ಕಾಡುಗೊಲ್ಲ ಜನಾಂಗದಿಂದ ಶ್ರೀನಿವಾಸ್‌ಗೆ ಬೆಂಬಲ

Published : May 09, 2023, 05:22 AM IST
 ಕಾಡುಗೊಲ್ಲ ಜನಾಂಗದಿಂದ ಶ್ರೀನಿವಾಸ್‌ಗೆ ಬೆಂಬಲ

ಸಾರಾಂಶ

ಮಾಜಿ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ರವರು ಗೊಲ್ಲರಹಟ್ಟಿಗಳಿಗೆ ಸಾಕಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದರಿಂದ ಈ ಚುನಾವಣೆಯಲ್ಲಿ ಇಡೀ ಸಮುದಾಯವು ಶ್ರೀನಿವಾಸ್‌ ರವರ ಬೆಂಬಲಕ್ಕೆ ನಿಲ್ಲುವುದು ಎಂದು ಕಾಡುಗೊಲ್ಲ ಜನಾಂಗದ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್‌ ತಿಳಿಸಿದರು.

  ಗುಬ್ಬಿ :  ಮಾಜಿ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ರವರು ಗೊಲ್ಲರಹಟ್ಟಿಗಳಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದರಿಂದ ಈ ಚುನಾವಣೆಯಲ್ಲಿ ಇಡೀ ಸಮುದಾಯವು ಶ್ರೀನಿವಾಸ್‌ ರವರ ಬೆಂಬಲಕ್ಕೆ ನಿಲ್ಲುವುದು ಎಂದು ಕಾಡುಗೊಲ್ಲ ಜನಾಂಗದ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್‌ ತಿಳಿಸಿದರು.

ಸೋಮವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊಲ್ಲರ ಹಟ್ಟಿಗಳಿಗೆ ಅಗತ್ಯವಿದ್ದ ಕೃಷ್ಣ ಕುಟೀರ ಹಾಗೂ ಅನೇಕ ವಸತಿಗಳನ್ನು ಮಂಜೂರು ಮಾಡಿಸಿಕೊಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಬದ್ಧರಾಗಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಸಮುದಾಯ ಶ್ರೀನಿವಾಸ್‌ ಬೆಂಬಲಕ್ಕೆ ನಿಲ್ಲುವುದು ಎಂದು ತಿಳಿಸಿದರು.

ಮುಖಂಡ ಸಿದ್ದರಾಜು ಮಾತನಾಡಿ ವಾಸಣ್ಣನವರ ಅಭಿವೃದ್ಧಿ ಕಾರ್ಯಗಳೇ ಅವರಿಗೆ ಶ್ರೀರಕ್ಷೆಯಾಗಿದ್ದು 4 ಬಾರಿ ಸತತವಾಗಿ ಆಯ್ಕೆಯಾಗುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಹೇಳುವುದು ಕೇವಲ ಊಹಾಪೋವಾಗಿದೆ. ಸಮುದಾಯದ ಹಾಗೂ ತಾಲೂಕಿನ ಹಿತದೃಷ್ಟಿಯಿಂದ ಈ ಚುನಾವಣೆಯಲ್ಲಿಯೂ ಶ್ರೀನಿವಾಸ ಅವರನ್ನು ಬೆಂಬಲಿಸುತ್ತೇವೆ ಎಂದರು.

ಮುಖಂಡ ಲಕ್ಷಣಗೌಡ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ರಾಜಕೀಯ ಶಕ್ತಿಯ ಅಗತ್ಯ ಇರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಆರ್‌ ಶ್ರೀನಿವಾಸ್‌ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಹಿಂದುಳಿದ ಸಮುದಾಯವಾಗಿರುವ ಗೊಲ್ಲರು ಸಾಮಾಜಿಕ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜುಂಜೇಗೌಡ, ಮಲ್ಲಿಕಾರ್ಜುನಸ್ವಾಮಿ, ಶಿವಣ್ಣ, ಅರ್ಚಕ ನಾಗರಾಜು, ಮಂಜಣ್ಣ, ಬಾಲಕೃಷ್ಣ, ಬಸವರಾಜು, ಈರಣ್ಣ, ಚಂದ್ರಣ್ಣ, ಜಯಣ್ಣ, ಸದಾಶಿವ, ತಮ್ಮಯ್ಯ, ಕುಮಾರ್‌, ಮೋಹನ್‌, ಕದರಪ್ಪ, ರವಿಕುಮಾರ್‌, ಶ್ರೀನಿವಾಸ್‌ ಹಾಗೂ ಇತರರು ಹಾಜರಿದ್ದರು.

BJPಯಿಂಧ ಹೈಜಾಕ್ ಸಂಸ್ಕೃತಿ

ತುಮಕೂರು (ಮೇ.9) : ಬಿಜೆಪಿ ಹೈಜಾಕ್‌ ಸಂಸ್ಕೃತಿ ಅಳವಡಿಸಿಕೊಂಡಿದ್ದು, ಚುನಾವಣಾ ಆಯೋಗ ಮತ್ತು ಪೊಲೀಸ್‌ ಇಲಾಖೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ ಎಂದು ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೇನಾಮಿ ಹೆಸರಿನಲ್ಲಿ 3 ರಿಂದ 4 ರೂಮುಗಳನ್ನು ಬುಕ್‌ ಮಾಡಿ ಅಲ್ಲಿ ವಾಸ್ತವ್ಯ ಮಾಡಿದ್ದ ಕೆಲ ಮುಖಂಡರು ಮತದಾರರಿಗೆ ಹಣ ಹಂಚಲು ವ್ಯವಸ್ಥೆ ಮಾಡಿಕೊಂಡಿದ್ದು, ಇದನ್ನು ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ ಕೆಲವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ದೇಶದಲ್ಲೇ ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟ: ಪ್ರಿಯಾಂಕಾ ಗಾಂಧಿ

ಚುನಾವಣಾ ಸಮಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಾದ ಚುನಾವಣಾ ಆಯೋಗ ಮತ್ತು ಪೊಲೀಸ್‌ ಇಲಾಖೆ ಸ್ಥಳೀಯ ಸಂಸದರು ಮತ್ತು ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್‌, ಅಭಿವೃದ್ಧಿ ರೆವೂಲ್ಯೂಷನ್‌ ಫೋರಂನ ಕುಂದರನಹಳ್ಳಿ ರಮೇಶ್‌ ಮುಂತಾದವರು ವಸತಿಗೃಹದ ರೂಮುಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರಿಗೆ ನಗರದಲ್ಲಿ ಸ್ವಂತ ಮನೆಗಳಿದ್ದರೂ ಬಾಡಿಗೆ ರೂಮುಗಳನ್ನು ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು, ಮತದಾರರಿಗೆ ಆಸೆ, ಆಮಿಷವೊಡ್ಡಿ ಬಿಜೆಪಿ ಅಭ್ಯರ್ಥಿ ಪರ ಮತದಾನ ಮಾಡಲು ಪ್ರೇರೇಪಿಸುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗ ಮತ್ತು ಪೊಲೀಸ್‌ ಇಲಾಖೆ ಕಾನೂನು ಕ್ರಮಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಈ ಬಗ್ಗೆ ಮಾಹಿತಿ ನೀಡಿದ ನಿಖಿಲ್‌, ಸಾಧಿಕ್‌, ರಫೀಕ್‌, ಹೇಮಂತ್‌ ಎಂಬುವರ ವಿರುದ್ಧ ದರೋಡೆ ಪ್ರಕರಣ ದಾಖಲಿಸಿ, ಹಣ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ ಎಂದರು.

ವೀರಶೈವ ಸಮಾಜದ ಮುಖಂಡರು, ಪಕ್ಷೇತರ ಅಭ್ಯರ್ಥಿಯಾಗಿರುವ ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ಅವರ ಹಿಂಬಾಲಕರನ್ನು ಸೇರಿಸಿಕೊಂಡು ಇನ್ನೊಂದು ಸುದ್ದಿಗೋಷ್ಠಿ ನಡೆಸಿ, ನನ್ನ ವಿರುದ್ಧ ಅಪ್ಪ, ಮಕ್ಕಳು ಎತ್ತಿಕಟ್ಟಿದ್ದಾರೆ ಎಂದು ದೂರಿದರು.

PREV
Read more Articles on
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!