ಮದ್ಯ ಪ್ರಿಯರಿಗೆ ಶಾಕ್, ಮಂಗಳವಾರದಿಂದ 3 ದಿನ ಬೆಂಗಳೂರಲ್ಲಿ ಸಿಗಲ್ಲ ಎಣ್ಣೆ

Published : May 16, 2022, 05:45 PM IST
ಮದ್ಯ ಪ್ರಿಯರಿಗೆ ಶಾಕ್, ಮಂಗಳವಾರದಿಂದ 3 ದಿನ ಬೆಂಗಳೂರಲ್ಲಿ ಸಿಗಲ್ಲ ಎಣ್ಣೆ

ಸಾರಾಂಶ

* ಸರ್ಕಾರದ ಇ-ಇಂಡೆಎಂಟ್ ವಿರುದ್ಧ ಮದ್ಯದಂಗಡಿ ಮಾಲೀಕರು ಆಕ್ರೋಶ * ಬೆಂಗಳೂರಿನಲ್ಲಿ ದಿಢೀರನೆ ಬಂದ್ * ಮೂರು ದಿನಗಳ‌ ಕಾಲ ಬೆಂಗಳೂರಲ್ಲಿ ಖರೀದಿಸಲು ಎಣ್ಣೆ ಸಿಗಲ್ಲ

ಬೆಂಗಳೂರು, (ಮೇ.16): ಬೆಂಗಳೂರಿನಲ್ಲಿ ದಿಢೀರನೆ ಬಂದ್ ಆಗಲಿದೆ. ನಾಳೆಯಿಂದ ಮೂರು ದಿನಗಳ‌ ಕಾಲ ಬೆಂಗಳೂರಲ್ಲಿ ಖರೀದಿಸಲು ಎಣ್ಣೆ ಸಿಗಲ್ಲ. 

ಹೌದು...ಸರ್ಕಾರದ ಇ-ಇಂಡೆಎಂಟ್ ವಿರುದ್ಧ ಮದ್ಯದಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಾಜ್ಯದ ಹಲವೆಡೆ ಜಿಲ್ಲಾವಾರು ವಿಭಾಗಳಾಗಿ ವಿಂಗಡಿಸಿ ಪ್ರತ್ಯೇಕವಾಗಿ ಒಂದೊಂದು ದಿನ ಮದ್ಯ ಮಾರಾಟವನ್ನು ನಿಲ್ಲಿಸಲಾಗಿತ್ತು.ಇದೀಗ ಬೆಂಗಳೂರಿನ ಸರದಿ ಬಂದಿದ್ದು, ಇನ್ನೂ 3 ದಿನಗಳ ಕಾಲ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಮದ್ಯಪಾನ (Liquor) ಖರೀದಿ ಮಾಡದಿರಲು ನಿರ್ಧಾರ ಮಾಡಿದ್ದಾರೆ.

ಮದ್ಯ ಖರೀದಿಗೆ ಸರ್ಕಾರದ ಹೊಸ ರೂಲ್ಸ್..!

ರಾಜ್ಯ ಪಾನೀಯ ನಿಗಮ ಆರಂಭಿಸಿರುವ ಹೊಸ ಇ-ಇಂಡೆಂಟ್ ವ್ಯವಸ್ಥೆ ಇದಾಗಿದ್ದು, ಬಾರ್​, ವೈನ್ಸ್​ ಮಾಲೀಕರು ಆನ್​ಲೈನ್ ಮೂಲಕ ಮದ್ಯ ಖರೀದಿಸಬೇಕಾಗಿದೆ. ನಾಳೆಯಿಂದ(ಮಂಗಳವಾರ) 3 ದಿನ ಬೆಂಗಳೂರು ನಗರ, ಗ್ರಾಮಾಂತರದಲ್ಲಿ KSBLನಿಂದ ಮದ್ಯ ಖರೀದಿಸದಿರಲು ಮದ್ಯದಂಗಡಿ ಮಾಲೀಕರು ನಿರ್ಧಾರಕ್ಕೆ ಬಂದಿದ್ದಾರೆ.

ಹಾಗಾಗಿ ಮದ್ಯ ಪ್ರಿಯರಿಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದ್ದು, ಸರ್ಕಾರದ ಇ-ಇಂಡೆಂಟ್‌ ವಿರುದ್ಧ ಮದ್ಯದಂಗಡಿ ಮಾಲೀಕರ ಆಕ್ರೋಶ ವ್ಯಕ್ತಪಡಿಸಿದ್ದು, ಇದರ ವಿರುದ್ಧ ವೈನ್ ಮರ್ಚೆಂಟ್ಸ್ ಅಸೋಸಿಯೇನ್​ಗಳ ಒಕ್ಕೂಟ ಅಸಮಧಾನ‌ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೇ 6 ರಿಂದ‌ ವಿವಿಧ ಜಿಲ್ಲೆಗಳಲ್ಲಿ‌ ಒಂದೊಂದು‌ ದಿನದಂತೆ ಮಧ್ಯ ಖರೀದಿಗೆ ಬ್ರೇಕ್ ಹಾಕಲಾಗಿದ್ದು ಕೆಎಸ್ಬಿಎಲ್​ಗಳಿಂದ ಎಣ್ಣೆ ಖರೀದಿ ಮಾಡದಿರಲು ಎಣ್ಣೆ ಅಂಗಡಿ ಮಾಲೀಕರು ತೀರ್ಮಾನಿಸಿದ್ದಾರೆ.

PREV
Read more Articles on
click me!

Recommended Stories

ಮಗು ಖಾಸಗಿ ಆಸ್ಪತ್ರೆಗೆ, ತಾಯಿ ಸರ್ಕಾರಿ ಆಸ್ಪತ್ರೆಲಿ..! 14 ತಿಂಗಳಿಂದ ಇಲ್ಲಿ ವೈದ್ಯರೇ ಇಲ್ಲ!
ಅಮೆರಿಕಾದಿಂದ ಹಾಸನಾಂಬೆ ದರ್ಶನಕ್ಕೆ ಓಡೋಡಿ ಬಂದ ಆನಂದನಾಥ ಸ್ವಾಮೀಜಿ; 5 ವರ್ಷಗಳ ಹರಕೆ ಈಡೇರಿದ ಖುಷಿ!