Insulted Hindu God: ಕೊರಗಜ್ಜನ ನಂತರ ಮತ್ತೆ ದಕ್ಷಿಣ ಕನ್ನಡದಲ್ಲಿ ಹಿಂದು ದೇವರ ಅವಹೇಳನ

Kannadaprabha News   | Asianet News
Published : Jan 10, 2022, 08:55 AM ISTUpdated : Jan 10, 2022, 10:05 AM IST
Insulted Hindu God: ಕೊರಗಜ್ಜನ ನಂತರ ಮತ್ತೆ ದಕ್ಷಿಣ ಕನ್ನಡದಲ್ಲಿ ಹಿಂದು ದೇವರ ಅವಹೇಳನ

ಸಾರಾಂಶ

*   ಅರಣ್ಯಾಧಿಕಾರಿ ಸಂಜೀವ್‌ ಕಾಣಿಯೂರು ವಿರುದ್ಧ ಜನರ ಕಿಡಿ *   ಹಿಂದು ದೇವರ ಬಗ್ಗೆ ಅವಹೇಳನ ಮಾಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌  *   ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ 

ಪುತ್ತೂರು(ಜ.10):  ತುಳುನಾಡಿನ(Tulu Nadu) ಆರಾಧ್ಯ ದೈವ ಕೊರಗಜ್ಜನ(Koragajja) ಕುರಿತು ಮುಸ್ಲಿಂ(Muslim) ಸಮುದಾಯದ ಮದುವೆಯ ಔತಣಕೂಟದಲ್ಲಿ ಅಪಮಾನ ಮಾಡಿದ ಬೆನ್ನಲ್ಲೇ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯಲ್ಲಿ ಮತ್ತೊಂದು ಇಂತಹದ್ದೇ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗುತ್ತಿದೆ.  ಪುತ್ತೂರು ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹರಿಬಿಟ್ಟಿದ್ದು, ಗೋಮಾತೆ(Cow), ಹಿಂದು ದೇವರ(Hindu God) ಬಗ್ಗೆ ಅಪಮಾನಕಾರಿಯಾಗಿ ಉಲ್ಲೇಖಿಸಿದ್ದಾರೆ. ಇವರ ವಿರುದ್ಧ ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. 

ಈತ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ(Dr Veerendra Heggade) ಹಾಗೂ ಬ್ರಾಹ್ಮಣ ಸಮುದಾಯದ(Brahmin Community) ಬಗ್ಗೆಯೂ ಅಶ್ಲೀಲ ಪದ ಬಳಸಿ ಬರೆದಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ತಕ್ಷಣ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೊರಗಜ್ಜನಿಗೆ ದೇವಾಲಯ ಕಟ್ಟಿಸಿ ದಿನನಿತ್ಯ ಪೂಜೆ ಸಲ್ಲಿಸುತ್ತಿರುವ ಮುಸ್ಲಿಂ ವ್ಯಕ್ತಿ!

ಪವಾಡ ಪುರುಷ ಕೊರಗಜ್ಜನ ಹುಂಡಿಯಲ್ಲಿ ಕಾಂಡೋಮ್

ಮಂಗಳೂರು(Mangaluru): ಪವಾಡ ಪುರುಷ ಎಂದೇ ಕರೆಸಿಕೊಳ್ಳುವ ಕೊರಗಜ್ಜ ದೈವದ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು  ಕಾಂಡೋಮ್(Condom) ಹಾಕಿದ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆ 2021ರ ಜ.20 ರಂದು ನಡೆದಿತ್ತು.
ಮಂಗಳೂರು ಹೊರವಲಯದ ಉಳ್ಳಾಲದ ಕೇಂದ್ರ ಬಸ್‌ ನಿಲ್ದಾಣದ ಬಳಿ ಇರುವ ಸ್ವಾಮಿ ಕೊರಗಜ್ಜ ಮತ್ತು ಗುಳಿಗಜ್ಜನ ಕ್ಷೇತ್ರದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ್ದರು. 

ಕಾಂಡೋಮ್ ಮತ್ತು ನಿಂದನಾರ್ಹ ಬರಹಗಳುಳ್ಳ ಭಿತ್ತಿಪತ್ರವನ್ನು ಹಾಕಿ ವಿಕೃತಿ ಮೆರೆದಿದ್ದರು. ಯಡಿಯೂರಪ್ಪ(BS Yediyurappa), ವಿಜಯೇಂದ್ರ(BY Vijayendra) ಹಾಗೂ ಇನ್ನಿತರ ಬಿಜೆಪಿ(BJP) ನಾಯಕರ ಚಿತ್ರಗಳನ್ನು ವಿರೂಪಗೊಳಿಸಿ ಅವಹೇಳನ ಮಾಡಿದ್ದು, ಕಾಣಿಕೆ ಡಬ್ಬಿಯ ಹಣ ತೆಗೆಯುವಾಗ ಈ ಘಟನೆ ಬೆಳಕಿಗೆ ಬಂದಿತ್ತು.

ಬೆಂಗಳೂರಿನ ಕೆ.ಆರ್‌. ಐಡಿಯಲ್‌ ನಿಗಮದ ಅಧ್ಯಕ್ಷ ಎಂ ರುದ್ರೇಶ್‌ ಅವರಿಗೆ ಶುಭಕೋರಿದ ಫ್ಲೆಕ್ಸ್‌. ರಾಜಕಾರಣಿಗಳನ್ನು ಹೊಡೆದು ಕೊಲ್ಲಬೇಕು ಎಂಬ ಬರಹ. ರಕ್ತ ಹೀರುವ ರಾಜಕಾರಣಿಗಳನ್ನು ಅಟ್ಟಾಡಿಸಿ ಹಿಡಿದು ಕೊಲ್ಲಬೇಕು ಎಂದು ಬರೆದು ಹಾಕಲಾಗಿತ್ತು. 

ಈ ಸಂಬಂಧ ಕೊರಗಜ್ಜ ಸೇವಾ ಸಮಿತಿಯವರು ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಮಂಗಳೂರು ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. 

ಕೊರಗಜ್ಜ ಸೇರಿದಂತೆ ಮಂಗಳೂರಿನ ದೇಗುಲಗಳಲ್ಲಿ ಕಾಂಡೋಮ್ ಹಾಕಿದ್ದವ ಅರೆಸ್ಟ್

ಕರಾವಳಿ ಭಾಗದ  ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸುತ್ತಿದ್ದ ಆರೋಪಿಯನ್ನು ಪೊಲೀಸರು(Police) ಬಂಧಿಸಿದ್ದರು(Arrest). 

ಕೊರಗಜ್ಜನ ಶಕ್ತಿ ಮತ್ತೊಮ್ಮೆ ಸಾಬೀತು, ಕಾಂಡೋಮ್ ಎಸೆದ ದುಷ್ಕರ್ಮಿ ರಕ್ತಕಾರಿ ಸತ್ತ!

ಮೂಲತಃ ಹುಬ್ಬಳ್ಳಿಯ ಉಣ್ಕಲ್ ಗ್ರಾಮದ ನಿವಾಸಿ ದೇವದಾಸ್ ದೇಸಾಯಿ(62) ಬಂಧಿತ ಆರೋಪಿಯಾಗಿದ್ದ, ಕಳೆದ 24 ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿರುವ ದೇವದಾಸ್, ಸದ್ಯ ಸರಿಯಾದ ಕೆಲಸವಿಲ್ಲದೇ ಗುಜಿರಿ ಪೇಪರ್ ಬಾಕ್ಸ್ ಗಳನ್ನು ಮಾರಿಕೊಂಡು ಒಬ್ಬಂಟಿ ಜೀವನ ನಡೆಸುತ್ತಿದ್ದ, ಮಂಗಳೂರು ಭಾಗದ ದೈವಸ್ಥಾನ, ದೇವಸ್ಥಾನ, ಸಿಖ್ ಗುರುದ್ವಾರ, ಬಸದಿ, ದರ್ಗಾಗಳಿಗೆ(Dargah) ಕಾಂಡೋಮ್ ಅಪವಿತ್ರಗೊಳಿಸುತ್ತಿದ್ದ. ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರ, ಏಸುವಿನ ಕುರಿತ ಲೇಖನ ಹಾಕಿದ್ದ ದೇವದಾಸ್‌, ನಿನ್ನೆ(ಡಿ.28) ಮಾರ್ನಮಿಕಟ್ಟೆಯ ಕೊರಗಜ್ಜ ಕಟ್ಟೆಗೆ ಬಳಸಿದ ಕಾಂಡೋಮ್ ಹಾಕಿದ್ದನು.

ಈ ವೇಳೆ ದೇವದಾಸ್ ಚಲನವಲನ ಸಿಸಿಟಿವಿಯಲ್ಲಿ ದಾಖಲಾದ ಹಿನ್ನೆಲೆ ಪೊಲೀಸರು ದೇವದಾಸ್‌ನನ್ನು ವಶಕ್ಕೆ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಎಲ್ಲಾ ಕೃತ್ಯಗಳನ್ನ ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದನು. ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ, ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ, ಕೊಂಡಾಣ ದೈವಸ್ಥಾನ ಸೇರಿ 18 ಕಡೆ ಅಪವಿತ್ರ ಮಾಡಿದ್ದಾನೆ ಎಂದು ತಿಳಿದುಬಂದಿದೆ. 

PREV
Read more Articles on
click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!