* ಐದು ವರ್ಷಗಳ ಹಿಂದೆಯೇ ಸ್ಲಂ ಬೋರ್ಡ್‌ನಿಂದ ಮನೆ ನಿರ್ಮಾಣ
* ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಗೊಂದಲದಿಂದ ವಿಳಂಬ
* ಬಿಜೆಪಿ ಕಾರ್ಯಕರ್ತರಿಗೆ ಮನೆ ನೀಡಲಾಗುತ್ತಿದೆ ಎಂಬ ಆರೋಪ
ಬಸವರಾಜ ಹಿರೇಮಠ
ಧಾರವಾಡ(ಜ.10): ಆಡಳಿತ ಸರ್ಕಾರಗಳು ದೀನ-ದಲಿತರಿಗೆ, ಬಡವರಿಗೆ, ನಿರಾಶ್ರಿತರಿಗೆ ದಾಖಲೆಗಳಲ್ಲಿ ಕೋಟಿ ಕೋಟಿ ವೆಚ್ಚ ಮಾಡುತ್ತಲೇ ಇದೆ. ಹೊರ ನೋಟಕ್ಕೆ ಸರ್ಕಾರದ ಯೋಜನೆಗಳು ಅಭಿವೃದ್ಧಿಯಾಗಿಯೇ ಕಂಡರೂ ಒಳನೋಟದಲ್ಲಿ ಶೂನ್ಯ ಅಭಿವೃದ್ಧಿ ಎನಿಸುವಂತಹ ಉದಾಹರಣೆಗಳೇ ಜಾಸ್ತಿ.
ಕೊಳಚೆ ಪ್ರದೇಶದಲ್ಲಿ(Slum Area) ವಾಸಿಸುವ ಬಡವರಿಗೆ(Poor People) ಕೊಳಚೆ ಅಭಿವೃದ್ಧಿ ಮಂಡಳಿ ಮೂಲಕ ರಾಜ್ಯ ಸರ್ಕಾರ(Government of Karnataka) ಧಾರವಾಡದ(Dharwad) ಲಕಮನಹಳ್ಳಿಯಲ್ಲಿ 1073 ಹಾಗೂ ಹುಬ್ಬಳ್ಳಿಯ(Hubballi) ಮಂಟೂರಿನಲ್ಲಿ 1600 ಗುಂಪು ಮನೆ (Group House Project) ನಿರ್ಮಿಸಲು 125 ಕೋಟಿ ನೀಡಿದೆ. ಲಕಮನಹಳ್ಳಿಯಲ್ಲಿ ಐದು ವರ್ಷಗಳ ಹಿಂದೆ, ಮಂಟೂರಿನಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಮನೆಗಳು ನಿರ್ಮಾಣಗೊಂಡಿವೆ. ದುರಂತದ ಸಂಗತಿ ಏನೆಂದರೆ, ಸ್ಲಂ ಬೋರ್ಡ್(Slum Board) ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೋ ಈ ವರೆಗೂ ಫಲಾನುಭವಿಗಳಿಗೆ(Beneficiaries) ಮನೆಗಳ ಹಂಚಿಕೆಯಾಗಿಲ್ಲ.
Mekedatu Politics: ಕಾಂಗ್ರೆಸ್ ಪಾದಯಾತ್ರೆಯಿಂದ ಮೇಕೆದಾಟು ಇನ್ನಷ್ಟು ಕ್ಲಿಷ್ಟ: ಶೆಟ್ಟರ್
ಅರ್ಜಿ ಹಾಕಿ ಅದರೊಂದಿಗೆ ಪ್ರತಿಯೊಬ್ಬರೂ 1.10 ಲಕ್ಷ ನೀಡಿದ ಫಲಾನುಭವಿಗಳು ವರ್ಷಕ್ಕೆ ಎರಡು ಬಾರಿ ವಿರೋಧ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ, ಸ್ಲಂ ಬೋರ್ಡ್ ಮತ್ತಿಗೆ ಹಾಕಿದ್ದೂ ಆಯ್ತು. ಪ್ರಯೋಜನವಿಲ್ಲ. ಕುಂಟು ನೆಪ ಹೇಳುವ ಅಧಿಕಾರಿಗಳು ಐದಾರು ವರ್ಷಗಳಾದರೂ ನಿರಾಶ್ರಿತರಿಗೆ(Refugees) ಮನೆ ನೀಡುವಲ್ಲಿ ಪ್ರಯತ್ನ ಮಾಡದೇ ಇರುವುದು ಬೇಸರದ ಸಂಗತಿ. ಇದೊಂದು ದೊಡ್ಡ ಯೋಜನೆ ಎಂದು ಬಿಂಬಿಸಿದ ಶಾಸಕ ಅರವಿಂದ ಬೆಲ್ಲದ(Aravind Bellad) ಅವರ ಪ್ರಯತ್ನವು ವಿಫಲವಾಗಿ ಕೊನೆಗೆ ಈ ಯೋಜನೆಯೇ ಅತಂತ್ರವಾಗಿದೆ.
ಏತಕ್ಕೆ ವಿಳಂಬ?:
ರಾಜಕೀಯ ಪ್ರಭಾವದಿಂದ ಅರ್ಹರನ್ನು ಕೈ ಬಿಟ್ಟು ಬಿಜೆಪಿ ಕಾರ್ಯಕರ್ತರಿಗೆ(BJP Activists) ಮನೆ ನೀಡಲಾಗುತ್ತಿದೆ ಎಂಬ ಆರೋಪವೂ ಇದೆ. ಅಧಿಕಾರಿಗಳು ಸಹ ತಮಗೇ ಬೇಕಾದವರ ಹೆಸರು ಸೇರಿಸಿದ್ದಾರೆ ಎಂಬ ಮತ್ತೊಂದು ಆರೋಪವೂ ಇದೆ. ಜತೆಗೆ ಇನ್ನೂ ಕಾಮಗಾರಿ ಮುಗಿದಿಲ್ಲ. ವಿದ್ಯುತ್ ಸಂಪರ್ಕ ಕೊಟ್ಟಿಲ್ಲ ಎಂಬ ಆರೋಪವನ್ನು ಅಧಿಕಾರಿಗಳು ಮಾಡುತ್ತಾರೆ. ಈ ಬಗ್ಗೆ ಸ್ಲಂ ಬೋರ್ಡ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಈಗಾಗಲೇ ಫಲಾನುಭವಿಗಳು ಹಲವು ಬಾರಿ ಮನೆಗಳ ಎದುರು, ಸ್ಲಂ ಬೋರ್ಡ್ ಎದುರು ಪ್ರತಿಭಟನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಕಳೆದ ಅಕ್ಟೋಬರ್ 2ರಂದು ಸಚಿವ ವಿ. ಸೋಮಣ್ಣ ಅವರು ಮನೆಗಳ ಹಸ್ತಾಂತರ ಮಾಡುತ್ತಾರೆ ಎಂಬ ಹೇಳಿಕೆ ಸಹ ನೀಡಿದ್ದರು. ಆದರೆ, ಅಕ್ಟೋಬರ್ ಮುಗಿದು ಮತ್ತೊಂದು ಜನವರಿ ಬಂದರೂ ಹಂಚಿಕೆಯ ಸುದ್ದಿಯೇ ಇಲ್ಲ.
Karnataka Politics: 'ಎಂ.ಬಿ. ಪಾಟೀಲ್ ರಾಜಕಾರಣಿಯಾಗಿರಲು ನಾಲಾಯಕ್'
ಈಗಾಗಲೇ ಐದು ಅಂತಸ್ತಿನಲ್ಲಿ ಐದು ವರ್ಷಗಳ ಹಿಂದೆಯೇ ಮನೆ ನಿರ್ಮಾಣವಾಗಿವೆ. ನಾವು ಸಹ ಮನೆಗಾಗಿ ಹಣ ತುಂಬಿ ಹಲವು ವರ್ಷಗಳಾಗಿವೆ. ನಿರ್ವಹಣೆ ಇಲ್ಲದ ಕಾರಣ ಅವುಗಳು ಹಾಳಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಕೂಡಲೇ ರಾಜಕೀಯ, ಪ್ರತಿಷ್ಠೆ ಕೈ ಬಿಟ್ಟು ಮನೆಗಳನ್ನು ಅರ್ಹ ಫಲಾನುಭವಿಗಳ ಹಂಚಿಕೆ ಮಾಡಬೇಕು ಎಂದು ಲಕ್ಷ್ಮೀಸಿಂಗನಕೇರಿಯ ನಿವಾಸಿ ಹನುಮಂತ ಕೋರಿ ಆಗ್ರಹಿಸುತ್ತಾರೆ.
ಕೊಳಚೆ ನಿವಾಸಿಗಳಿಗೆಂದೇ ನಿರ್ಮಿಸಿರುವ 2673 ಮನೆಗಳ ಹಂಚಿಕೆ ವಿಷಯವಾಗಿ ಪದೇ ಪದೇ ಪ್ರತಿಭಟಿಸಿದಾಗ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಅದರಲ್ಲೂ ಜಿಲ್ಲಾಧಿಕಾರಿಗಳು ಗಾಂಧಿ ಜಯಂತಿ ದಿನ ಹಂಚಿಕೆ ಮಾಡುವ ಭರವಸೆ ನೀಡಿದ್ದರು. ಗಾಂಧಿ ಜಯಂತಿ ಹೋಗಿ ಗಣರಾಜ್ಯೋತ್ಸವ(Republic Day) ಬರುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳ ಹೇಳಿಕೆ ಇದಾಗಿದ್ದು, ಶಾಸಕರ ಒತ್ತಡಕ್ಕೆ ಮಣಿಯುವುದು ಬೇಡ. ಇದನ್ನು ಬಡ ಜನರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಒಂದು ತಿಂಗಳೊಳಗೆ ನಿರ್ಮಾಣವಾಗಿರುವ ಮನೆಗಳ ಹಂಚಿಕೆ ಆಗದೇ ಇದ್ದಲ್ಲಿ ಫಲಾನುಭವಿಗಳೊಂದಿಗೆ ನಿರಂತರ ಧರಣಿ ಹೂಡಬೇಕಾಗುತ್ತದೆ ಅಂತ ಜೆಡಿಎಸ್(JDS) ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ(Gururaj Hunasimarad) ತಿಳಿಸಿದ್ದಾರೆ.