ಗದಗ: ಮೊಮ್ಮಗಳ ನೇತ್ರ ಚಿಕಿತ್ಸೆಗೆ 5 ಕಿಮೀ ಸೈಕಲ್‌ ತುಳಿದ ವೃದ್ಧ!

Kannadaprabha News   | Asianet News
Published : May 29, 2021, 03:16 PM IST
ಗದಗ: ಮೊಮ್ಮಗಳ ನೇತ್ರ ಚಿಕಿತ್ಸೆಗೆ 5 ಕಿಮೀ ಸೈಕಲ್‌ ತುಳಿದ ವೃದ್ಧ!

ಸಾರಾಂಶ

* ಲಾಕ್‌ಡೌನ್‌ ಪರಿಣಾಮ ಖಾಸಗಿ ವಾಹನ ಸಿಗದೇ ಪರದಾಟ * ಸೈಕಲ್‌ನಲ್ಲೇ ಮಗಳು ಹಾಗೂ ಮೊಮ್ಮಗಳನ್ನು ಕರೆದುಕೊಂಡು ಬಂದ ಅಜ್ಜ * ಗದಗ ನಗರದಲ್ಲಿ ನಡೆದ ಘಟನೆ  

ಗದಗ(ಮೇ.29):  ಲಾಕ್‌ಡೌನ್‌ ಪರಿಣಾಮ ವಾಹನ ಸಿಗದೇ ಮೊಮ್ಮಗಳ ನೇತ್ರ ಚಿಕಿತ್ಸೆಗಾಗಿ ವೃದ್ಧನೋರ್ವ ತಾಲೂಕಿನ ಕಳಸಾಪುರ ಗ್ರಾಮದಿಂದ ಮಗಳು ಹಾಗೂ ಮೊಮ್ಮಗಳನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು 5 ಕಿಮೀ ದೂರದ ಗದಗ ನಗರಕ್ಕೆ ಆಗಮಿಸಿದ ಘಟನೆ ಶುಕ್ರವಾರ ನಡೆದಿದೆ.

ಮಹಾಮಾರಿ ಕೊರೋನಾ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಲಾಕ್‌ಡೌನ್‌ ಹೇರಿದ ಹಿನ್ನೆಲೆಯಲ್ಲಿ ಯಾವುದೇ ವಾಹನ ಸಿಗದೇ ಸೈಕಲ್‌ನಲ್ಲೇ ಮಗಳು ಹಾಗೂ ಮೊಮ್ಮಗಳನ್ನು ಕರೆದುಕೊಂಡು ಬಂದಿದ್ದಾರೆ.

ಗದಗನಲ್ಲಿ ಸಂಪೂರ್ಣ ಲಾಕ್‌ಡೌನ್‌: ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಪತಿ ಕರೆತಂದ ಮಹಿಳೆ..!

ಮೊಮ್ಮಗಳ ಕಣ್ಣು ನೋವು ಇತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳುವ ಅವಶ್ಯಕತೆಯಿದ್ದರೂ ಯಾವುದೇ ವಾಹನ ಸಿಗಲಿಲ್ಲ. ಮಗಳು, ಮೊಮ್ಮಗಳೊಂದಿಗೆ ಸೈಕಲ್‌ ಏರಿದರು. ನಗರದಲ್ಲಿ ಸಾಗುವಾಗ ಮಾತ್ರ ಮೊಮ್ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು, ಮಗಳ ಕೈಗೆ ಸೈಕಲ್‌ ಕೊಟ್ಟು ಪಾದಯಾತ್ರೆ ಮೂಲಕ ನಗರದ ಖಾಸಗಿ ಕಣ್ಣಿನ ಆಸ್ಪತ್ರೆ ತಲುಪಿದ್ದಾರೆ. 
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ