ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧ ಆಸ್ಪತ್ರೆಗಳಿಗೆ ಅಲೆದು ಸಾವು..!

By Kannadaprabha NewsFirst Published Jul 17, 2020, 10:48 AM IST
Highlights

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಲಾಲ್‌ಬಾಗ್‌ನ ಮಾವಳ್ಳಿಯ 72 ವರ್ಷದ ನಿವಾಸಿ ಚಿಕಿತ್ಸೆ ಲಭಿಸದ ಕಾರಣ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹಿನ್ನೆಲೆ ವೃದ್ಧನನ್ನು ಕರೆದುಕೊಂಡು ಸೌತ್‌ ಸಿಟಿ ಆಸ್ಪತ್ರೆಗೆ ತೆರಳಿದ್ದಾರೆ.

ಬೆಂಗಳೂರು(ಜು.17): ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಲಾಲ್‌ಬಾಗ್‌ನ ಮಾವಳ್ಳಿಯ 72 ವರ್ಷದ ನಿವಾಸಿ ಚಿಕಿತ್ಸೆ ಲಭಿಸದ ಕಾರಣ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹಿನ್ನೆಲೆ ವೃದ್ಧನನ್ನು ಕರೆದುಕೊಂಡು ಸೌತ್‌ ಸಿಟಿ ಆಸ್ಪತ್ರೆಗೆ ತೆರಳಿದ್ದಾರೆ.

ಸೋಂಕು ಇರುವುದರಿಂದ ದಾಖಲು ಮಾಡಿಕೊಂಡಿಲ್ಲ. ನಂತರ ಗಿರಿನಗರದ ಪಲ್ಸ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕೋಣನಕುಂಟೆಯ ಆಸ್ಟ್ರಾ ಆಸ್ಪತ್ರೆಗೂ ಅಲೆದಿದ್ದಾರೆ. ಅಲ್ಲಿಯೂ ದಾಖಲಿಸಿಕೊಂಡಿಲ್ಲ.

2ನೇ ದಿನ ಕಟ್ಟು​ನಿಟ್ಟಿನ ಲಾಕ್‌ಡೌನ್: 9 ಜಿಲ್ಲೆಗಳಲ್ಲಿ ಬಂದೋಬಸ್ತ್ ಬಿಗಿ ಮಾಡಿದ ಪೊಲೀ​ಸರು

ಕಡೆಗೆ ತಲಘಟ್ಟಪುರದ ಖಾಸಗಿ ಆಸ್ಪತ್ರೆಯಲ್ಲಿ .40 ಸಾವಿರ ನೀಡಿದರೆ ದಾಖಲು ಮಾಡಿಕೊಳ್ಳುವುದಾಗಿ ಹೇಳಿದ್ದು, .20 ಸಾವಿರ ಮುಂಗಡವಾಗಿ ಪಡೆದಿದ್ದಾರೆ. ಬುಧವಾರ ತಡರಾತ್ರಿ 11ಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ 12 ಗಂಟೆಗೆ ಮೃತಪಟ್ಟಿದ್ದಾರೆ.

ಚಿಕಿತ್ಸೆ ಸಿಗದೆ ಜೀವ ಹೋಯ್ತು

ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ರಾಜಾಜಿನಗರ ವಾರ್ಡ್‌ 99ರ ಮಂಜುನಾಥ ನಗರದ ನಿವಾಸಿಯಾದ 51 ವರ್ಷದ ಚಂದ್ರಶೇಖರ್‌ ಸಾವನ್ನಪ್ಪಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಕಳೆದ ಮೂರು ದಿನಗಳಿಂದ ಹತ್ತಾರು ಆಸ್ಪತ್ರೆಗಳಿಗೆ ಅಲೆದಾಡಿದ್ದರು.

ಬೆಂಗಳೂರಲ್ಲಿ ಮಾತ್ರ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಸೋಂಕು ಪತ್ತೆ, 70 ಸಾವು

ಅಲ್ಲದೆ ಬುಧವಾರ ಮಧ್ಯರಾತ್ರಿ 2 ಗಂಟೆವರೆಗೂ ಚಂದ್ರಶೇಖರ್‌ ಆಸ್ಪತ್ರೆಗಳಿಗೆ ಅಲೆದಾಡಿದ್ದರು ಎನ್ನಲಾಗಿದೆ. ಆದರೆ ಆಸ್ಪತ್ರೆಗಳು ಕೊರೋನಾ ಸೋಂಕಿನ ಶಂಕೆಯಿಂದ ಚಿಕಿತ್ಸೆ ನೀಡಲು ಮುಂದಾಗಿಲ್ಲ. ನಂತರ ಮನೆಗೆ ಬಂದು ತಮ್ಮ ಪರಿಸ್ಥಿತಿ ನೆನೆದು ಅವರು ಗಳಗಳನೆ ಅತ್ತಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದ ನೋವಿನಲ್ಲಿದ್ದ ಅವರು, ಗುರುವಾರ ಬೆಳಗ್ಗೆ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

click me!