ಕಾನೂನುಬಾಹಿರವಾಗಿ ಹೆಣ್ಣು ಭ್ರೂಣಲಿಂಗ ಪತ್ತೆ: ಯಶ್‌ ಹಾಸ್ಪಿಟಲ್‌ಗೆ ನೋಟಿಸ್‌

By Kannadaprabha News  |  First Published Nov 4, 2023, 10:15 PM IST

ರೋಗಿಗಳ ನೋಂದಣಿ ಪುಸ್ತಕ, ಗರ್ಭಿಣಿಯರ ಸ್ಕ್ಯಾನಿಂಗ್, ಸರ್ಕಾರದ ಹಲವು ನಿಯಮಗಳ ಉಲ್ಲಂಘನೆ ನ್ಯೂನತೆಯಡಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷಿನ್, ಸ್ಕ್ಯಾನಿಂಗ್ ಮಾಡುವ ರೂಮ್ ಜಪ್ತಿ ಮಾಡಲಾಗಿದೆ. 
 


ಬೆಳಗಾವಿ(ನ.04):  ಕಾನೂನುಬಾಹಿರವಾಗಿ ಹೆಣ್ಣು ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಆರೋಪದ ಮೇರೆಗೆ ಬೆಳಗಾವಿಯ ಮಾಧನ ನಗರದ ಖಾಸಗಿ ಆಸ್ಪತ್ರೆಯೊಂದರ ಮೇಲೆ ಬೆಳಗಾವಿ ಉಪವಿಭಾಗಾಧಿಕಾರಿ, ಆರೋಗ್ಯ ಇಲಾಖೆ ಜಂಟಿ ದಾಳಿ ನಡೆಸಿದ್ದು, ಈ ವೇಳೆ ರೋಗಿಗಳ ನೋಂದಣಿ ಪುಸ್ತಕ, ಗರ್ಭಿಣಿಯರ ಸ್ಕ್ಯಾನಿಂಗ್‌ ಪತ್ತೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.

ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಹಚ್ಚುವ ಕಾಯ್ದೆ ಉಲ್ಲಂಘನೆಯಡಿ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣಕುಮಾರ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಶುಭಂ ಶುಕ್ಲಾ ಮತ್ತು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ವಿಶ್ವನಾಥ ಭೋವಿ ನೇತೃತ್ವದ ಅಧಿಕಾರಿಗಳ ತಂಡ ಯಶ್‌ ಹಾಸ್ಪಿಟಲ್‌ ಮೇಲೆ ದಿಢೀರ್ ದಾಳಿ ನಡೆಸಿತು. ಈ ವೇಳೆ ಕಾನೂನುಬಾಹಿರವಾಗಿ ಹೆಣ್ಣು ಭ್ರೂಣಲಿಂಗ ಪತ್ತೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Tap to resize

Latest Videos

ರಾಜ್ಯೋತ್ಸವ ವೇಳೆ ಪುಂಡಾಟ; 18 ಎಂಇಎಸ್ ಕಾರ್ಯಕರ್ತರ ಮೇಲೆ ಬಿತ್ತು ಕೇಸ್!

ರೋಗಿಗಳ ನೋಂದಣಿ ಪುಸ್ತಕ, ಗರ್ಭಿಣಿಯರ ಸ್ಕ್ಯಾನಿಂಗ್, ಸರ್ಕಾರದ ಹಲವು ನಿಯಮಗಳ ಉಲ್ಲಂಘನೆ ನ್ಯೂನತೆಯಡಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷಿನ್, ಸ್ಕ್ಯಾನಿಂಗ್ ಮಾಡುವ ರೂಮ್ ಜಪ್ತಿ ಮಾಡಲಾಗಿದೆ. ಆಸ್ಪತ್ರೆಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ನಿಯಮ ಉಲ್ಲಂಘನೆ ಹಿನ್ನೆಲೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಆಸ್ಪತ್ರೆಗೆ ನೋಟಿಸ್​ನಲ್ಲಿ ತಿಳಿಸಲಾಗಿದೆ.

click me!