ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವಲ್ಲಿ ವಚನಾನಾಂದ ಶ್ರೀ ಪಾತ್ರ?

By Kannadaprabha News  |  First Published Dec 10, 2019, 9:32 AM IST

ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿದೆ. 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದು ಇದರಲ್ಲಿ ಎರಡು ಕ್ಷೇತ್ರಗಳನ್ನು ಗೆಲ್ಲುವಲ್ಲಿ ಸ್ವಾಮೀಜಿಯೋರ್ವರ ಪಾತ್ರ ಮಹತ್ವದ್ದೆನ್ನಲಾಗಿದೆ. 


ಹಾವೇರಿ [ಡಿ.10]:  ಜಿಲ್ಲೆಯ ಹಿರೇಕೆರೂರು ಮತ್ತು ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಹಿಂದೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳ ಪಾತ್ರವೂ ಸಾಕಷ್ಟಿದೆ ಎಂಬ ಮಾತುಗಳು ಕೇಳಿಬಂದಿವೆ. ಎರಡೂ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಅಭ್ಯರ್ಥಿಗಳಿಗೆ ಮತದಾರರು ಬೆಂಬಲ ವ್ಯಕ್ತಪಡಿಸಿರುವುದು ಫಲಿತಾಂಶದಿಂದ ವೇದ್ಯವಾಗಿದೆ.

ರಾಣೆಬೆನ್ನೂರು ಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದ ಮತಗಳೇ ನಿರ್ಣಾಯಕವೆನಿಸಿದ್ದವು. ಅದಕ್ಕಾಗಿಯೇ ಬಿಜೆಪಿ ನಾಯಕರು ಲೆಕ್ಕಾಚಾರ ಮಾಡಿ ಅದೇ ಸಮಾಜದ ಅರುಣಕುಮಾರ್‌ ಪೂಜಾರ ಅವರಿಗೆ ಟಿಕೆಟ್‌ ನೀಡಿದ್ದರು. ಬಿಜೆಪಿ ನಾಯಕರು ಅಬ್ಬರದ ಪ್ರಚಾರ ನಡೆಸಿದರೆ ವಚನಾನಂದ ಶ್ರೀಗಳು ಸದ್ದಿಲ್ಲದೇ ಸಮಾಜದ ಮತಗಳು ಬಿಜೆಪಿ ಪರವಾಗುವಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಪಂಚಮಸಾಲಿ ಮುಖಂಡರೂ ಬಿಜೆಪಿ ಪರವಾಗಿ ನಿಂತಿದ್ದರಿಂದ ಅರುಣಕುಮಾರ ಪೂಜಾರ ದೊಡ್ಡ ಅಂತರದಿಂದ ಗೆಲುವು ಸಾಧಿಸುವಂತಾಗಿದೆ.

Latest Videos

undefined

ಬಿಜೆಪಿಗರಿಂದ ಶರತ್ ಬಚ್ಚೇಗೌಡಗೆ ಬೆಂಬಲ...

ಹಿರೇಕೆರೂರು ಕ್ಷೇತ್ರದಲ್ಲಿ ಸಾದರ ಲಿಂಗಾಯತರೇ ಪ್ರಮುಖರಾದರೂ ಕಾಂಗ್ರೆಸ್‌ನ ಬನ್ನಿಕೋಡ ಮತ್ತು ಬಿಜೆಪಿಯ ಬಿ.ಸಿ.ಪಾಟೀಲ ಇಬ್ಬರೂ ಅದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಮತಗಳ ವಿಭಜನೆಯಾದರೆ ಬಿಜೆಪಿಗೆ ಕಷ್ಟಎಂದು ಹೇಳಲಾಗುತ್ತಿತ್ತು. ಆದರೆ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯದ ಮತಗಳೂ ಸಾಕಷ್ಟಿರುವುದರಿಂದ ವಚನಾನಂದ ಶ್ರೀಗಳು ಬಿಜೆಪಿ ಪರ ಸಮಾಜದ ಮತ ಬೀಳುವಂತೆ ನೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಹಿಂದೆ ಹರಹರ ಪೀಠದ ವಚನಾನಂದ ಶ್ರೀಗಳ ಪಾತ್ರವೂ ನಿರ್ಣಾಯಕವೆನಿಸಿದೆ.

click me!