* ಹುಬ್ಬಳ್ಳಿಯಿಂದ ಸಂಜೆ 4.45ಕ್ಕೆ ನಿಟ್ಟು ರಾತ್ರಿ 10.20ಕ್ಕೆ ವಿಜಯಪುರ ತಲುಪಲಿದೆ
* ಯಶವಂತಪುರ-ಬೆಳಗಾವಿ ವಿಶೇಷ ರೈಲು ಸಂಚಾರ
* ಪೊಂಗಲ್ ಹಬ್ಬ ಹಾಗೂ ಶಬರಿಮಲೆ ಯಾತ್ರೆಯ ಪ್ರಯುಕ್ತ
ಹುಬ್ಬಳ್ಳಿ(ಜ.10): ಪೊಂಗಲ್ ಹಬ್ಬ ಹಾಗೂ ಶಬರಿಮಲೆ ಯಾತ್ರೆಯ ಪ್ರಯುಕ್ತ ಯಶವಂತಪುರ-ಬೆಳಗಾವಿ(Yeshwanthpur-Belagavi) ವಿಶೇಷ ರೈಲು ಸಂಚರಿಸಲಿದೆ. ಇದೇ ವೇಳೆ ಹುಬ್ಬಳ್ಳಿ- ವಿಜಯಪುರ(Hubballo-Vijayapur) ಮಧ್ಯೆ ಇಂಟರ್‌ಸಿಟಿ ರೈಲು(Intercity Train) ಪುನಾರಂಭವಾಗಲಿದೆ. ಯಶವಂತರ- ಬೆಳಗಾವಿ-ಯಶವಂತಪುರ ಏಕೈಕ ಸೇವೆಯ ವಿಶೇಷ ಎಕ್ಸ್‌ಪ್ರೆಸ್ ರೈಲು ಜ. 13ರಂದು ಯಶವಂತಪುರದಿಂದ ಹಾಗೂ ಜ. 16ರಂದು ಬೆಳಗಾವಿಯಿಂದ ಸಂಚರಿಸಲಿದೆ.
13ರಂದು ರಾತ್ರಿ 9.30ಕ್ಕೆ ಯಶವಂತರಪುರದಿಂದ ಬಿಡುವ ಈ ರೈಲು, ಬೆಳಗಾವಿಯನ್ನು ಮರುದಿನ ಬೆಳಗ್ಗೆ 8.25ಕ್ಕೆ ತಲುಪಲಿದೆ. ಅದೇ ರೀತಿ ಜ. 16ರಂದು ಬೆಳಗಾವಿಯಿಂದ ಬೆಳಗ್ಗೆ 8.30ಕ್ಕೆ ಬಿಡುವ ರೈಲು ಅದೇ ದಿನ ರಾತ್ರಿ 9.20ಕ್ಕೆ ತಲುಪಲಿದೆ. ಈ ರೈಲಿನಲ್ಲಿ ಎರಡು ಎಸಿ 3 ಟೈರ್, ಎಂಟು ಸ್ಪೀಪರ್ ಎರಡನೆಯ ದರ್ಜೆ, ನಾಲ್ಕು ಸಾಮಾನ್ಯ ಎರಡನೆಯ ದರ್ಜೆಯ ಬೋಗಿಗಳು ಸೇರಿದಂತೆ 16 ಬೋಗಿಗಳು ಇರಲಿವೆ.
Railway News : ಮಿಷನ್ ಜೀವನ್ ರಕ್ಷಾ ಅಡಿಯಲ್ಲಿ 2021ರಲ್ಲಿ 601 ಮಂದಿಯ ರಕ್ಷಣೆ ಮಾಡಿದ ರೈಲ್ವೇ ರಕ್ಷಣಾ ಪಡೆ!
ವಿಜಯಪುರ ಇಂಟರ್‌ಸಿಟಿ ಪುನಾರಂಭ:
ಇನ್ನೂ ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ನಿತ್ಯ ಸೇವೆಯ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸೇವೆ ಮರು ಸಂಚರಿಸಲು ನಿರ್ಧರಿಸಿದೆ.
ಜ. 11ರಿಂದ ಮುಂದಿನ ಸೂಚನೆವರೆಗೂ (ರೈಲು ಸಂಖ್ಯೆ 07329) ಹುಬ್ಬಳ್ಳಿ-ವಿಜಯಪುರ ಹಾಗೂ ಜ. 12ರಿಂದ ಮುಂದಿನ ಸೂಚನೆವರೆಗೂ (ರೈಲು ಸಂಖ್ಯೆ- 07330) ವಿಜಯಪುರ- ಎಸ್‌ಎಸ್‌ಎಸ್ ಹುಬ್ಬಳ್ಳಿ ಮಧ್ಯೆ ರೈಲು ಸಂಚರಿಸಲಿದೆ.
ಹುಬ್ಬಳ್ಳಿಯಿಂದ ಸಂಚರಿಸುವ ರೈಲು ಸಂಜೆ 4.45ಕ್ಕೆ ಇಲ್ಲಿಂದ ಬಿಡಲಿದ್ದು, ರಾತ್ರಿ 10.20ಕ್ಕೆ ವಿಜಯಪುರ ತಲುಪಲಿದೆ. ಇನ್ನೂ ವಿಜಯಪುರದಿಂದ ಬೆಳಗ್ಗೆ 11 ಗಂಟೆಗೆ ಬಿಡುವ ರೈಲು ಸಂಜೆ 5.45ಕ್ಕೆ ಹುಬ್ಬಳ್ಳಿಗೆ ತಲುಪಲಿದೆ.
ಈ ರೈಲಿನಲ್ಲಿ ಐದು ಸ್ಲೀಪರ್ ಎರಡನೆಯ ದರ್ಜೆ, ಆರು ಸಾಮಾನ್ಯ 2ನೇ ದರ್ಜೆ ಹಾಗೂ ಎರಡು ಸಾಮಾನ್ಯ ದರ್ಜೆ ಲಗೇಜ್ ಕಂ ಬ್ರೇಕ್ ವ್ಯಾನ್/ ಅಂಗವಿಕಲ ಬೋಗಿಗಳು ಸೇರಿದಂತೆ ಒಟ್ಟು 13 ಬೋಗಿಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು- ಮೀರಜ್ ರೈಲಿನ ವೇಗ ಹೆಚ್ಚಳ
ಹುಬ್ಬಳ್ಳಿ(Hubballi): ನೈರುತ್ಯ ರೈಲ್ವೆ ವಲಯದ(South Western Railway) ವ್ಯಾಪ್ತಿಯಲ್ಲಿ ಸಂಚರಿಸುವ ಬೆಂಗಳೂರು- ಮೀರಜ್(Bengaluru-Miraj) ರೈಲಿನ ವೇಗವನ್ನು ಹೆಚ್ಚಿಸಲಾಗಿದೆ. ಜತೆಗೆ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದರಿಂದ ಉಳಿದ ಕೆಲ ರೈಲುಗಳ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದೆ.
ಕೆಎಸ್‌ಆರ್ ಬೆಂಗಳೂರು - ಮೀರಜ್ (ರೈಲು ಸಂಖ್ಯೆ 16589) ರಾತ್ರಿ 10.05 ಬದಲಿಗೆ 11 ಗಂಟೆಗೆ ಬೆಂಗಳೂರನ್ನು ಬಿಡಲಿದೆ. ಹುಬ್ಬಳ್ಳಿ 5.35ರ ಬದಲಿಗೆ 6 ಗಂಟೆಗೆ ಆಗಮಿಸಿ ಇಲ್ಲಿಂದ 6.10ಕ್ಕೆ ಮೀರಜ್‌ನತ್ತ ಪ್ರಯಾಣ ಬೆಳೆಸಲಿದೆ. ಮೀರಜ್‌ಗೆ ಮಧ್ಯಾಹ್ನ 12.05ರ ಬದಲಿಗೆ 12.10 ನಿಮಿಷಕ್ಕೆ ತಲುಪಲಿದೆ.
ಈ ರೈಲಿನ ವೇಗವನ್ನು ಹೆಚ್ಚಿಸಿದ ಪರಿಣಾಮದ ಉಳಿದ ಕೆಲ ರೈಲುಗಳ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದೆ. ಕೆಎಸ್‌ಆರ್ ಬೆಂಗಳೂರು- ಜೋಧಪುರ (ರೈಲಿನ ಸಂಖ್ಯೆ 16508) ರೈಲು ಬೆಂಗಳೂರನ್ನು ರಾತ್ರಿ 10.45ರ ಬದಲಿಗೆ 10.20ಕ್ಕೆ ಬಿಡಲಿದೆ. ಈ ರೈಲು ಹುಬ್ಬಳ್ಳಿಯನ್ನು 6.10ಕ್ಕೆ ತಲುಪಲಿದೆ. ಇಲ್ಲಿಂದ 6.20ಕ್ಕೆ ಹೊರಡುವ ಈ ರೈಲು ಮೀರಜ್‌ನ್ನು 12.45ರ ಬದಲಿಗೆ 12.50ಕ್ಕೆ ತಲುಪಲಿದೆ. ಮೀರಜ್‌ನಿಂದ ಜೋಧಪುರವರೆಗೆ ಯಾವುದೇ ಬದಲಾವಣೆಯಿಲ್ಲ. ಇದು ಜ.8ರಿಂದ ಅನ್ವಯವಾಗಲಿದೆ.
Karnataka Train Service : ಹೊಸ ರೈಲು ಮಾರ್ಗ ಯೋಜನೆಗೆ ವಿರೋಧ
ಇನ್ನೂ ಮೈಸೂರು- ಅಜ್ಮೀರ್ ಎಕ್ಸ್‌ಪ್ರೆಸ್ (ರೈಲಿನ ಸಂಖ್ಯೆ 16210) ಮೈಸೂರಿನಿಂದ ಎಂದಿನಂತೆ ಸಂಜೆ 7ಗಂಟೆಗೆ ಹೊರಡಲಿದೆ. ಆದರೆ ಬೆಂಗಳೂರನಿಂದ 10.10ಕ್ಕೆ ತಲುಪುವ ಈ ರೈಲು ಅಲ್ಲಿಂದ ಮೊದಲು 10.40ಕ್ಕೆ ಹೊರಡುತ್ತಿತ್ತು. ಆದರೆ ಬದಲಾದ ಸಮಯದಂತೆ 10.20ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಹುಬ್ಬಳ್ಳಿಗೆ ಎಂದಿನಂತೆ ಬೆಳಿಗ್ಗೆ 6.10ಕ್ಕೆ ತಲುಪಿ, ಇಲ್ಲಿಂದ 6.20ಕ್ಕೆ ಹೊರಡಲಿದೆ. ಮೀರಜ್‌ನ್ನು ಮಧ್ಯಾಹ್ನ 12.45ಕ್ಕೆ ತಲುಪಿ ಅಲ್ಲಿಂದ ಅಜ್ಮೀರ್ ಕಡೆಗೆ 12.50ಕ್ಕೆ ಹೊರಡಲಿದೆ. ಮೀರಜ್‌ನಿಂದ ಅಜ್ಮೀರ್‌ವರೆಗೂ ಯಾವುದೇ ಬದಲಾವಣೆಯಿಲ್ಲ. ಜ.10ರಿಂದ ಈ ಸಮಯ ಅನ್ವಯವಾಗುವುದು.
ಕೆಎಸ್‌ಆರ್ ಬೆಂಗಳೂರು- ಗಾಂಧಿಧಾಮ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ- 16506) ರಾತ್ರಿ 10.45ರ ಬದಲಿಗೆ 10.20ಕ್ಕೆ ಬಿಡಲಿದೆ. ಹುಬ್ಬಳ್ಳಿಗೆ ಎಂದಿನಂತೆ 6.10ಕ್ಕೆ ತಲುಪಿ ಇಲ್ಲಿಂದ 6.20ಕ್ಕೆ ಹೊರಡಲಿದೆ. ಮೀರಜ್‌ನ್ನು ಮಧ್ಯಾಹ್ನ 12.45ಕ್ಕೆ ತಲುಪುವ ಈ ರೈಲು ಅಲ್ಲಿಂದ 12.50ಕ್ಕೆ ಹೊರಡಲಿದೆ. ಮೀರಜ್ - ಗಾಂಧಿಧಾಮದ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಬದಲಾವಣೆಯೂ ಜ.14ರಿಂದ ಅನ್ವಯವಾಗಲಿದೆ.
ಇನ್ನೂ ಯಶವಂತಪುರ- ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದ ಮಧ್ಯೆ ಸಂಚರಿಸುವ ಹುಬ್ಬಳ್ಳಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ - 16543) ರಾತ್ರಿ 11.50ರ ಬದಲಿಗೆ ಮಧ್ಯರಾತ್ರಿ 12.05ಗಂಟೆಗೆ ಬಿಡಲಿದೆ. ತುಮಕೂರನ್ನು ರಾತ್ರಿ 12.38ರ ಬದಲಿಗೆ 12.55ಕ್ಕೆ ತಲುಪಲಿದೆ. ಅಲ್ಲಿಂದ 12.57ಕ್ಕೆ ಹೊರಡಲಿದೆ. ತುಮಕೂರನಿಂದ ಹುಬ್ಬಳ್ಳಿವರೆಗೂ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಬದಲಾವಣೆಯೂ ಜ.13ರಿಂದ ಅನ್ವಯವಾಗಲಿದೆ ಎಂದು ನೈರುತ್ಯ ರೈಲ್ವೆ ವಲಯ ಪ್ರಕಟಣೆ ಸ್ಪಷ್ಟಪಡಿಸಿದೆ.