* ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಅರಣ್ಯ ಪ್ರದೇಶದಲ್ಲಿ ರಕ್ಷಣೆ
* ಪಕ್ಷಿ ಪ್ರೇಮಿ ವಿಜಯ್ ಇಟ್ಟಗಿ ನೇತೃತ್ವದಲ್ಲಿ ಕೃಷ್ಣಮೃಗ ಮರಿ ರಕ್ಷಣೆ
* ಬೇಟೆಗಾರನ ಪತ್ತೆ ಹಚ್ಚಲು ಜಾಲ ಬೀಸಿದ ಅರಣ್ಯ ಇಲಾಖೆ
ವಿಜಯನಗರ(ಸೆ.20): ಬೇಟೆಗಾರನ ಕೈಗೆ ಸೇರುತ್ತಿದ್ದ ಮರಿಯನ್ನ ಪಕ್ಷಿ ಪ್ರೇಮಿಯೊಬ್ಬರು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಇಂದು(ಸೋಮವಾರ) ನಡೆದಿದೆ.
ಪಕ್ಷಿ ಪ್ರೇಮಿ ವಿಜಯ್ ಇಟ್ಟಗಿ ನೇತೃತ್ವದಲ್ಲಿ ಕೃಷ್ಣಮೃಗ ಮರಿಯನ್ನ ರಕ್ಷಣೆ ಮಾಡಲಾಗಿದೆ. ರಕ್ಷಿಸಿದ ಕೃಷ್ಣ ಮೃಗ ಮರಿಯನ್ನು ಅರಣ್ಯ ಇಲಾಖೆಯ ಸುರ್ಪದಿಗೆ ನೀಡಲಾಗಿದೆ.
ಅವ್ಯಾಹತವಾಗಿ ನಡೆಯುತ್ತಿದೆ ಕೃಷ್ಣಮೃಗ ಬೇಟೆ :ಹಾಡಹಗಲೇ ಕೃತ್ಯ
ಹಗರಿಬೊಮ್ಮನ ಹಳ್ಳಿ ಭಾಗದಲ್ಲಿ ಕೃಷ್ಣ ಮೃಗಗಳ ಸಂಖ್ಯೆ ಬಹಳಷ್ಟು ಕಡಿಮೆ ಇವೆ. ಇರೋ ಸಂತತಿಯನ್ನು ಬೇಟೆಗಾರರ ಹೊಟ್ಟೆಗೆ ಸೇರಿದ್ರೆ ಇರೋ ಸಂತತಿ ಕೂಡ ನಾಶವಾಗುತ್ತದೆ. ಬೇಟೆಗಾರನ ಪತ್ತೆ ಹಚ್ಚಲು ಅರಣ್ಯ ಇಲಾಖೆ ಜಾಲ ಬೀಸಿದ್ದಾರೆ.