Chikkaballapura : ಯಶಸ್ವಿನಿ ಯೋಜನೆ ಅನುಷ್ಠಾನಕ್ಕೆ ಅಧಿಕೃತ ಆದೇಶ

By Kannadaprabha NewsFirst Published Oct 26, 2022, 6:03 AM IST
Highlights

ರಾಜ್ಯದ ಸಹಕಾರಿ ರಂಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ಯಶಸ್ವಿ ಯೋಜನೆಯನ್ನು ಮತ್ತೆ ರಾಜ್ಯದಲ್ಲಿ ಅನುಷ್ಟಾನಗೊಳಿಸಲು ರಾಜ್ಯ ಸರ್ಕಾರ ಮಂಗಳವಾರ ಅಧಿಕೃತ ಆದೇಶವನ್ನು ಹೊರಡಿಸಿದ್ದು ಯಶಸ್ವಿನಿ ಕಾರ್ಡ್‌ ಪಡೆಯಲು ನ.1ರಿಂದ ನೊಂದಣಿ ಕಾರ್ಯ ಶುರುವಾಗಲಿದೆ.

 ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ(ಅ.26): ರಾಜ್ಯದ ಸಹಕಾರಿ ರಂಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ಯಶಸ್ವಿ ಯೋಜನೆಯನ್ನು ಮತ್ತೆ ರಾಜ್ಯದಲ್ಲಿ ಅನುಷ್ಟಾನಗೊಳಿಸಲು ರಾಜ್ಯ ಸರ್ಕಾರ ಮಂಗಳವಾರ ಅಧಿಕೃತ ಆದೇಶವನ್ನು ಹೊರಡಿಸಿದ್ದು ಯಶಸ್ವಿನಿ ಕಾರ್ಡ್‌ ಪಡೆಯಲು ನ.1ರಿಂದ ನೊಂದಣಿ ಕಾರ್ಯ ಶುರುವಾಗಲಿದೆ.

(Karnataka) ಸರ್ಕಾರ ಯಶಸ್ವಿನಿ ಯೋಜನೆಯನ್ನು ಪುನಃ ಆರಂಭಿಸುವ ಕುರಿತು ಸಿಎಂ (Basavaraja Bomai) ಬಜೆಟ್‌ನಲ್ಲಿ ಘೋಷಿಸಿದ್ದರು. ಸಹಕಾರ ಇಲಾಖೆಯಲ್ಲಿ 2003 ರಲ್ಲಿ ಜಾರಿಗೆ ತಂದಿದ್ದ ಯಶಸ್ವಿ ಯೋಜನೆ ರಾಜ್ಯದಲ್ಲಿ2017-18ರ ವರೆಗೂ ಅಸ್ತಿತ್ವದಲ್ಲಿತ್ತು. ಬಳಿಕ ಸರ್ಕಾರ ಯೋಜನೆಯನ್ನು ಸ್ಥಗಿತಗೊಳಿಸಿತ್ತು.

ಆದರೆ ರಾಜ್ಯದಲ್ಲಿ ಯಶಸ್ವಿ ಯೋಜನೆಯನ್ನು ಮತ್ತೆ ಆರಂಭಿಸಬೇಕೆಂಬ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದಲ್ಲಿ ಅದರಲೂ ರೈತ ವಲಯದಲ್ಲಿ ಹೆಚ್ಚು ಬೇಡಿಕೆ ಬಂದ ಹಿನ್ನಲೆಯಲ್ಲಿ ಸರ್ಕಾರ ಮತ್ತೆ ಇದೀಗ ಯಶಸ್ವಿ ಯೋಜನೆ ಅನುಷ್ಟಾನಕ್ಕೆ ಮುಂದಾಗುವ ಮೂಲಕ ಸಹಕಾರ ಕ್ಷೇತ್ರದ ಸದಸ್ಯರಿಗೆ ಆರೋಗ್ಯ ರಕ್ಷಣೆ ನೀಡಲು ಮುಂದಾಗಿದೆ. ಯಶಸ್ವಿ ಯೋಜನೆಯಡಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾದ ವೆಚ್ಚದ ಗರಿಷ್ಠ ಮಿತಿಯನ್ನು 5 ಲಕ್ಷಕ್ಕೆ ನಿಗಧಿಪಡಿಸಲಾಗಿದ್ದು ರಾಜ್ಯದ ಯಾವುದೇ ಯಶಸ್ವಿನಿ ನೆಟ್‌ ವಕ್‌ ರ್‍ ಇರುವ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ.

ಈ ಯೋಜನೆಯು ಕೇವಲ ಸಹಕಾರ ಸಂಘಗಳ ಕಾಯ್ದೆಯಡಿ ಹಾಗೂ ಸೌಹಾರ್ದ ಸಹಕಾರ ಸಂಘಗಳ ಕಾಯ್ದೆಯಡಿ ನೊಂದಣಿ ಆಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳ ಸದಸ್ಯರಿಗೆ ಮಾತ್ರ ಅನ್ವಯಿಸಲಿದೆ. ಜಿಲ್ಲಾ ಕೇಂದ್ರ ಬ್ಯಾಂಕ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗ್ರಾಮೀಣ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಈ ಯೋಜನೆ ಅನ್ವಯಿಸಲಿದೆ. ಗ್ರಾಮೀಣ ಭಾಗದಲ್ಲಿ 1 ಕುಟುಂಬದಲ್ಲಿ 4 ಮಂದಿ ಸದಸ್ಯರಿಗೆ ಅನ್ವಯವಾಗುವಂತೆ ವಂತಿಗೆ ಶುಲ್ಕವನ್ನು 500 ರು, ನಿಗಧಿಪಡಿಸಿದ್ದರೆ ನಗರ ಪ್ರದೇಶದಲ್ಲಿ 1,000 ರು, ವಂತಿಗೆ ಶುಲ್ಕ ಯಶಸ್ವಿನಿ ನೊಂದಣಿಯಾಗಿ ಪಾವತಿಸಬೇಕಿದೆ.

ನಾಲ್ಕಕ್ಕಿಂತ ಹೆಚ್ಚು ಸದಸ್ಯರಿಗೆ ಯಶಸ್ವಿ ಸೌಲಭ್ಯ ಪಡೆಯಲು ವಂತಿಗೆ ಮೇಲೆ ಶೇ.10 ರಷ್ಟುಹೆಚ್ಚುವರಿ ಶುಲ್ಕ ಕಟ್ಟಬೇಕಿದೆ. ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಗಂಗಕ್ಕೆ ಸರ್ಕಾರವೇ ವಾರ್ಷಿಕ ವಂತಿಗೆ ಭರಿಸುವ ಭರವಸೆ ನೀಡಿದೆ. ವಿಶೇಷ ಅಂದರೆ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರಿಗೆ ಹಾಗೂ ಸಹಕಾರಿ ನೇಕಾರರಿಗೆ ಈ ಸೌಲಭ್ಯವನ್ನು ಸರ್ಕಾರ ವಿಸ್ತಿರಿಸದೆ.

ಯಶಸ್ವಿನಿ ಯೋಜನೆ ವಿಶೇಷ

ಯಶಸ್ವಿನಿ ಯೋಜನೆಯಡಿ ಸದಸ್ಯರಿಗೆ ಯೂನಿಕ್‌ ಐಡಿ ಕಾರ್ಡ್‌ ವಿತರಣೆ ಆಗಲಿದೆ. ಯಶಸ್ವಿನಿ ನೆಟ್‌ ವರ್ಕ್ ಇರುವ ಯಾವುದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿ ಕಾರ್ಡ್‌ ತೋರಿಸಿದರೆ ಅರ್ಜಿದಾರರ ಜೊತೆಗೆ ಅವರ ಅವಲಂಬಿತ ಕುಟುಂಬದ ಸದಸ್ಯರ ಸಂಪೂರ್ಣ ವಿವರ ಲಭ್ಯವಾಗಲಿದೆ. ಯಶಸ್ವಿನಿ ಕಾರ್ಡ್‌ ಬಳಸಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ. 1650 ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಯಶಸ್ವಿ ಯೋಜನೆಯಡಿ ಕಲ್ಪಿಸಲಾಗಿದೆ. ಕೇವಲ ಜನರಲ್‌ ವಾರ್ಡ್‌ನಲ್ಲಿ ಮಾತ್ರ ಚಿಕಿತ್ಸೆಗೆ ಅವಕಾಶ, ಯಶಸ್ವಿನಿ ಕಾರ್ಡ್‌ ಪಡೆದ 15 ದಿನಗಳಿಗೆ ಚಿಕಿತ್ಸೆ ಪಡೆಯಬಹುದು.

ಮರು ಜಾರಿ

ರೈತರಿಗೆ ಆರೋಗ್ಯ ಸೌಲಭ್ಯ ನೀಡುವ ಯಶಸ್ವಿನಿ ಯೋಜನೆಯನ್ನು ಕನ್ನಡ ರಾಜ್ಯೋತ್ಸವದಂದು (ನವೆಂಬರ್‌ 1) ಪುನರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಗುರುವಾರ 50 ಹಾಸಿಗೆಗಳ ಜಯದೇವ ಆಸ್ಪತ್ರೆ ಉಪಕೇಂದ್ರ ಮತ್ತು ಇಂದಿರಾಗಾಂಧಿ ಮಕ್ಕಳ ಆಸ್ಪತೆಯ ಮಕ್ಕಳ ಐಸಿಯು ಉಪಕೇಂದ್ರದವನ್ನು ಉದ್ಘಾಟಿಸಿ ಮಾತನಾಡಿ ಅವರು, ‘ರಾಜ್ಯ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಕಾಳಜಿ ವಹಿಸಿದೆ. 

ಈ ಹಿಂದೆ ಸಹಕಾರಿ ಸಂಸ್ಥೆಗಳ ಸದಸ್ಯ ರೈತರಿಗೆ ಮತ್ತು ಅವರ ಕುಟುಂಬಗಳಿಗೆ ಆರೋಗ್ಯ ಸೌಲಭ್ಯಗಳನ್ನು ನೀಡುವಲ್ಲಿ ಯಶಸ್ವಿನಿ ಯೋಜನೆ ಅನುಕೂಲಕರವಾಗಿತ್ತು. ರೈತರ ಹಿತದೃಷ್ಟಿಯಿಂದ ಯಶಸ್ವಿ ಯೋಜನೆಗೆ ನ.1ಕ್ಕೆ ಮರು ಚಾಲನೆ ನೀಡಲಾಗುತ್ತದೆ ಎಂದರು. ‘ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಟೆಲಿಮೆಡಿಸಿನ್‌ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತದೆ. ಇದಕ್ಕಾಗಿ ಪ್ರಾದೇಶಿಕ ಮಟ್ಟದಲ್ಲಿ ಆರು ಕಮಾಂಡ್‌ ಸೆಂಟರ್‌ ಸ್ಥಾಪಿಸಲಾಗುತ್ತಿದ್ದು, ಇದಕ್ಕೆ ರಾಜ್ಯದ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳನ್ನು ಜೋಡಿಸುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. 

ರಾಹುಲ್‌ ಗಾಂಧಿ ಹೇಳಿದ ಆನೆ ಮರಿ ರಕ್ಷಣೆಗೆ ಸಿಎಂ ಬೊಮ್ಮಾಯಿ ಸೂಚನೆ

ಕಮಾಂಡ್‌ ಸೆಂಟರ್‌ನ ತಜ್ಞ ವೈದ್ಯರ ತಂಡವು 24*7 ಆರೋಗ್ಯ ಕೇಂದ್ರಗಳಿಗೆ ಸಲಹೆ ಸೂಚನೆಗಳನ್ನು ನೀಡಲಿದೆ. ತಲಾ 7-8 ಲಕ್ಷ ರು. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು. ಇವುಗಳ ಜತೆಗೆ ಅರ್ಹ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವುದು. ಸುಮಾರು 81 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಹೇಳಿದರು. ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ಗ್ರಾಮೀಣ, ತಾಲ್ಲೂಕು ಮಟ್ಟದಲ್ಲಿ ಹಾಗೂ ಬೆಂಗಳೂರಿನ ವಲಯಮಟ್ಟದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. 

Bengaluru: ಮಲ್ಲೇಶ್ವರದಲ್ಲಿ ಮಿನಿ ಜಯದೇವ ಆಸ್ಪತ್ರೆ ಶುರು

ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣೆ, ಅವಶ್ಯಕತೆಯಿದ್ದಲ್ಲಿ ಶಸ್ತ್ರಚಿಕಿತ್ಸೆ, ಬಡವರಿಗೆ ಉಚಿತ ಕನ್ನಡಕ ನೀಡುವ ಕಾರ್ಯಕ್ರಮ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಶ್ರವಣದೋಷ ಹೊಂದಿನ ಬಡ ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ವ್ಯವಸ್ಥೆಯನ್ನು ಉಚಿತವಾಗಿ ಪೂರೈಸಲಾಗುತ್ತಿದ್ದು, ಇದಕ್ಕಾಗಿ 500 ಕೋಟಿ ರು. ಮೀಸಲಿರಿಸಲಾಗಿದೆ. ಜಿಲ್ಲಾಸ್ಪತ್ರೆಗಳ ಡಯಾಲಿಸಿಸ್‌ ಸೈಕಲ್‌ಗಳನ್ನು 30 ಸಾವಿರಗಳಿಂದ 60 ಸಾವಿರಗಳನ್ನು ಹೆಚ್ಚಿಸಲಾಗಿದೆ. ಕಿಮೋಥೆರಪಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆಯುಷ್ಮಾನ್‌ ಕಾರ್ಡ್‌ ಬಳಸಲು ಸರಳ ನಿಯಮಾವಳಿಗಳನ್ನು ಅತಿ ಶೀಘ್ರದಲ್ಲಿ ಹೊರಡಿಸಲಾಗುವುದು ಎಂದರು.

click me!