ಯಾರೂ ಪರಾರಿಯಾಗಿಲ್ಲ: ಶಿವಮೊಗ್ಗ ಜಿಲ್ಲಾಡಳಿತ ಸ್ಪಷ್ಟನೆ

By Kannadaprabha News  |  First Published Jun 22, 2020, 9:28 AM IST

ಮಾಧ್ಯಮವೊಂದರಲ್ಲಿ ಶಿವಮೊಗ್ಗದ ಸೋಂಕಿತ ವ್ಯಕ್ತಿ ಪರಾರಿ ಎಂದು ಸುದ್ದಿ ಪ್ರಸಾರವಾದ ಮೇಲೆ ಯಾರೂ ಪರಾರಿಯಾಗಿಲ್ಲ. ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.


ಶಿವಮೊಗ್ಗ(ಜೂ.22): ಕೊರೋನಾ ಸೋಂಕಿನ ಸಂಶಯದ ಮೇಲೆ ಸ್ವಯಂ ಪ್ರೇರಿತರಾಗಿ ಗಂಟಲು ದ್ರವ ನೀಡಿದ್ದ ವ್ಯಕ್ತಿಯೊಬ್ಬರ ಪರೀಕ್ಷಾ ವರದಿ ಪಾಸಿಟಿವ್‌ ಎಂದು ಬಂದ ಹೊತ್ತಿನಲ್ಲಿಯೇ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದ ಹಿನ್ನಲೆಯಲ್ಲಿ ಕೆಲವೊಂದು ಕ್ಷಣ ಆತಂಕಕ್ಕೆ ಕಾರಣವಾದ ಘಟನೆ ಇಲ್ಲಿ ನಡೆದಿದೆ. ಬಳಿಕ ಆ ವ್ಯಕ್ತಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಕರೆ ತಂದು ಸೇರಿಸಿದ್ದಾರೆ.

ಮಾಧ್ಯಮವೊಂದರಲ್ಲಿ ಸೋಂಕಿತ ವ್ಯಕ್ತಿ ಪರಾರಿ ಎಂದು ಸುದ್ದಿ ಪ್ರಸಾರವಾದ ಮೇಲೆ ಯಾರೂ ಪರಾರಿಯಾಗಿಲ್ಲ. ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

Tap to resize

Latest Videos

ಶಿವಮೊಗ್ಗದಲ್ಲಿ ಮತ್ತಿಬ್ಬರಿಗೆ ಕೊರೋನಾ ಸೋಂಕು ದೃಢ

ಶಿವಮೊಗ್ಗದ ವಿವೇಕಾನಂದ ಬಡಾವಣೆಯ ವ್ಯಕ್ತಿಯೊಬ್ಬರಿಗೆ ಶೀತ, ಕೆಮ್ಮು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಸ್ವಯಂ ಪ್ರೇರಿತರಾಗಿ 3 ದಿನದ ಹಿಂದೆ ಮೆಗ್ಗಾನ್‌ ಆಸ್ಪತ್ರೆಗೆ ಬಂದು ಸ್ವ್ಯಾಬ್‌ ಪರೀಕ್ಷೆಯ ಮೂಲಕ ಗಂಟಲು ದ್ರವ ನೀಡಿ ಬಳಿಕ ಮನೆಗೆ ತೆರಳಿದ್ದರು. ಶನಿವಾರ ರಾತ್ರಿ ಸ್ವ್ಯಾಬ್‌ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್‌ ಎಂದು ವರದಿ ಬಂದಿದೆ. ವ್ಯಕ್ತಿ ನೀಡಿದ್ದ ಮೊಬೈಲ್‌ ಸಂಖ್ಯೆ ಅ ವೇಳೆಗೆ ಸ್ವಿಚ್‌ ಆಫ್‌ ಆಗಿತ್ತು. ವಿಳಾಸದಲ್ಲಿಯೂ ಸ್ವಲ್ಪ ಗೊಂದಲ ಕಾಣಿಸಿದ್ದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಯಿತು. ಆರೋಗ್ಯ ಇಲಾಖೆಯ ಸಿಬ್ಬಂದಿ ಕೊನೆಗೂ ಅವರ ಮನೆ ಪತ್ತೆ ಮಾಡಿದರು. ಆಗ ಷವರು ತಮ್ಮ ಮನೆಯಲ್ಲಿಯೇ ಇದ್ದು, ಆರೋಗ್ಯಾಧಿಕಾರಿಗಳ ಸೂಚನೆಯಂತೆ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸೋಂಕಿತ ವ್ಯಕ್ತಿ ಶಿವಮೊಗ್ಗದ ವಿವೇಕಾನಂದ ಬಡಾವಣೆ ನಿವಾಸಿಯಾಗಿದ್ದು, ಈ ಭಾಗದಲ್ಲಿ ಇದೀಗ ಶೀಲ್ಡ್‌ ಡೌನ್‌ ಮಾಡಲಾಗಿದೆ. ಆ ಪ್ರದೇಶದಲ್ಲಿ ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಇವರ ಪ್ರಾಥಮಿಕ ಸಂಪರ್ಕವನ್ನು ಪತ್ತೆ ಹಚ್ಚುವ ಕಾರ್ಯವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ನಡೆಸಿದ್ದಾರೆ.

click me!