Mandya Politics :ಅಭಿಷೇಕ್ ಮತ್ತೊಮ್ಮೆ ರಾಜಕೀಯ ಪ್ರವೇಶದ ಸದ್ದು

By Kannadaprabha NewsFirst Published Nov 26, 2021, 11:00 AM IST
Highlights
  • ರಾಜಕೀಯ ಪ್ರವೇಶ ಬಗ್ಗೆ ಆಲೋಚನೆ ಮಾಡಿಲ್ಲ, ಜನ ನಿರ್ಧಾರ ಮಾಡಿದಾಗ ಮಾತ್ರ ನಾನು ರಾಜಕೀಯ ಪ್ರವೇಶ ಮಾಡುವೆ
  • ಅಧಿಕಾರವನ್ನು ನಾವು ಹುಡುಕಿಕೊಂಡು ಹೋಗಬಾರದು. ನಮ್ಮನ್ನು ಅಧಿಕಾರ ಹುಡುಕಿಕೊಂಡು ಬರಬೇಕು - ಅಭಿಷೇಕ್

ಮದ್ದೂರು (ನ.26): ರಾಜಕೀಯ (politics) ಪ್ರವೇಶ ಬಗ್ಗೆ ಆಲೋಚನೆ ಮಾಡಿಲ್ಲ, ಜನ ನಿರ್ಧಾರ ಮಾಡಿದಾಗ ಮಾತ್ರ ನಾನು ರಾಜಕೀಯ ಪ್ರವೇಶ ಮಾಡುವೆ ಎಂದು ಚಿತ್ರನಟ ಅಭಿಷೇಕ್ ಅಂಬರೀಶ್ (Abhishek Ambareesh) ತಿಳಿಸಿದ್ದಾರೆ. ತಾಲೂಕಿನ ಹೊಟ್ಟೆ ಗೌಡನ ದೊಡ್ಡಿ ಗ್ರಾಮದಲ್ಲಿ (village) ಸುದ್ದಿಗಾರರ ಜತೆ ಮಾತನಾಡಿದ ಅವರು, ಅಧಿಕಾರವನ್ನು (power) ನಾವು ಹುಡುಕಿಕೊಂಡು ಹೋಗಬಾರದು. ನಮ್ಮನ್ನು ಅಧಿಕಾರ ಹುಡುಕಿಕೊಂಡು ಬರಬೇಕು. ಕ್ಷೇತ್ರದ ಜನ ಬಯಸಿದಾಗ ರಾಜಕೀಯ ಪ್ರವೇಶ ಮಾಡಿದರೆ ಅದಕ್ಕೆ ಒಂದು ಗೌರವ (Respect) ಮತ್ತು ಬೆಲೆ ಸಿಗುತ್ತದೆ ಎಂದರು.

ತಂದೆ ಅಂಬರೀಶ್, ತಾಯಿ ಸುಮಲತಾ (sumalatha) ಜಿಲ್ಲೆ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರನ್ನು ನಂಬಿ ಅನೇಕ ಕಾರ್ಯಕರ್ತರು, ಮುಖಂಡರು, ಜನರಿದ್ದಾರೆ. ಎಲ್ಲರೂ ನನ್ನ ರಾಜಕೀಯ ಪ್ರವೇಶದ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.  

ಅಂಬರೀಶ್ ನಮ್ಮ ಜೊತೆಯಲ್ಲೇ ಇದ್ದಾರೆ :   ಅಂಬರೀಶ್‌ರನ್ನು (Ambareesh) ಕಳೆದುಕೊಂಡು ಮೂರು ವರ್ಷವಾಗಿದ್ದರೂ ಸದಾ ಅವರು ನನ್ನ ಜೊತೆಯಲ್ಲೇ ಇದ್ದಾರೆ. ವಾಸ್ತವದಲ್ಲಿ ಅವರು ಇಲ್ಲದಿದ್ದರೂ ಅನಾಥ ಭಾವ ನನ್ನನ್ನು ಕಾಡಿಲ್ಲ.

ಅಭಿಮಾನಿಗಳು (Fans) ನನ್ನೊಂದಿಗೆ ಇದ್ದಾರೆ. ಅವರಲ್ಲಿ ಅಂಬಿಯನ್ನು ಕಾಣುತ್ತಿದ್ದೇನೆ ಎಂದು ಸಂಸದೆ ಸುಮಲತಾ (Sumalatha) ಅಂಬರೀಶ್ ತಿಳಿಸಿದ್ದಾರೆ. ಅಂಬರೀಶ್ ಅಭಿಮಾನಿಗಳ ಸಂಘದಿಂದ ಅಂಬರೀಶ್ 3ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಅಂಬಿ ಕಾಯಕ ಪ್ರಶಸ್ತಿ, ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬರೀಶ್ ದೇವರ ಮಗ, ಅವರ ಸಂಗಾತಿಯಾಗಿ ಜೀವನ ನಡೆಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಅವರನ್ನು ಕಳೆದುಕೊಂಡು ಮೂರು ವರ್ಷ ಕಳೆದಿದ್ದರೂ ಅವರ ನೆನಪು ಮಾತ್ರ ಪ್ರತಿ ಸೆಕೆಂಡು ನನ್ನೊಂದಿಗೆ ಇದ್ದೇ ಇದೆ ಎಂದು ಭಾವುಕರಾಗಿ ಹೇಳಿದರು.

ಅಂಬರೀಶ್ ಇಲ್ಲ ಎಂಬ ನೋವು ಶಾಶ್ವತ : 

ಸ್ಯಾಂಡಲ್‌ವುಡ್‌ನ ಹಿರಿಯ ನಟ ಅಂಬರೀಶ್ (Ambareesh) ಅವರು 2018ರ ನವೆಂಬರ್​ 24ರಂದು ನಿಧನರಾದರು. ಅವರನ್ನು ಕಳೆದುಕೊಂಡು ಮೂರು ವರ್ಷ ಕಳೆದಿದೆ. ಇಂದು ಅಂಬಿ ಅವರ ಪುಣ್ಯಸ್ಮರಣೆ. ಅವರು ಇಲ್ಲದೆ ಮೂರು ವರ್ಷ ಕಳೆದು ಹೋಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬೇಸರ ವ್ಯಕ್ತಪಡಿಸಿದರು. ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ (Abhishek Ambareesh) ಸೇರಿದಂತೆ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ (Kanteerava Studio) ಬಂದು ಅಂಬಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಜೊತೆಗೆ ಶಾಸಕ ಎಸ್ ಟಿ ಸೋಮಶೇಖರ್ (ST Somashekar) ಸಹ ಭಾಗಿಯಾಗಿದ್ದರು. 

ಈ ಹಿನ್ನಲೆಯಲ್ಲಿ ಸುಮಲತಾ ಅವರು, ಅಂಬರೀಶ್ ಅವರು ಸಿನಿಮಾ, ರಾಜಕಾರಣಿಯಲ್ಲ. ಅವರು ಸಮಾಜಮುಖಿ ಕೆಲಸಗಳನ್ನು ತೋರಿಕೆಗಾಗಿ ಮಾಡಿಲ್ಲ. ಕಷ್ಟದಲ್ಲಿ ಇದ್ದವರಿಗೆ ಸ್ಪಂದಿಸಿದವರು. ಅವರ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಲು ಡಾ.ಅಂಬರೀಶ್ ಚಾರಿಟೇಬಲ್ ಟ್ರಸ್ಟ್ (Dr.Ambareesh Charitable Trust) ಮಾಡಿದ್ದೇವೆ. ಈ ಮೂಲಕ ಅವರ ಕನಸುಗಳನ್ನು ಮುಂದುವರೆಸುತ್ತಿದ್ದೇವೆ. ಗ್ರಾಮೀಣ ಪ್ರತಿಭೆಗಳನ್ನು ಹೊರ ತರುವ ಕೆಲಸ ಮಾಡುತ್ತೇವೆ. ಕೋವಿಡ್ (Covid) ಸಂದರ್ಭದಲ್ಲಿ ಏನು ಮಾಡೋಕೆ ಆಗಿಲ್ಲ. 

ಈ ಫೌಂಡೇಶನ್ ಮೂಲಕ ಅಂಬರೀಶ್ ಮಾಡುವ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ. ಜೊತೆಗೆ ಕ್ರೀಡಾಪಟುಗಳು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುತ್ತೇವೆ. ನಮಗೆ ಶಕ್ತಿಯಿದ್ದಷ್ಟು ಕೆಲಸ ಮಾಡುತ್ತೇವೆ. ಇವತ್ತು ಅಂಬರೀಶ್ ಮೂರನೇ ಪುಣ್ಯ ಸ್ಮರಣೆ. ಅವರು ಇಲ್ಲ ಎಂಬ ನೋವು ಶಾಶ್ವತ. ಅವರು ಜೀವನದಲ್ಲಿ ನಡೆದುಕೊಂಡು ಬಂದಿರೋ ಹಾದಿ ನಮಗೆ ಶಕ್ತಿ. ಅಂಥವರನ್ನು ಕಳೆದುಕೊಂಡ ಮೇಲೆ ಧೈರ್ಯ ಬೇಕು. ಅವರ ಜೊತೆ ಕಳೆದ ಸಮಯ ನೆನಪಿಸಿಕೊಂಡರೆ ಧೈರ್ಯ ಬರುತ್ತದೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು. 

ಅಂಬರೀಶ್‌ಗೆ ಪ್ರಶಸ್ತಿ ಸಿಕ್ಕೆ ಸಿಗುತ್ತೆ: ಕೆಆರ್‌ಎಸ್ ಮೈನಿಂಗ್ ವಿಚಾರದಲ್ಲಿ ನನ್ನ ಹೋರಾಟ ನಿಲ್ಲಿಸಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅಂಬರೀಶ್ ತುಂಬಾ ವರ್ಷದಿಂದ ಆಪ್ತರು. ಅಂಬರೀಶ್‌ಗೆ ಪ್ರಶಸ್ತಿ ಸಿಕ್ಕೆ ಸಿಗುತ್ತೆ. ಅವರು ಯಾವುದೇ ಸ್ಥಾನ, ಪ್ರಶಸ್ತಿಯನ್ನು ಲಾಬಿ ಮಾಡಿ ಕಸಿದುಕೊಂಡಿಲ್ಲ. ಹೀಗಾಗಿ ಅಭಿಮಾನಿಗಳು ಹೋರಾಟ ಅನ್ನೋವ ಪದ ಉಪಯೋಗಿಸಬಾರದು. ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದರೆ ಅಂಬರೀಶ್‌ಗೆ ಸಿಕ್ಕ ಹಾಗೆ ಮಂಡ್ಯ ವಿಧಾನಪರಿಷತ್ ಚುನಾವಣೆ ವಿಚಾರ ಯಾರ ಪರವಾಗಿ ಬೆಂಬಲ ಅಂತಾ ಹೇಳುವುದಿಲ್ಲ. ಮಂಡ್ಯ ಜಿಲ್ಲೆಗೆ ಯಾರು ಒಳ್ಳೆ ಅಭ್ಯರ್ಥಿಯಾಗಿರುತ್ತಾರೆ ಅವರಿಗೆ ಸರ್ಪೋಟ್ ಮಾಡುತ್ತೇವೆ ಎಂದು ಸುಮಲತಾ ತಿಳಿಸಿದರು.

ಅಂಬರೀಷ್ ಪುಣ್ಯತಿಥಿ: ಮುಖ್ಯಮಂತ್ರಿ ಸೇರಿ ಗಣ್ಯರ ಸ್ಮರಣೆ

'ಜನಪ್ರಿಯ ಕಲಾವಿದ, ಅಭಿಮಾನಿಗಳ ನೆಚ್ಚಿನ ರೆಬೆಲ್ ಸ್ಟಾರ್, ಮಾಜಿ ಕೇಂದ್ರ ಸಚಿವ ಶ್ರೀ ಅಂಬರೀಶ್ ಅವರ ಪುಣ್ಯತಿಥಿಯಂದು ಅಭಿಮಾನಪೂರ್ವಕ ನಮನಗಳು. ಹಲವಾರು ಯಶಸ್ವಿ ಚಲನಚಿತ್ರಗಳ ಜೊತೆಗೆ ತಮ್ಮ ವಿಶಿಷ್ಟ ನಡೆ, ನುಡಿ, ವ್ಯಕ್ತಿತ್ವಗಳಿಂದ ಅಭಿಮಾನಿಗಳ ಹೃದಯದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ.'
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ 

'ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್, ಮಂಡ್ಯದ ಗಂಡು ಎಂದೇ ಖ್ಯಾತಿ ಗಳಿಸಿದ್ದ ನಟ ದಿವಂಗತ ಅಂಬರೀಶ್ ತಮ್ಮ ನಟನೆಯ ಮೂಲಕ ಸುದೀರ್ಘ 46 ವರ್ಷಗಳ ಕಾಲ ಚಿತ್ರರಸಿಕರನ್ನು ರಂಜಿಸಿದ್ದರು. ನಟನೆ ಮಾತ್ರವಲ್ಲದೆ ರಾಜಕಾರಣದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಇಂದು ಅವರ ಪುಣ್ಯಸ್ಮರಣೆಯಂದು ಅವರನ್ನು ನೆನೆಯುತ್ತಾ ಅವರಿಗೆ ಗೌರವ ಪೂರ್ವಕವಾಗಿ ನಮಿಸುವೆ.'
-ಶಾಸಕ ಜಿ.ಟಿ.ದೇವೇಗೌಡ

click me!