ಪ್ರವಾಸೋದ್ಯಮಕ್ಕೆ ಬಂಡವಾಳ ಆಕರ್ಷಣೆ: ಸಚಿವ ಆನಂದ್‌ ಸಿಂಗ್‌

By Kannadaprabha News  |  First Published Sep 20, 2021, 1:18 PM IST

*  ಸರ್ಕಾರ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆಸಲಿದೆ 
*  ಕೆಎಸ್‌ಟಿಡಿಯಡಿ ಬರುವ ಹೋಟೆಲ್‌ ಖಾಸಗಿಯವರಿಗೆ ಗುತ್ತಿಗೆ 
*  ಆದಾಯದ ಮಾತ್ರ ಹಂಚಿಕೆ, ಆಸ್ತಿಯೆಲ್ಲ ಕೆಎಸ್‌ಡಿಸಿ ಹೆಸರಿನಲ್ಲೇ ಇರಲಿದೆ 
 


ಹೊಸಪೇಟೆ(ಸೆ.20):  ವಿಷನ್‌ ಕರ್ನಾಟಕ ಯೋಜನೆಯಡಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವ ಚಿಂತನೆ ಸರ್ಕಾರ ಹೊಂದಿದ್ದು, ಈ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬಂಡವಾಳ ಆಕರ್ಷಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ. 

ಬಳ್ಳಾರಿಯಲ್ಲಿ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್‌ಟಿಡಿಯಡಿ ಬರುವ ಹೋಟೆಲ್‌ಗಳನ್ನು ಖಾಸಗಿಯವರಿಗೆ 15ರಿಂದ 30 ವರ್ಷ ಗುತ್ತಿಗೆ ನೀಡುವ ಆಲೋಚನೆ ಹೊಂದಲಾಗಿದೆ. ಈ ಮೂಲಕ ಆರ್ಥಿಕ ಕ್ರೋಡೀಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

Latest Videos

undefined

ಹಂಪಿ ಬೈ ನೈಟ್‌ ಯೋಜನೆಗೆ ಮರುಜೀವ

ಬರೀ ಆದಾಯದ ಹಂಚಿಕೆ ಮಾತ್ರ ಮಾಡಿಕೊಳ್ಳಲಾಗುವುದು. ಆಸ್ತಿಯೆಲ್ಲ ಕೆಎಸ್‌ಡಿಸಿ ಹೆಸರಿನಲ್ಲೇ ಇರಲಿದೆ. ಹಾಗಾಗಿ ಇದರಲ್ಲಿ ಆತಂಕಪಡುವುದು ಏನಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಈ ಕಾರ್ಯ ಮಾಡಲಾಗುತ್ತಿದೆ. ಸರ್ಕಾರ ಈ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆಸಲಿದೆ ಎಂದೂ ಹೇಳಿದ್ದಾರೆ.
 

click me!