ಕೊರೋನಾ ಅಟ್ಟಹಾಸ: ಬಳ್ಳಾರಿಯಲ್ಲಿ ಮತ್ತೆ 26 ಕೋವಿಡ್‌ ಸೋಂಕು ಪತ್ತೆ

Kannadaprabha News   | Asianet News
Published : Jun 22, 2020, 09:04 AM IST
ಕೊರೋನಾ ಅಟ್ಟಹಾಸ: ಬಳ್ಳಾರಿಯಲ್ಲಿ ಮತ್ತೆ 26 ಕೋವಿಡ್‌ ಸೋಂಕು ಪತ್ತೆ

ಸಾರಾಂಶ

ಬಳ್ಳಾರಿ ತಾಲೂಕಿನಲ್ಲಿ 13, ಸಂಡೂರು ತಾಲೂಕು 9, ಹೊಸಪೇಟೆ 2, ಸಿರುಗುಪ್ಪ ತಾಲೂಕಿನಲ್ಲಿ 2 ಸೇರಿ ಒಟ್ಟು 26 ಪ್ರಕರಣಗಳು ಪತ್ತೆ| ಈ ಪೈಕಿ ಬಹುತೇಕ ಪ್ರಕರಣಗಳು ಜಿಂದಾಲ್‌ ಸೋಂಕಿತ ನೌಕರರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿ​ವೆ| ಇದರಲ್ಲಿ ಪಿ. 4996 ಸೋಂಕಿತರಿಂದ 4 ಜನರಿಗೆ ಸೋಂಕು ಹರಡಿದ್ದು, ಮೂವರು ಪಿ. 6490 ಸೋಂಕಿತರ ಸಂಪರ್ಕಿತರು|  

ಬಳ್ಳಾರಿ(ಜೂ.22): ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಭಾನುವಾರ ಮತ್ತೆ ಹೊಸದಾಗಿ 26 ಕೋವಿಡ್‌ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 442ಕ್ಕೇರಿ​ಕೆಯಾಗಿದೆ.

ಬಳ್ಳಾರಿ ತಾಲೂಕಿನಲ್ಲಿ 13, ಸಂಡೂರು ತಾಲೂಕು 9, ಹೊಸಪೇಟೆ 2, ಸಿರುಗುಪ್ಪ ತಾಲೂಕಿನಲ್ಲಿ 2 ಸೇರಿ ಒಟ್ಟು 26 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬಹುತೇಕ ಪ್ರಕರಣಗಳು ಜಿಂದಾಲ್‌ ಸೋಂಕಿತ ನೌಕರರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿ​ವೆ. ಇದರಲ್ಲಿ ಪಿ. 4996 ಸೋಂಕಿತರಿಂದ 4 ಜನರಿಗೆ ಸೋಂಕು ಹರಡಿದ್ದು, ಮೂವರು ಪಿ. 6490 ಸೋಂಕಿತರ ಸಂಪರ್ಕಿತರಾಗಿದ್ದಾರೆ. 

ಜೂ. 24ಕ್ಕೆ ಕೊನೆಯ ಶ್ರಮಿಕ್‌ ರೈಲು ಓಡಾಟ: ವಲಸೆ ಕಾರ್ಮಿಕರಿಗೆ ಲಾಸ್ಟ್‌ ಚಾನ್ಸ್‌

ಐದು ಜನರು ಐಎಲ್‌ಐ ಪ್ರಕರಣಗಳಾಗಿವೆ. ಇನ್ನುಳಿದವರು ವಿವಿಧ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 442 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 112 ಜನರು ಗುಣವಾಗಿ ಮನೆ ಸೇರಿದ್ದಾರೆ. ಇಬ್ಬರು ಮೃತಪಟ್ಟಿದ್ದು, 328 ಸಕ್ರಿಯ ಪ್ರಕರಣಗಳಿವೆ.
 

PREV
click me!

Recommended Stories

ಪೊಲೀಸ್ ಸಿಬ್ಬಂದಿಗೆ ಬಂದೂಕು ಹೊರಿಸಿ ರಣಬಿಸಿಲಲ್ಲಿ ನಿಲ್ಲಿಸಿದ್ದ PSI ನೇತ್ರಾವತಿಗೆ, ಕೇವಲ ಎತ್ತಂಗಡಿ ಶಿಕ್ಷೆ!
ಚಿಕ್ಕಮಗಳೂರಲ್ಲಿ ಮತ್ತೊಬ್ಬ ಕೇರಳ ಬಾಲಕಿ ನಾಪತ್ತೆಯಾಗಿ 2ನೇ ದಿನ: ಸಚಿವ ಈಶ್ವರ ಖಂಡ್ರೆ ಖಡಕ್ ಆದೇಶ! ಏನಿದೆ ಇದರಲ್ಲಿ?