ಹೆಣ್ಮಕ್ಕಳ್ಳಿಗೆ ಕಾಟ ಕೊಡುವ ರೋಡ್ ರೋಮಿಯೋಗಳೇ ಎಚ್ಚೆತ್ತುಕೊಳ್ಳಿ. ರಾಯಚೂರಿನಲ್ಲಿ ಸಿದ್ಧವಾಗಿದೆ ಓಬವ್ವ ಪಡೆ. ಈ ಪಡೆಗೆ ಪಡ್ಡೆಗಳಿಗೆ ಪಾಠ ಕಲಿಸುವುದೇ ಇವರ ಕೆಲಸ. ಹೆಣ್ಮಕ್ಕಳ ಸುರಕ್ಷತೆಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ ಮಹಿಳಾ ಸಿಬ್ಬಂದಿ.
ರಾಯಚೂರು(ಡಿ.10): ಹೆಣ್ಮಕ್ಕಳ್ಳಿಗೆ ಕಾಟ ಕೊಡುವ ರೋಡ್ ರೋಮಿಯೋಗಳೇ ಎಚ್ಚೆತ್ತುಕೊಳ್ಳಿ. ರಾಯಚೂರಿನಲ್ಲಿ ಸಿದ್ಧವಾಗಿದೆ ಓಬವ್ವ ಪಡೆ. ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರ ರಕ್ಷಣೆಗಾಗಿ ಒಬವ್ವ ಪಡೆ ಸಿದ್ಧವಾಗಿದೆ.
ರಾಯಚೂರು ಜಿಲ್ಲಾ ಪೊಲೀಸರಿಂದ ಆರಂಭವಾದ ಒಬವ್ವ ಪಡೆ ಬೆಳಗ್ಗೆಯಿಂದ ರಾತ್ರಿವರೆಗೂ ಗಸ್ತು ತಿರುಗಲಿದೆ. ಪಡೆಯಲ್ಲಿ 10 ಜನ ಪೊಲೀಸ್ ತರಬೇತಿ ಪಡೆದ ಮಹಿಳಾ ಸಿಬ್ಬಂದಿಗಳಿದ್ದು, ಪಡ್ಡೆ ಹುಡುಗರಿಗೆ ತಕ್ಕ ಪಾಠ ಕಲಿಸಲು ಇವರು ಸನ್ನದ್ಧರಾಗಿದ್ದಾರೆ.
undefined
ಕೆಸಿಎನ್ ಹ್ಯಾಟ್ರಿಕ್ ಗೆಲವು; ಕೆಬಿಸಿ ಹ್ಯಾಟ್ರಿಕ್ ಸೋಲು...
ಹುಡುಗಿಯರಿಗೆ ಕಾಟ ಕೊಟ್ಟರೆ ತಕ್ಷಣ ಅಲ್ಲಿಗೆ ಓವಬ್ಬ ಪಡೆ ಬರಲಿದೆ. ಮಹಿಳೆಯರ ಸುರಕ್ಷತೆಗಾಗಿ ಕಾರ್ಯರೂಪಕ್ಕೆ ಇಳಿದ ಓಬವ್ವ ಪಡೆ ನಿನ್ನೆ ಸಂಜೆ ನಗರದ
ಬೋಳಮಾನದೊಡ್ಡಿಯಲ್ಲಿ ಹುಡುಗಿ ಫೋನ್ ನಂಬರ್ ಕೇಳಿದ ಯುವನನ್ನು ಬಂಧಿಸಿದೆ.
ತಾರಾನಾಥ ಎಂಬ ಯುವಕನನ್ನು ಓಬವ್ವ ಪಡೆ ಬಂಧಿಸಿದ್ದು, ಹುಡುಗಿಯ ನಂಬರ್ ಕೊಡು ಎಂದು ಆಕೆಯ ಸ್ನೇಹಿತೆಯರನ್ನು ಪೀಡಿಸುತ್ತಿದ್ದ. ಹುಡುಗಿಯನ್ನು ಪೀಡಿಸುತ್ತಿದ್ದ ಯುವಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ರಸ್ತೆಯಲ್ಲಿ ಹುಡುಗಿಯರನ್ನು ಚುಡಾಯಿಸಿದ ಪ್ರಕರಣದಲ್ಲಿ ಮತ್ತೊಬ್ಬನನ್ನು ಬಂಧಿಸಲಾಗಿದ್ದು, ಮಹಾಂತೇಶ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ.
ಸುಮಲತಾ ಬೆಂಬಲ ಇಲ್ಲದೇ ಬಿಜೆಪಿ ಗೆಲುವು..!...
ಓಬವ್ವ ಪಡೆ ಇಬ್ಬರನ್ನು ವಶಕ್ಕೆ ಪಡೆದು ಮಹಿಳಾ ಠಾಣೆಗೆ ಒಪ್ಪಿಸಿದೆ. ಮೂರು ದಿನಗಳ ಹಿಂದೆ ಆರಂಭವಾದ ಓಬವ್ವ ಪಡೆ, ಮಹಿಳೆಯರ ರಕ್ಷಣೆಯನ್ನೇ ಧ್ಯೇಯವಾಗಿಸಿಕೊಂಡು ಕೆಲಸ ಆರಂಭಿಸಿದೆ.