ಮಸ್ಕಿಯಿಂದ ಸಿಂಧನೂರಿಗೆ ಬಸ್‌ನಲ್ಲಿ ಬರುವಾಗ ವಾಡಿಕೆಯಂತೆ ನಿರ್ವಾಹಕ ಟಿಕೆಟ್ ತೆಗೆದುಕೊಳ್ಳುವಂತೆ ಅಜ್ಜಿಯೊಬ್ಬರನ್ನು ಕೇಳಿದರು. ಮರು ಕ್ಷಣವೇ ಏರಿದ ಧ್ವನಿಯಲ್ಲಿ ಮಾತನಾಡಿದ ಅಜ್ಜಿ ‘ನಾನ್ ರೊಕ್ಕಾ ಕೊಡಂಗಿಲ್ಲ... ಅಂದ್ರ ಕೊಡಂಗಿಲ್ಲ... ತುರ್ವಿಹಾಳ ಎಂಎಲ್‌ಎ ಬಸನಗೌಡ ಟಿಕೆಟ್ ತಗೊಬ್ಯಾಡ... ರೊಕ್ಕಾ ಕೊಡಬೇಡಾ ಅಂತ ಹೇಳ್ಯಾನ... ಬೇಕಾದ್ರ ನೀವ ಕೇಳ್ರಿ’ ಹೀಗೆ ಸುಮಾರು ಹೊತ್ತು ಕಂಡಕ್ಟರ್‌ನೊಂದಿಗೆ ವಾದಕ್ಕಿಳಿದ ಅಜ್ಜಿ
ಸಿಂಧನೂರು(ಮೇ.24): ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಎಂದು ಕಾಂಗ್ರೆಸ್ ಮುಖಂಡರು ಚುನಾವಣಾ ಸಂದರ್ಭದಲ್ಲಿ ಘೋಷಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಮಸ್ಕಿಯಿಂದ ಸಿಂಧನೂರಿಗೆ ಬರುತ್ತಿದ್ದ ಅಜ್ಜಿಯೊಬ್ಬರು ಕಂಡಕ್ಟರ್‌ನೊಂದಿಗೆ ಕಿರಿಕ್ ಮಾಡಿಕೊಂಡ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸದ್ದು ಮಾಡ ತೊಡಗಿದೆ.
ಮಸ್ಕಿಯಿಂದ ಸಿಂಧನೂರಿಗೆ ಬಸ್‌ನಲ್ಲಿ ಬರುವಾಗ ವಾಡಿಕೆಯಂತೆ ನಿರ್ವಾಹಕ ಟಿಕೆಟ್ ತೆಗೆದುಕೊಳ್ಳುವಂತೆ ಅಜ್ಜಿಯೊಬ್ಬರನ್ನು ಕೇಳಿದರು. ಮರು ಕ್ಷಣವೇ ಏರಿದ ಧ್ವನಿಯಲ್ಲಿ ಮಾತನಾಡಿದ ಅಜ್ಜಿ ‘ನಾನ್ ರೊಕ್ಕಾ ಕೊಡಂಗಿಲ್ಲ... ಅಂದ್ರ ಕೊಡಂಗಿಲ್ಲ... ತುರ್ವಿಹಾಳ ಎಂಎಲ್‌ಎ ಬಸನಗೌಡ ಟಿಕೆಟ್ ತಗೊಬ್ಯಾಡ... ರೊಕ್ಕಾ ಕೊಡಬೇಡಾ ಅಂತ ಹೇಳ್ಯಾನ... ಬೇಕಾದ್ರ ನೀವ ಕೇಳ್ರಿ’ ಹೀಗೆ ಸುಮಾರು ಹೊತ್ತು ಕಂಡಕ್ಟರ್‌ನೊಂದಿಗೆ ವಾದಕ್ಕಿಳಿದಳು. ಆಗ ಕಂಡಕ್ಟರ್ ಸಮಾಧಾನಿಸಿ ‘ಅಜ್ಜಿ ಸರ್ಕಾರದಿಂದ ಇನ್ನು ಆದೇಶ ಬಂದಿಲ್ಲ. ಬಂದ್ಮೇಲೆ ಟಿಕೆಟ್ ತಗೊ ಬ್ಯಾಡ, ಈಗ ರೊಕ್ಕ ಕೊಡು. ಟಿಕಿಟ್ ಕೊಡ್ತೀನಿ’ ಎಂದರು.
undefined
ರಾಯಚೂರು: ಬಿಸಿಲುನಾಡಿನ ಯುವಕ ಐಎಎಸ್‌ಗೆ ಸೆಲೆಕ್ಟ್..!
ಮತ್ತೆ ಅಜ್ಜಿ ಕಂಡಕ್ಟರ್‌ನನ್ನು ದುರುಗುಟ್ಟಿನೋಡಿ ‘ಬೇಕಾದ್ರ ನನ್ನ ಬಸ್‌ನಿಂದ ಕೆಳಗ ಇಳಸ್ರಿ, ನಾನು ಅಡವಿ ಹೆಣ ಆಗಬೇಕೇನು ಅಂತ ತುರ್ವಿಹಾಳ ಬಸನಗೌಡನ ಕೇಳ್ತಿನಿ, ಮನಿಗೆ ಕರೆಂಟ್ ಬಿಲ್‌ನವ್ರು ಬಂದ್ರ ಬಿಲ್ ಕಟ್‌ಬ್ಯಾಡ್ರಿ ಅಂತನೂ ಬಸನಗೌಡ ಹೇಳ್ಯಾನ’ ಹೀಗೆ ಮಾತಿಗೆ ಮಾತು ಬೆಳೆಯುತ್ತಿದ್ದಿದ್ದನ್ನು ಸಹ ಪ್ರಯಾಣಿಕರು ಕೆಲಕಾಲ ಮನೋರಂಜನೆ ಎಂಬಂತೆ ನಕ್ಕರು.
ಕೊನೆಗೆ ಅಜ್ಜಿಯ ಮನವೊಲಿಸುವಲ್ಲಿ ಯಶಸ್ವಿಯಾದ ಕಂಡಕ್ಟರ್ ಅಜ್ಜಿಯಿಂದ ಹಣ ಪಡೆದು ಟಿಕೆಟ್ ಕೊಟ್ಟರು. ಅಜ್ಜಿಯ ಸಿಂಧನೂರು ಬರುವವರೆಗೂ ಪ್ರಯಾಣಿಕರು ನಕ್ಕಿದ್ದೇ, ನಕ್ಕಿದ್ದು, 5 ಗ್ಯಾರಂಟಿಗಳ ಭರವಸೆಗಳನ್ನು ಈಗಾಗಲೆ ರಾಜ್ಯದ ಬಹುತೇಕ ಮಹಿಳೆಯರು ನಂಬಿ ಮತಹಾಕಿರುವುದರ ಪರಿಣಾಮವಾಗಿ ಇಂತಹ ಘಟನೆಗಳು ವಿವಿಧ ಗ್ರಾಮ ಮತ್ತು ಬಸ್‌ಗಳಲ್ಲಿ ನಡೆಯುತ್ತಿರುವುದು ಸ್ವಾಭಾವಿಕವಾಗಿದೆ.