* ಸಂಚಾರ ನಿಯಮ ಉಲ್ಲಂಘಿಸುವವರ ಮೊಬೈಲ್‌ಗೆ ನೋಟಿಸ್
* ತಪ್ಪು ಮಾಡಿದ ಫೋಟೋ, ವಿಡಿಯೋ ಸಾಕ್ಷ್ಯ ಸಮೇತ ನೋಟಿಸ್ ಜಾರಿಗೆ ನಿರ್ಧಾರ
* ತಪ್ಪು ಮಾಡಿದವರು ಸಾಬೂಬು ಹೇಳುವುದಕ್ಕೆ ಕಡಿವಾಣ
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಜ.28): ರಾಜಧಾನಿಯ ನಾಗರಿಕರೇ ನೀವು ಸಿಗ್ನಲ್ ಜಂಪ್(Signal Jump), ಚಾಲನೆ ವೇಳೆ ಮೊಬೈಲ್ ಸಂಭಾಷಣೆ, ಹೆಲ್ಮೆಟ್(Helmet) ಇಲ್ಲದೆ ಬೈಕ್ ಚಾಲನೆ ಹೀಗೆ ಸಂಚಾರ ನಿಯಮ ಉಲ್ಲಂಘಿಸುವ ಮುನ್ನವೇ ಯೋಚಿಸಿ. ಇನ್ನು ಮುಂದೆ ತಪ್ಪು ಮಾಡಿದ ಬಳಿಕ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ‘ಸಾಕ್ಷ್ಯ’ ಸಮೇತ ನಿಮ್ಮ ಮೊಬೈಲ್‌ಗೆ ಸಂಚಾರ ಪೊಲೀಸರ(Traffic Police) ನೋಟಿಸ್ ಬರಲಿದೆ...!
undefined
ಸಂಚಾರ ನಿಯಮ ಉಲ್ಲಂಘನೆ(Violation of Traffic Rules) ಸಂಬಂಧ ಎಸ್‌ಎಂಎಸ್(SMS) ನೋಟಿಸ್‌ಗೆ(Notice) ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು, ಈಗ ಜನರಿಗೆ ವಾಟ್ಸ್ ಆ್ಯಪ್(WhatsApp) ಮೂಲಕ ನೋಟಿಸ್ ಕಳುಹಿಸಲು ಯೋಜಿಸಿದ್ದಾರೆ. ಈ ನೋಟಿಸ್ ಜೊತೆ ಎಲ್ಲಿ ಹಾಗೂ ಯಾವಾಗ ಸಂಚಾರ ನಿಯಮ ಮೀರಿ ವಾಹನ ಮಾಲೀಕರು ನಡೆದರೂ ಎಂಬುದಕ್ಕೆ ಫೋಟೋ ಅಥವಾ ವಿಡಿಯೋ ಸಾಕ್ಷ್ಯವನ್ನು ಲಗತ್ತಿಸಿ ಕಳುಹಿಸಲು ಸಹ ಪೊಲೀಸರು ನಿರ್ಧರಿಸಿದ್ದಾರೆ. ತನ್ಮೂಲಕ ತಪ್ಪು ಮುಚ್ಚಿಕೊಳ್ಳಲು ಜನರು ಸಬೂಬು ಹೇಳಲಾಗುವುದಿಲ್ಲ.
ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ:
ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ, ರಸ್ತೆ ಸುರಕ್ಷತೆ ಬಗ್ಗೆ ಜನರು ಅರಿತುಕೊಳ್ಳಬೇಕು. ಅನಗತ್ಯವಾಗಿ ದಂಡ ವಿಧಿಸಿ ಜನರಿಗೆ ತೊಂದರೆ ಮಾಡುವುದು ಪೊಲೀಸರ ಉದ್ದೇಶವಲ್ಲ. ಕಾನೂನು(Law) ಪಾಲಿಸಿದರೆ ನಾಗರಿಕರು ದಂಡ ತೆತ್ತುವ ಅಗತ್ಯವೇ ಇಲ್ಲ ಎಂದರು.
ಈ ಮೊದಲು ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆಯಾ ವಾಹನದ ಮಾಲೀಕರಿಗೆ ಅಂಚೆ ಮೂಲಕ ನೋಟಿಸ್ ಕಳುಹಿಸುವ ವ್ಯವಸ್ಥೆ ಇತ್ತು. ಇದಕ್ಕೆ ಅಂಚೆ ವೆಚ್ಚ ಮಾತ್ರವಲ್ಲದೆ ಪೊಲೀಸರ ಶ್ರಮ ಸಹ ವ್ಯಯಿಸಬೇಕಾಯಿತು. ಕೊರೋನಾ(Coronavirus) ಸೋಂಕಿನ ಸಂಕಷ್ಟದ ಕಾಲದಲ್ಲಿ ಜನರ ವಿಳಾಸ ಪತ್ತೆ ಹಚ್ಚುವುದು ಸಹ ತ್ರಾಸದಾಯಕ ಕೆಲಸವಾಗಿತ್ತು. ಈ ಸಮಸ್ಯೆಯನ್ನು ಮನಗಂಡು ಸುಲಭ ಹಾಗೂ ಕಾಗದ ರಹಿತವಾಗಿ ಜನರಿಗೆ ಎಸ್‌ಎಂಎಸ್ ಮುಖೇನ ನೋಟಿಸ್ ತಲುಪಿಸುವ ವ್ಯವಸ್ಥೆಗೆ ಜಾರಿಗೊಳಿಸಲಾಯಿತು. ಇದಕ್ಕೆ ಜನರಿಂದ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದರಿಂದ ಶೇ.70ರಷ್ಟು ದಂಡ ಸಂಗ್ರಹವಾಗಿದೆ ಎಂದು ಹೇಳಿದರು.
Traffic Rules Violation: ಟ್ರಾಫಿಕ್ ಪೊಲೀಸ್ ಟೋಯಿಂಗ್ ವಾಹನದಿಂದಲೇ ಸಿಗ್ನಲ್ ಜಂಪ್: ಬಿತ್ತು ಭರ್ಜರಿ ದಂಡ
ಎಸ್‌ಎಂಎಸ್ ಬಳಿಕ ಈಗ ವಾಟ್ಸ್ ಆ್ಯಪ್‌ನಲ್ಲಿ ಜನರಿಗೆ ಸಂಚಾರ ನಿಯಮ ವಿಚಾರವಾಗಿ ನೋಟಿಸ್ ಜಾರಿಗೊಳಿಸುವ ಬಗ್ಗೆ ಯೋಜಿಸಲಾಗಿದೆ. ಈ ಸಂಬಂಧ ಶೀಘ್ರವೇ ಸರ್ಕಾರಕ್ಕೆ ಸಮಗ್ರ ಪ್ರಸ್ತಾವನೆ ಕಳುಹಿಸಲಾಗುತ್ತದೆ. ವಾಟ್ಸ್ ಆ್ಯಪ್‌ನಲ್ಲಿ ನೋಟಿಸ್ ವ್ಯವಸ್ಥೆಗೆ ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಪಡಿಸಬೇಕಾಗುತ್ತದೆ. ಈಗಾಗಲೇ ಈ ನಿಟ್ಟಿನಲ್ಲಿ ತಾಂತ್ರಿಕ ಕೆಲಸಗಳು ಸಾಗಿದ್ದು, ತಾಂತ್ರಿಕ ನಿಪುಣರ ಜತೆ ಮಾತುಕತೆ ಸಹ ನಡೆದಿವೆ. ಆದಷ್ಟು ಬೇಗ ವಾಟ್ಸ್ ಆ್ಯಪ್ ನೋಟಿಸ್ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದರು.
ವಾಟ್ಸ್ ಆ್ಯಪ್‌ನಲ್ಲಿ ಸಂಚಾರ ನಿಯಮ ವಿಚಾರವಾಗಿ ನೋಟಿಸ್ ಜಾರಿಗೊಳಿಸುವ ಬಗ್ಗೆ ಶೀಘ್ರವೇ ಸರ್ಕಾರಕ್ಕೆ ಸಮಗ್ರ ಪ್ರಸ್ತಾವನೆ ಕಳುಹಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಪಡಿಸಬೇಕಾಗುತ್ತದೆ. ಈಗಾಗಲೇ ಈ ನಿಟ್ಟಿನಲ್ಲಿ ತಾಂತ್ರಿಕ ಕೆಲಸಗಳು ಸಾಗಿದೆ. ಆದಷ್ಟುಬೇಗ ವಾಟ್ಸ್ ಆ್ಯಪ್ ನೋಟಿಸ್ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಅಂತ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.