Tumakur : ಪಕ್ಷೇತರ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆ

By Kannadaprabha News  |  First Published May 9, 2023, 5:32 AM IST

ತುಮಕೂರು ನಗರದ ಪಕ್ಷೇತರ ಅಭ್ಯರ್ಥಿಯಾಗಿದ್ದ ನರಸೇಗೌಡ ಚುನಾವಣಾ ಕಣದಿಂದ ಹಿಂದೆ ಸರಿದು ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು


 ತುಮಕೂರು :  ತುಮಕೂರು ನಗರದ ಪಕ್ಷೇತರ ಅಭ್ಯರ್ಥಿಯಾಗಿದ್ದ ನರಸೇಗೌಡ ಚುನಾವಣಾ ಕಣದಿಂದ ಹಿಂದೆ ಸರಿದು ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ನರಸೇಗೌಡ ಅವರು, ಪಕ್ಷ ಸಿದ್ಧಾಂತ ಮತ್ತು ಪ್ರಧಾನ ಮಂತ್ರಿ ರವರ ಆಡಳಿತ ಮೆಚ್ಚಿ ಹಾಗೂ ತುಮಕೂರು ನಗರದ ಬಿಜೆಪಿ ಅಭ್ಯರ್ಥಿಯಾದ ಜಿ.ಬಿ.ಜ್ಯೋತಿಗಣೇಶ್‌ರವರ ಸರಳತೆ-ಸಜ್ಜನಿಕೆ, ಆಡಳಿತ ವೈಖರಿಗೆ ಮೆಚ್ಚಿ ನಾನು ಇಂದು ಅಭ್ಯರ್ಥಿಯಿಂದ ನಿವೃತ್ತಿಹೊಂದಿ ಬಿಜೆಪಿ ಪಕ್ಷಕ್ಕೆ ನನ್ನ ಬೆಂಬಲಿಗರೊಂದಿಗೆ ಸೇರ್ಪಡೆಗೊಂಡಿರುತ್ತೇನೆ. ಬಿಜೆಪಿ ಗೆಲುವಿಗೆ ನಾವೆಲ್ಲರೂ ಶ್ರಮಿಸೋಣ ಎಂದರು.

Latest Videos

undefined

ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಜಿ.ಎಸ್‌.ಬಸವರಾಜ್‌, ಜಿಲ್ಲಾಧ್ಯಕ್ಷರಾದ ಎಚ್‌.ಎಸ್‌.ರವಿಶಂಕರ್‌ ಹೆಬ್ಬಾಕ, ವಿಧಾನ ಪರಿಷತ್‌ ಸದಸ್ಯ ಚಿದಾನಂದಗೌಡ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್‌.ಶಿವಪ್ರಸಾದ್‌, ಮಾಧ್ಯಮ ಪ್ರಮುಖ್‌ ಟಿ.ಆರ್‌.ಸದಾಶಿವಯ್ಯ, ಸಹ ಪ್ರಮುಖ್‌ ಜೆ.ಜಗದೀಶ್‌, ತುಮಕೂರು ನಗರ ಮಂಡಲ ಕಾರ್ಯದರ್ಶಿ ರಾಧ ಗಂಗಾಧರ್‌ ಹಾಗೂ ಪ್ರಮುಖರು ಭಾಗವಹಿಸಿದ್ದರು.

7 ಬಾರಿ ಬಂದಾಗ 3 ಸಾವಿರ ಜನರೊಂದಿಗೆ ಭೇಟಿ

ನವದೆಹಲಿ (ಮೇ.9): ವಿಧಾನಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ಕಳೆದ 15 ದಿನಗಳಲ್ಲಿ 7 ಬಾರಿ ಕರ್ನಾಟಕಕ್ಕೆ ಭೇಟಿ ನೀಡಿ ಹಲವು ರೋಡ್‌ ಶೋ, ಸಾರ್ವಜನಿಕ ರಾರ‍ಯಲಿಗಳಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ತೆರೆಮರೆಯಲ್ಲೇ 3000ಕ್ಕೂ ಹೆಚ್ಚು ಜನರನ್ನು ಭೇಟಿ ಮಾಡಿದ್ದಾರೆ. ಹೀಗೆ ಮೋದಿ ಭೇಟಿ ಮಾಡಿದವರಲ್ಲಿ ಪಕ್ಷದ ಹಿರಿಯ-ಕಿರಿಯ ಕಾರ್ಯಕರ್ತರು, ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಸಮಾಜದ ಗಣ್ಯ ವ್ಯಕ್ತಿಗಳು ಸೇರಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ(Narendra Modi) ಕರ್ನಾಟಕ(PM Modi arrived karnataka)ದಲ್ಲಿ ಏ.27ರಂದು ಪಕ್ಷದ 50 ಲಕ್ಷ ಕಾರ್ಯಕರ್ತರೊಂದಿಗೆ ವರ್ಚುವಲ್‌ ಆಗಿ ಸಂವಾದ ನಡೆಸಿದ್ದರು. ಅದನ್ನು ಹೊರತುಪಡಿಸಿ ರಾಜ್ಯದ ವಿವಿಧ ಭಾಗಳಲ್ಲಿ 18 ರಾರ‍ಯಲಿಗಳಲ್ಲಿ ಭಾಗಿಯಾಗಿದ್ದರು. ಜತೆಗೆ ಬೆಂಗಳೂರಲ್ಲಿ 3, ಮೈಸೂರು, ಕಲಬುರಗಿ ಮತ್ತು ತುಮಕೂರಿನಲ್ಲಿ ತಲಾ ಒಂದೊಂದು ರೋಡ್‌ ಶೋ ಕೂಡಾ ನಡೆಸಿದ್ದರು.

ರಣಕಣದಲ್ಲಿ ಮೂರು ಪಕ್ಷಗಳ ದಿಗ್ಗಜರ ಕ್ಯಾಂಪೇನ್‌ ಹವಾ: ಒಂದೇ ವಾರದಲ್ಲಿ ಇಡೀ ಕುರುಕ್ಷೇತ್ರವನ್ನೇ ಆವರಿಸಿದ ಮೋದಿ

ಆದರೆ ಇಂಥ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಪ್ರತಿ ಬಾರಿ ಕರ್ನಾಟಕಕ್ಕೆ ಆಗಮಿಸಿದ ವೇಳೆ ಮತ್ತು ಕರ್ನಾಟಕದಿಂದ ನವದೆಹಲಿಗೆ ಮರಳುವ ವೇಳೆ ಹೆಲಿಪ್ಯಾಡ್‌/ವಿಮಾನ ನಿಲ್ದಾಣದಲ್ಲಿಯೇ ತಮ್ಮ ಸ್ವಾಗತ ಹಾಗೂ ಬೀಳ್ಕೊಡುಗೆಗೆ ಕಾದಿದ್ದ 3000 ಜನರನ್ನು ಮೋದಿ ಭೇಟಿ ಮಾಡಿದ್ದಾರೆ. ಇಂಥ ಭೇಟಿಗಾಗಿ ಪಕ್ಷಕ್ಕಾಗಿ ತೆರೆಮರೆಯಲ್ಲೇ ಶ್ರಮಿಸುತ್ತಿರುವ ಹಿರಿ-ಕಿರಿಯ ಬಿಜೆಪಿ ಕಾರ್ಯಕತರು, ಪದ್ಮ ಪ್ರಶಸ್ತಿ ಪುರಸ್ಕೃತರು ಮತ್ತು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಆಯ್ಕೆ ಮಾಡಲಾಗಿತ್ತು.

ಮೋದಿ ಜತೆ ಆತ್ಮೀಯ ಸಂವಾದ:

‘ಇಂಥ ಭೇಟಿ ವೇಳೆ ಪಕ್ಷದ ಹಿರಿ-ಕಿರಿಯ ಕಾರ್ಯಕರ್ತರು ತಮ್ಮ ಇತಿಹಾಸವನ್ನು ಹೇಳಿಕೊಂಡರೆ, ಇನ್ನು ಕೆಲವರು ತಮ್ಮ ಪೋಷಕರು ಈ ಹಿಂದೆ ನಿಮ್ಮ ಜೊತೆ ಕೆಲಸ ಮಾಡಿದ್ದರು ಎಂದು ನರೇಂದ್ರ ಮೋದಿ ಅವರಿಗೆ ನೆನಪಿಸುವ ಕೆಲಸ ಮಾಡಿದರು. ಇನ್ನು, ತಾವೇ ಗುರುತು ಹಿಡಿದು ಮಾತನಾಡಿಸಿದ ವ್ಯಕ್ತಿಗಳಿಗೆ ಅವರ ಮತ್ತು ಅವರ ಕುಟುಂಬದ ಬಗ್ಗೆ ಮಾಹಿತಿ ಪಡೆಯುವ ಮೂಲಕ ಅವರ ಕುಶಲೋಪರಿ ವಿಚಾರಿಸುವ ಯತ್ನವನ್ನೂ ಮೋದಿ ಮಾಡಿದ್ದಾರೆ. ಹೀಗೆ ಇಂಥ ಮಾತುಕತೆಗಳು ಬಹುತೇಕ ವೈಯಕ್ತಿಕ ಸ್ವರೂಪದಲ್ಲಿದ್ದು, ಭೇಟಿಯಾದವರನ್ನು ಹುರಿದುಂಬಿಸುವ ಇಲ್ಲವೇ ಅವರನ್ನು ಶ್ಲಾಘಿಸುವ ಸ್ವರೂಪದಲ್ಲಿತ್ತು’ ಎಂದಿವೆ ಮೂಲಗಳು.

ಈ ಕಾರ್ಯಕ್ರಮ ಪಕ್ಷದ ಕಾರ್ಯಕರ್ತರಿಗೆ ಹಳೆಯ ನೆನಪುಗಳನ್ನು ಮೆಲಕುಹಾಕಲು ಅವಕಾಶ ಮಾಡಿಕೊಡುವ ಜೊತೆಗೆ, ಪಕ್ಷಕ್ಕಾಗಿ ಇನ್ನಷ್ಟುಶ್ರಮಿಸುವ ಹುಮ್ಮಸ್ಸು ತುಂಬಿದರೆ, ಪ್ರಧಾನಿ ಪಾಲಿಗೆ ಕಾರ್ಯಕರ್ತರ ಜತೆಗಿನ ನಂಟನ್ನು ಇನ್ನಷ್ಟುಬೆಸೆಯುವ ವೇದಿಕೆಯಾಗಿತ್ತು ಎಂದಿವೆ ಪಕ್ಷದ ಮೂಲಗಳು.

click me!