ಕಾಂಗ್ರೆಸ್ಸಿಗೆ ಬಂದ ಮೇಲೆ ಸಿದ್ದರಾಮಯ್ಯ ಡಿಎನ್‌ಎ ಬದಲಾಗಿದೆ: ಪ್ರಹ್ಲಾದ ಜೋಶಿ

Kannadaprabha News   | Asianet News
Published : May 29, 2021, 02:00 PM IST
ಕಾಂಗ್ರೆಸ್ಸಿಗೆ ಬಂದ ಮೇಲೆ ಸಿದ್ದರಾಮಯ್ಯ ಡಿಎನ್‌ಎ ಬದಲಾಗಿದೆ: ಪ್ರಹ್ಲಾದ ಜೋಶಿ

ಸಾರಾಂಶ

* ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಸಚಿವ ಜೋಶಿ * ವ್ಯಾಕ್ಸಿನ್‌ಗಳ ಬಗ್ಗೆ ಕಾಂಗ್ರೆಸ್‌ ನಾಯಕರಿಂದ ಅಪಪ್ರಚಾರ  * ಒಂದು ಸುಳ್ಳು 100 ಬಾರಿ ಹೇಳಿ ಸತ್ಯ ಮಾಡುವ ಕಲೆ ರೂಢಿಸಿಕೊಂಡಿರುವ ಸಿದ್ದರಾಮಯ್ಯ

ಹುಬ್ಬಳ್ಳಿ(ಮೇ.29): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಬರುವ ಮುಂಚೆ ಕೆಲವು ಬಾರಿ ಸತ್ಯ ಹೇಳುತ್ತಿದ್ದರು. ಕಾಂಗ್ರೆಸ್‌ ಸೇರಿದ ನಂತರ ಅವರ ಡಿಎನ್‌ಎ ಬದಲಾಗಿದ್ದು, ಒಂದು ಸುಳ್ಳನ್ನು 100 ಬಾರಿ ಹೇಳಿ ಸತ್ಯ ಮಾಡುವ ಕಲೆ ರೂಢಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದ್ದಾರೆ.

ಈ ಕುರಿತು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಭಾರತದಲ್ಲಿ ಕೊರೋನಾ ರೂಪಾಂತರಿ ತಳಿ ಪತ್ತೆಯಾಗಿದೆ ಎಂದಿದ್ದೀರಿ. ಭಾರತದ ತಳಿ ಅಲ್ಲವೆಂದು ದೇಶದ ವಿಜ್ಞಾನಿಗಳು ದೃಢಪಡಿಸಿದ್ದಾರೆ. ಅವರ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಇದು ನಮ್ಮ ವಿಜ್ಞಾನಿಗಳನ್ನು ಅಪಮಾನ ಮಾಡಿದಂತೆ ಎಂದಿದ್ದಾರೆ.

ಅತ್ಯಾಚಾರ ಆರೋಪ: ರಮೇಶ್‌ ಜಾರಕಿಹೊಳಿ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ

ಕೊರೋನಾ ಸೋಂಕು ಹರಡುವಿಕೆ ಅಂತ್ಯಗೊಂಡಿದೆ ಎಂದು ಸರ್ಕಾರ ಎಂದೂ ಭಾವಿಸಿಲ್ಲ. ಜನರಲ್ಲಿ ಜಾಗೃತಿ ಮೂಡಿಸುತ್ತಲೇ ಬಂದಿದ್ದೇವೆ. ಆಮ್ಲಜನಕ ಉತ್ಪಾದನೆಯನ್ನು 900 ಮೆಟ್ರಿಕ್‌ ಟನ್‌ನಿಂದ 9 ಸಾವಿರ ಮೆಟ್ರಿಕ್‌ ಟನ್‌ಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದ್ದಾರೆ.

ವ್ಯಾಕ್ಸಿನ್‌ಗಳ ಬಗೆಗೆ ಕಾಂಗ್ರೆಸ್‌ ನಾಯಕರು ಅಪಪ್ರಚಾರ ಮಾಡಿದಾಗ ಅದರ ವಿರುದ್ಧ ನೀವೇಕೆ ಧ್ವನಿ ಎತ್ತಲಿಲ್ಲ? ಮಾನವೀಯತೆ ಹೊಂದಿದ ನಾಗರಿಕ ಸಮಾಜದ ಎಲ್ಲರೂ ಕೊರೋನಾ ವಿರುದ್ಧ ಹೋರಾಡಬೇಕಿದೆ ಎಂದಿದ್ದಾರೆ ಸಚಿವ ಜೋಶಿ.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC