ಟೊಮೆಟೊ ಫ್ಲೂ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದೀಯಾ? ಎಂಬ ವದಂತಿ ಇತ್ತು. ಆದರೆ ಉಡುಪಿಯಲ್ಲಿ ಕಂಡುಬಂದಿರುವುದು ಟೊಮೆಟೋ ಫ್ಲೂ ಅಲ್ಲ, ಅದೇ ಪ್ರಭೇದದ ಮತ್ತೊಂದು ವೈರಸ್ ಅನ್ನೋದು ಇದೀಗ ಖಾತ್ರಿಯಾಗಿದೆ.
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ(ಮೇ.16): ಪುಟ್ಟ ಮಕ್ಕಳನ್ನೇ ಟಾರ್ಗೆಟ್ ಮಾಡುವ ಟೊಮೆಟೊ ಫ್ಲೂ (Tomato flu ) ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದೀಯಾ? ಉಡುಪಿ ಜಿಲ್ಲೆಯಲ್ಲಿ ರಾಜ್ಯದ ಪ್ರಥಮ ಪ್ರಕರಣ ದಾಖಲಾಗಿದೆಯಾ? ಹೀಗೊಂದು ವದಂತಿ ದಟ್ಟವಾಗಿತ್ತು. ಆದರೆ ಉಡುಪಿಯಲ್ಲಿ (Udupi ) ಕಂಡುಬಂದಿರುವುದು ಟೊಮೆಟೋ ಫ್ಲೂ ಅಲ್ಲ, ಅದೇ ಪ್ರಭೇದದ ಮತ್ತೊಂದು ವೈರಸ್ ಅನ್ನೋದು ಇದೀಗ ಖಾತ್ರಿಯಾಗಿದೆ.
ಇಂದು ಶಾಲೆಗಳು ಪುನರ್ ಆರಂಭಗೊಂಡಿದೆ. ಪುಟ್ಟ ಪುಟ್ಟ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಐದು ವರ್ಷದ ಒಳಗಿನ ಮಕ್ಕಳಿಗೆ ಹೆಚ್ಚಾಗಿ ಬಾಧಿಸವ ಟೊಮೆಟೋ ಫ್ಲೂ ಪ್ರಕರಣವೊಂದು ಉಡುಪಿ ಜಿಲ್ಲೆಯಲ್ಲಿ ಪತ್ತೆಯಾಗಿದೆ ಅನ್ನೋ ವದಂತಿ ಪೋಷಕರ ಆತಂಕಕ್ಕೆ ಕಾರಣವಾಗಿತ್ತು. ನಿಜಕ್ಕೂ ಉಡುಪಿ ಜಿಲ್ಲೆಯಲ್ಲಿ ಪತ್ತೆಯಾಗಿರುವ ವೈರಸ್ ಯಾವುದು? ಪೋಷಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವುದು? ಸ್ವತಹ ಉಡುಪಿ ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Kodagu ರಾಷ್ಟ್ರಮಟ್ಟದ ಸುದ್ದಿಯಾಯ್ತು ಭಜರಂಗದಳದಿಂದ ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ
ಉಡುಪಿಯಲ್ಲಿ ಈವರೆಗೆ ಟೊಮೇಟೊ ಫ್ಲೂ ಪತ್ತೆಯಾಗಿಲ್ಲ: ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಟೊಮೆಟೊ ಫ್ಲೂಗೆ ಹೋಲುವಂತಹ ಒಂದು ಪ್ರಕರಣ ಪತ್ತೆಯಾಗಿತ್ತು. ಮೂರು ತಿಂಗಳ ಹಿಂದೆ ಈ ಪ್ರಕರಣ ಪತ್ತೆಯಾಗಿತ್ತು ಫೂಟ್ ಆಂಡ್ ಮೌತ್ ರೋಗ ಲಕ್ಷಣಗಳಿರುವ ಪ್ರಕರಣ ಇದಾಗಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಗೆ ನಾವು ವರದಿ ಮಾಡಿದ್ದೇವೆ. ಟೊಮೇಟೋ ಫ್ಲೂ ಮತ್ತು ಈ ಪ್ರಕರಣಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಸ್ಪಷ್ಟಪಡಿಸಿದ್ದಾರೆ.
ಇದರ ಹೊರತಾಗಿಯೂ ಎಲ್ಲಾ ಮಕ್ಕಳ ತಜ್ಞರಿಗೂ ಅಲರ್ಟ್ ಇರಲು ಸೂಚಿಸಿದ್ದೇವೆ. ಕೇರಳದಲ್ಲಿ ಪ್ರಕರಣ ಪತ್ತೆಯಾದ ನಂತರ ಮಕ್ಕಳ ತಜ್ಞರಿಗೆ ಸೂಚನೆಗಳನ್ನು ಕೊಟ್ಟಿದ್ದೇವೆ.ಟೊಮೆಟೊ ಫ್ಲೂ ಹೋಲುವಂತಹ ಜ್ವರ ಬಂದರೂ ತಿಳಿಸಲು ಹೇಳಿದ್ದೇವೆ.ಈವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಅವರು ತಿಳಿಸಿದರು.
ಉಡುಪಿಯಲ್ಲಿ ಪತ್ತೆಯಾಗಿರುವುದು ಟೊಮೆಟೊ ಫ್ಲೋ ನ ಮತ್ತೊಂದು ಪ್ರಬೇಧ: ಮಕ್ಕಳಲ್ಲಿ ಫುಟ್ ಅಂಡ್ ಮೌಥ್ ಪ್ರಕರಣ ಬರುವುದು ಸಾಮಾನ್ಯ, ಇದು ಟೊಮೆಟೋ ಫ್ಲೂ ಅಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ ತಿಳಿಸಿದ್ದಾರೆ. ಜನವರಿ-ಫೆಬ್ರವರಿ ತಿಂಗಳಿಂದಲೇ ಈ ಸೋಂಕು ಮಕ್ಕಳಲ್ಲಿ ಇತ್ತು.ಈ ಮೊದಲೇ ಸ್ಯಾಂಪಲ್ ತೆಗೆದು ಪರೀಕ್ಷೆ ನಡೆಸಿದ್ದೇವೆ.ಉಡುಪಿಯಲ್ಲಿ ಪತ್ತೆಯಾಗಿರುವುದು ಫೂಟ್ ಅಂಡ್ ಮೌಥ್ ಎಂದು ಖಾತ್ರಿಯಾಗಿದೆ. ಇದು ಟೊಮೆಟೋ ಫ್ಲೂ ನ ಮತ್ತೊಂದು ಪ್ರಬೇಧ. ಟೊಮೆಟೊ ಫ್ಲೂ ಕೂಡ ಇದೇ ರೀತಿ ಬರುತ್ತೆ. ಜ್ವರ ಮತ್ತು ಮೈಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತೆ. ಫುಟ್ ಅಂಡ್ ಮೌತ್ ನಲ್ಲಿ ಚಿಕ್ಕ ಗುಳ್ಳೆಗಳು ಮಾತ್ರ ಕಾಣಿಸಿಕೊಳ್ಳುತ್ತೆ. ಆದರೆ ಟೊಮೇಟೊ ಫ್ಲೂ ನಲ್ಲಿ ದೊಡ್ಡಗಾತ್ರದ ಗುಳ್ಳೆಗಳು ಕಾಣಿಸಿಕೊಳ್ಳುತ್ತೆ. ಹಾಗಾಗಿಯೇ ಅದನ್ನು ಟೊಮೆಟೋ ಫ್ಲೂ ಎಂದು ಕರೆಯುತ್ತಾರೆ ಎಂದು ಡಾ.ನಾಗರತ್ನ ಸ್ಪಷ್ಟಪಡಿಸಿದ್ದಾರೆ.
ಹಲವು ವರ್ಷಗಳಿಂದಲೇ ಟೊಮೇಟೋ ಫ್ಲೂ ಕಾಯಿಲೆ ಇದೆ. ಕೊರೋನಾ ಸಮಯದಲ್ಲಿ ನಾವು ಈ ಬಗ್ಗೆ ವಿಶೇಷ ಗಮನ ಹರಿಸಿದ್ದೆವು. ಮಕ್ಕಳ ತಜ್ಞರಿಂದ ಮಾಹಿತಿ ಪಡೆದು ಸ್ಯಾಂಪಲ್ ತೆಗೆದಿದ್ದೆವು. ಆ ವೇಳೆ ಪತ್ತೆಯಾಗಿರುವುದೇ ಪೂಟ್ ಆಂಡ್ ಮೌತ್ ವೈರಸ್ ಎಂದರು.
KOPPALLA ಶಾಲೆ ಆರಂಭದ ದಿನ ಡೊಳ್ಳು ಬಾರಿಸಿ ಮಕ್ಕಳನ್ನು ಸ್ವಾಗತಿಸಿದ ಬಿಇಓ
ಪೋಷಕರು ವಹಿಸಬೇಕಾದ ಎಚ್ಚರಿಕೆಗಳೇನು?
ಜ್ವರ, ಮೈಮೇಲೆ ಗುಳ್ಳೆಗಳು ಕಂಡು ಬಂದರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ. ಮಕ್ಕಳಲ್ಲಿ ಒಬ್ಬರಿಗಿಂತ ಒಬ್ಬರಿಗೆ ಹಬ್ಬುವ ಸಾಧ್ಯತೆ ಹೆಚ್ಚಿರುತ್ತೆ. ಮಕ್ಕಳಿಗೆ ಚಿಕನ್ ಪಾಕ್ಸ್ ಆದರೂ ಇದೇ ರೀತಿ ಹಬ್ಬುತ್ತೆ. ಅದೇ ರೀತಿಯಲ್ಲಿ ಟೊಮೆಟೊ ಫ್ಲೂ ಕೂಡ ಹಬ್ಬಬಹುದು. ಆದರೆ ಭಯ ಬೇಡ, ಐದಾರು ದಿನದ ಚಿಕಿತ್ಸೆಯಿಂದ ಗುಣವಾಗುತ್ತೆ. ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಸಮಸ್ಯೆ ಆಗುತ್ತೆ. ಮಕ್ಕಳಿಗೆ ನಿರ್ಜಲಿಕರಣ ಆಗದಂತೆ ನೋಡಿಕೊಳ್ಳಿ. ಜ್ವರ ಮತ್ತಿತರ ಲಕ್ಷಣಗಳು ಕಂಡು ಬಂದರೆ ಶಾಲೆಗೆ ಕಳುಹಿಸಬೇಡಿ.ಟೊಮೆಟೊ ಫ್ಲೂ ನಲ್ಲಿ ಮೈಮೇಲೆ ಗುಳ್ಳೆಗಳು ಕಂಡುಬಂದರೆ ಉಜ್ಜಬೇಡಿ ಎಂದು ಎಚ್ಚರಿಸಿದ್ದಾರೆ.
ಕೇರಳದಿಂದ ಬರುವವರ ಮೇಲೆ ನಿಗಾ: ಕೇರಳ ದಿಂದ ಬರುವ ರೋಗಿಗಳ ಮೇಲೆ ಗಮನ ಹರಿಸಲಾಗಿದೆ. ಕೊಲ್ಲೂರು ಭಾಗದಲ್ಲಿ ವಿಶೇಷ ನಿಗಾ ಇರಿಸಲಾಗಿದೆ.