ಮನೆಯೊಂದರಲ್ಲಿ ಒಂಟಿ ವೃದ್ಧೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

Kannadaprabha News   | Asianet News
Published : Sep 20, 2021, 02:14 PM IST
ಮನೆಯೊಂದರಲ್ಲಿ ಒಂಟಿ ವೃದ್ಧೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಸಾರಾಂಶ

 ಮನೆಯೊಂದರಲ್ಲಿ ಒಂಟಿ ವೃದ್ಧೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ ಅನಾರೋಗ್ಯದಿಂದಾಗಿ ಕೆಲವು ಸಮಯಗಳಿಂದ ಮನೆಯಲ್ಲಿಯೇ ಇದ್ದ ವೃದ್ಧೆ

ಮೂಡುಬಿದಿರೆ (ಸೆ.20): ಪುರಸಭಾ ವ್ತಾಪ್ತಿಯ ಒಂಟಿಕಟ್ಟೆಯ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ವೃದ್ಧೆಯ ಶವ ಭಾನುವಾರ ಪತ್ತೆಯಾಗಿದೆ. ಒಂಟಿಕಟ್ಟೆಯ ನಿವಾಸಿ, ಮೂಲತಃ ತಮಿಳುನಾಡಿನ ಸರೋಜಿನಿ ಮೃತರು. 

ಅವರ ಇಬ್ಬರು ಪುತ್ರರು ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇಬ್ಬರು ಪುತ್ರಿಯರು ಮದುವೆಯಾಗಿ ತಮಿಳುನಾಡಿನಲ್ಲಿ ನೆಲೆಸಿದ್ದರಿಂದ ಒಂಟಿಕಟ್ಟೆಯ ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. 

ಸಾವಿನ ಬಂಗಲೆ.. ಒಂದೊಂದು ಕೋಣೆಯಲ್ಲಿ ಒಂದೊಂದು ಶವ.. ಆ ದಿನ ಏನಾಗಿತ್ತು?

ಹಿಂದೆ ಮೂಡುಬಿದಿರೆ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ನಡೆಸುತ್ತಿದ್ದ ಸರೋಜಿನಿ ಅವರು ಅನಾರೋಗ್ಯದಿಂದಾಗಿ ಕೆಲವು ಸಮಯಗಳಿಂದ ಮನೆಯಲ್ಲಿಯೇ ಇದ್ದು, ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು.

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು