ಮಂಗಳೂರು(ನ.26): ಮಂಗಳೂರಿನಲ್ಲಿ(Mangaluur) ವಾಂತಿ ಭೇದಿ, ಹೊಟ್ಟೆನೋವು, ಜ್ವರ ಕಾಣಿಸಿಕೊಳ್ಳುತ್ತಿದ್ದು ಜನರು ದಿಢೀರ್ ಅನಾರೋಗ್ಯದಿಂದ ಸುಸ್ತಾಗಿದ್ದಾರೆ. ಕೋವಿಡ್ ಆತಂಕ ಮುಗಿದ ಬೆನ್ನಲ್ಲೇ ಕರಾವಳಿಗೆ(Coastal) ನೋರೋ ವೈರಸ್(Noro) ಆತಂಕ ಹೆಚ್ಚಾಗಿದ್ದು ಜನರು ಈ ರೋಗ ಲಕ್ಷಣಗಳಿಂದ ಹೈರಾಣಾಗಿದ್ದಾರೆ. ವಾಂತಿ, ಹೊಟ್ಟೆ ನೋವಿನಂತಹ ಹಲವು ಲಕ್ಷಣಗಳು ಜನರನ್ನು ಪೀಡಿಸುತ್ತಿದ್ದು, ಬಹಳಷ್ಟು ಜನರಲ್ಲಿ ಈ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ.
ಕೇರಳ(Kerala) ಗಡಿ ಭಾಗದ ಜಿಲ್ಲೆಯಾದ ಮಂಗಳೂರು(Mangaluru), ಕೊಡಗಿನಲ್ಲಿ ನೋರೋ ಅಲರ್ಟ್ ಮಾಡಲಾಗಿದ್ದು ಕೇರಳದ ವಯನಾಡು ಕಾಲೇಜಿನಲ್ಲಿ ನೋರೋ ವೈರಸ್ ದಾಳಿ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್ ಹೊರಡಿಸಿದೆ. ಗಡಿಭಾಗದಲ್ಲಿ ಪರಸ್ಪರ ಜನರ ಓಡಾಟದಿಂದ ರೋಗದ ಭಯ ಇನ್ನೂ ಹೆಚ್ಚಾಗಿದೆ. ವಯನಾಡಿನ ಕಾಲೇಜು ವಿದ್ಯಾರ್ಥಿಗಳಲ್ಲಿ ಕಂಡುಬಂದಿರುವ ನೋರೋ ವೈರಸ್ ಭೀತಿ ಕೊಡಗು ಹಾಗೂ ಕರಾವಳಿ ಭಾಗಕ್ಕೂ ಕಾಡುತ್ತಿದ್ದು ಜನರು ಆತಂಕದಲ್ಲಿದ್ದಾರೆ.
Norovirus | ಕೇರಳದಲ್ಲಿ ಡೇಂಜರಸ್ ನ್ಯೂರೊ ವೈರಸ್ ಪತ್ತೆ : ಗಡಿಯಲ್ಲಿ ಕಟ್ಟೆಚ್ಚರ
ನೋರೋ ವೈರಸ್ ಸೋಂಕಿತನ ಆಹಾರ, ನೀರು, ಇತರೆ ಸಂಪರ್ಕಗಳಿಂದ ಹರಡುವ ಭೀತಿ ಇದ್ದು ಇದು ಮತ್ತಷ್ಟು ಅಪಾಯ ಹೆಚ್ಚಿಸುವ ಸಾಧ್ಯತೆ ಇದೆ. ನೋರೋ ವೈರಸ್ ಮನುಷ್ಯ ದೇಹದ ಕರುಳನ್ನು ಸೇರಿದರೆ ಸಾವು ಸಂಭವಿಸುವ ಸಾಧ್ಯತೆಯೂ ಇದೆ. ಕುಡಿಯುವ ನೀರಿನಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ನೋರೋ ವೈರಸ್ ತಗುಲುವ ಆತಂಕ ಹೆಚ್ಚಾಗಿದೆ. ಈ ನಿಟ್ಟಿನಲ್ಲಿಯೂ ನೈರ್ಮಲ್ಯ ಕಾಪಾಡುವ ಅಗತ್ಯವಿದೆ.
ಭೇದಿ, ಹೊಟ್ಟೆನೋವು, ವಾಂತಿ, ಜ್ವರ ಲಕ್ಷಣ ಇದ್ದಲ್ಲಿ ತಕ್ಷಣ ಆರೋಗ್ಯ ಇಲಾಖೆ ಸಂಪರ್ಕಿಸಲು ಮನವಿ ಮಾಡಲಾಗಿದೆ. ದ.ಕ ಜಿಲ್ಲಾ ಅರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಮನವಿ ಮಾಡಿದ್ದು ಜನರಿಗೆ ಈ ಬಗ್ಗೆ ಎಚ್ಚರವಾಗಿರುವಂತೆ ತಿಳಿಸಿದ್ದಾರೆ. ರೋಗ ಲಕ್ಷಣ ಇದ್ದವರು ನಿರ್ಲಕ್ಷ್ಯ ಮಾಡಿದಲ್ಲಿ ಸಾವು ಕೂಡಾ ಸಂಭವಿಸೋ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ರಾಜ್ಯ ಸರ್ಕಾರದ ಸೂಚನೆಯಂತೆ ಗಡಿ ಜಿಲ್ಲೆಗಳಲ್ಲಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿ ನಿಗಾ ಇಡಲಾಗಿದೆ.
ದ.ಕ ಜಿಲ್ಲೆಯ ಎಲ್ಲಾ ನೀರಿನ ಮೂಲಗಳ ಪರೀಕ್ಷೆಗೆ ರಾಜ್ಯ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು ದ.ಕ ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆ, ಆಸ್ಪತ್ರೆಗಳಿಗೆ ನೋರೋ ವೈರಸ್ ಅಲರ್ಟ್ ಹೊರಡಿಸಲಾಗಿದೆ. ಪ್ರತೀ ನಿತ್ಯ ನೋರೋ ವೈರಸ್ ಬಗ್ಗೆ ವರದಿ ಸಲ್ಲಿಸಲು ರಾಜ್ಯ ಆರೋಗ್ಯ ಇಲಾಖೆ ಸುತ್ತೋಲೆ ಕಳುಹಿಸಲಾಗಿದೆ.
ಶುಚಿತ್ವ ಕಾಪಾಡಿಕೊಳ್ಳುವುದು ಅತೀ ಮುಖ್ಯ
ಶುಚಿತ್ವ ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ. ಸುತ್ತಮುತ್ತಲಿನ ಪರಿಸರ ಶುಚಿತ್ವ ಕಾಪಾಡಿಕೊಳ್ಳಬೇಕು. ಇದರ ಜೊತೆಗೆ ವೈಯುಕ್ತಿ ಶುಚಿತ್ವಕ್ಕೂ ಪ್ರಾಮುಖ್ಯತೆ ನೀಡಬೇಕು. ವೈದ್ಯರ ಸೂಚನೆಯಿಂದ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಕೈಗಳನ್ನು ಸೋಪಿಲ್ಲಿ ಶುಚಿಯಾಗಿ ತೊಳೆಯಬೇಕು. ಇನ್ನು ಸಾಕು ಪ್ರಾಣಿಗಳಿರುವ ಮನೆಯಲ್ಲಿ, ಪ್ರಾಣಿಗಳನ್ನು ಸಾಕುತ್ತಿರುವವರು ಹೆಚ್ಚಿನ ಶುಚಿತ್ವ ಕಾಪಾಡಿಕೊಳ್ಳಬೇಕು. ಕುಡಿಯುವ ನೀರಿ ಮೂಲಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ. ತರಕಾರಿಳನ್ನು ಸರಿಯಾಗಿ ತೊಳೆದು ಬಳಕೆ ಮಾಡಬೇಕು. ಇನ್ನು ಮೀನು, ಮಾಂಸ ಸೇರಿದಂತೆ ಇತರ ಮಾಂಸಾಹಾರಗಳನ್ನು ಸರಿಯಾಗಿ ಬೇಯಿಸಿ ಸೇವಿಸಬೇಕು.
Norovirus ಎಂದರೇನು ?
ನೋರೋವೈರಸ್ ಕಲುಷಿತ ನೀರು, ಆಹಾರ ಮೂಲಕ ಹರಡುವ ರೋಗವಾಗಿದೆ. ಪ್ರಮುಖವಾಗಿ ಪ್ರಾಣಿಗಳಿಂದ ಹರಡುವ ರೋಗವಾಗಿದೆ. ಇತ್ತೀಚೆಗೆ ಬ್ರಿಟನ್ ಸೇರಿದಂತೆ ಇತರ ಕೆಲ ರಾಷ್ಟ್ರಗಳಲ್ಲಿ ಈ ರೋಗ ಪತ್ತೆಯಾಗಿತ್ತು. ಇದೀಗ ಭಾರತದಲ್ಲಿ ಮೊದಲ ನೋರೋವೈರಸ್ ಕೇಸ್ ಕೇರಳದಲ್ಲಿ ಪತ್ತೆಯಾಗಿದೆ. ಭಾರತದಲ್ಲಿ ಕೊರೋನಾ ಮೊದಲ ಪ್ರಕರಣ ಕೂಡ ಕೇರಳದಲ್ಲಿ ಪತ್ತೆಯಾಗಿತ್ತು. ಇದೀಗ ಕೇರಳ ಮಾತ್ರವಲ್ಲ ಭಾರತೀಯರ ಆತಂಕ ಕೂಡ ಹೆಚ್ಚಾಗಿದೆ