈ ದೃಶ್ಯ, ಈ ಭಾಗದ ಜನರ ಗಂಭೀರ ಸಮಸ್ಯೆಯತ್ತ ಬೆಳಕು ಚೆಲ್ಲಿದೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ (ಜು.03): ವೃದ್ದೆಯ ಶವವನ್ನು ನೆರೆ ನೀರಿನ ನಡುವೆ, ಹೊತ್ತುಸಾಗುವ ವಿಡಿಯೋ ಕರಾವಳಿ ಭಾಗದಲ್ಲಿ ವೈರಲ್ ಆಗಿದೆ. ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಮಟ್ಟು ಪರಿಸರದಲ್ಲಿ ಕಂಡುಬಂದ ಈ ದೃಶ್ಯ, ಈ ಭಾಗದ ಜನರ ಗಂಭೀರ ಸಮಸ್ಯೆಯತ್ತ ಬೆಳಕು ಚೆಲ್ಲಿದೆ. ನೆರೆಪೀಡಿತ ದೇವರಕುದ್ರು ಗ್ರಾಮಸ್ಥರು, ಮಳೆಗಾಲದಲ್ಲಿ ಎದುರಿಸುವ ಸಂಕಷ್ಟಕ್ಕೆ ಕನ್ನಡಿ ಹಿಡಿದಿದೆ. ಅದು ಸುತ್ತಲೂ ನೀರು, ನಡುವೆ ಭೂಭಾಗ ಇರುವ ಊರು. ಕರಾವಳಿ ಭಾಗದಲ್ಲಿ ಇದನ್ನು ಕುದ್ರು ಎಂದರೆ ಇತರ ಕಡೆಗಳಲ್ಲಿ ಇಂತಹಾ ಭೂಭಾಗವನ್ನು ನಡುಗೆಡ್ಡೆ ಎಂದು ಕರೆಯುತ್ತಾರೆ. ಮಳೆಗಾಲ ಆರಂಭವಾದರೆ ಸಾಕು ಇಲ್ಲಿನ ಜನಕ್ಕೆ ಜೀವ ಭಯ ಶುರುವಾಗುತ್ತದೆ.
undefined
ಕಾಪು ತಾಲೂಕಿನ ಮಟ್ಟು ಗ್ರಾಮದಲ್ಲಿ ನೀರಿನಲ್ಲೇ ಹೆಣ ಸಾಗಿಸುವ ದೃಶ್ಯ ಕಂಡ ನಂತರ ಈ ಗ್ರಾಮದ ಮೂಲಭೂತ ಬೇಡಿಕೆಗೊಂದು ಮುನ್ನೆಲೆಗೆ ಬಂದಿದೆ. ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಈಗೇನೋ ಮಳೆಗೆ ಪಂಚ ವಿರಾಮ ಸಿಕ್ಕಿದೆ. ಆದರೆ ಮಳೆಯಿಂದಾಗಿ ಉಂಟಾದ ಒಂದೊಂದೇ ಅದ್ವಾನಗಳು ಬೆಳಕಿಗೆ ಬರುತ್ತಿದೆ. ಮಳೆಗಾಲ ಆರಂಭವಾದರೆ ಸಾಕು ಒಂದೊಂದೇ ಸಮಸ್ಯೆಗಳು ಬಯಲಾಗುತ್ತದೆ. ನದೀತೀರದಲ್ಲಿ ಮನೆ ಕಟ್ಟಿಕೊಂಡಿರುವ ಜನರ ಪರಿಸ್ಥಿತಿ ಬಹಳ ಕಷ್ಟಕರವಾಗಿದೆ. ಕಾಪು ತಾಲೂಕಿನ ಮಟ್ಟು ಗ್ರಾಮದ ದೇವರಕುದ್ರು ವಿನ ಜನರ ಮೂಲಭೂತ ಬೇಡಿಕೆಯಾದ ರಸ್ತೆ ಸಮಸ್ಯೆ ಬಹುಕಾಲದಿಂದ ಬಗೆಹರಿಯದೆ ಬಾಕಿ ಉಳಿದಿದೆ.
ಕಾಂಗ್ರೆಸ್ ಬಿಜೆಪಿ ಮತ ಬ್ಯಾಂಕ್ ಲೆಕ್ಕಾಚಾರ, ಕಾಪುವಿನಲ್ಲಿ ಕಡಲು ಕೊರೆತ ನಿರಂತರ!
ರಸ್ತೆ ಸಮಸ್ಯೆಯಿಂದಾಗಿ, ಮಳೆ ನೀರಿನಲ್ಲೇ ಮೃತದೇಹದ ಅಂತಿಮ ಮೆರವಣಿಗೆ ಮಾಡಲಾಗಿದೆ. ವಯೋಸಹಜ ಅನಾರೋಗ್ಯದಿಂದ ಬೇಬಿ ಪೂಜಾರ್ತಿ ಎಂಬ ಮಹಿಳೆ ಮೃತಪಟ್ಟಿದ್ದು, ಮನೆಗೆ ತೆರಳುವ ಕಚ್ಚಾ ರಸ್ತೆಯಲ್ಲಿ ಸಂಪೂರ್ಣವಾಗಿ ನದಿ ನೀರು ತುಂಬಿಕೊಂಡಿತ್ತು. ಕೆಸರುಮಯವಾಗಿದ್ದ ಕಚ್ಚಾ ರಸ್ತೆಯಲ್ಲಿ ಆಂಬುಲೆನ್ಸ್ ಬರುವ ಪರಿಸ್ಥಿತಿ ಇರಲಿಲ್ಲ. ಮೃತದೇಹವನ್ನು ಕುಟುಂಬಸ್ಥರು ಎತ್ತಿಕೊಂಡೇ ಹೋಗಿದ್ದಾರೆ. ಅದಕ್ಕೂ ಮುನ್ನಾ ದಿನ ರಾತ್ರಿ ಆರೋಗ್ಯದಲ್ಲಿ ಏರುಪೇರಾದಾಗಲೂ ಆಸ್ಪತ್ರೆ ಸಾಗಿಸುವುದಕ್ಕೆ ವಾಹನ ಸಿಗದೇ ಸಮಸ್ಯೆ ಆಗಿತ್ತಂತೆ.ಕಚ್ಚಾ ರಸ್ತೆಯನ್ನು ಕಾಂಕ್ರೀಟೀಕರಣ ಗೊಳಿಸುವಂತೆ ಸ್ಥಳೀಯರು ಬಹಳ ಹಿಂದಿನಿಂದ ಬೇಡಿಕೆ ಇಡುತ್ತಾ ಬಂದಿದ್ದಾರೆ.
ಅನಾರೋಗ್ಯವಾದರೆ ಕಷ್ಟ. ಮಳೆಗಾಲದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಸಂಕಷ್ಟ. ಇನ್ನು ಜನಸಾಮಾನ್ಯರು ಓಡಾಡಲು ಬಹಳ ಕಷ್ಟಪಡುತ್ತಿದ್ದಾರೆ. ಕೂಡಲೇ ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ. ಪಾಂಗಾಳ ಕಡೆಯಿಂದ ಹರಿದು ಬರುವ ಪಾಪನಾಶಿನಿ ನದಿಯು, ಸಮುದ್ರವನ್ನು ಸೇರುವ ತವಕದಲ್ಲಿರುತ್ತದೆ. ಹಾಗಾಗಿ ಈ ಭಾಗದಲ್ಲಿ ನದಿ ನೀರು ಹರಿಯುವಾಗ ಉಗ್ರ ಸ್ವರೂಪ ತಾಳುತ್ತದೆ. ಗಾಳಿ ಇದ್ದರೆ ಕೇಳೋದೇ ಬೇಡ; ನೆರೆ ಉಂಟಾಗುತ್ತದೆ. ನೆರೆ ಬಂದರೆ ಜನರು ದೋಣಿಯನ್ನೇ ಆಶ್ರಯಿಸಬೇಕು.
ಅಂದು ಶಾನುಭೋಗರು ಇಂದು ಲೆಕ್ಕಪರಿಶೋಧಕರು, Udupiಯಲ್ಲೊಂದು CA ಕುಟುಂಬ!
ಹಿಂದೆಲ್ಲಾ ದೋಣಿಯಲ್ಲಿ ಓಡಾಟ ನಡೆಸಿ ಇಲ್ಲಿನ ಜನರಿಗೆ ಅಭ್ಯಾಸವಿತ್ತು. ಆದರಿಗ ದೋಣಿ ಸಂಚಾರ ಸ್ಥಗಿತವಾಗಿದೆ. ಎರಡು ವರ್ಷಗಳ ಹಿಂದೆ ಕಚ್ಚಾ ರಸ್ತೆ ನಿರ್ಮಿಸಿ ಅರ್ಧಕ್ಕೆ ಕಾಂಕ್ರೀಟ್ ಹಾಕಿ ಬಿಡಲಾಗಿದೆ. ನದಿ ಮತ್ತು ಸಮುದ್ರ ತೀರದ ಮನೆಗಳಲ್ಲಿ ವಾಸ ಮಾಡುವ ಜನರಿಗೆ ರಸ್ತೆ ಸಮಸ್ಯೆ ಸಾಮಾನ್ಯ! ಉಡುಪಿ ಜಿಲ್ಲೆಯ ಐದು ತಾಲೂಕಿನಲ್ಲೂ ಈ ಸಮಸ್ಯೆ ಇದೆ. ಇರುವ ರಸ್ತೆಗಳಿಗೆ ಕಾಂಕ್ರೀಟ್ ಅಥವಾ ಡಾಮರೀಕರಣ ಮಾಡಿದರೆ ಸಾವಿರಾರು ಕುಟುಂಬಗಳಿಗೆ ಉಪಯೋಗ ಆಗಲಿದೆ.