ಇಂದಿನಿಂದ ಉಚಿತ ನಂದಿನಿ ಹಾಲು ಇಲ್ಲ

By Kannadaprabha NewsFirst Published May 1, 2020, 7:51 AM IST
Highlights

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಡವರು ಹಾಗೂ ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ಪೂರೈಕೆಯಾಗುತ್ತಿದ್ದ ಹಾಲು ಮೇ.1ರಿಂದ ಸ್ಥಗಿತಗೊಳ್ಳಲಿದೆ ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.

ಬೆಂಗಳೂರು(ಮೇ.01): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಡವರು ಹಾಗೂ ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ಪೂರೈಕೆಯಾಗುತ್ತಿದ್ದ ಹಾಲು ಮೇ.1ರಿಂದ ಸ್ಥಗಿತಗೊಳ್ಳಲಿದೆ ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.

"

ಕೆಎಂಎಫ್‌ ನಿತ್ಯ ಸಂಗ್ರಹಿಸುವ ಹಾಲಿನಲ್ಲಿ ಮಾರಾಟವಾಗದೇ ಉಳಿಯುವ ಹೆಚ್ಚುವರಿ 7.50 ಲಕ್ಷ ಲೀಟರ್‌ ಹಾಲನ್ನು ಏ.3ರಿಂದ 30ರವರೆಗೆ ರಾಜ್ಯ ಸರ್ಕಾರವೇ ಖರೀದಿಸಿ ಬಡವರಿಗೆ ಉಚಿತವಾಗಿ ಪೂರೈಸುತ್ತಿತ್ತು.

ದೇಶದಲ್ಲಿ 11 ದಿನಕ್ಕೆ ಕೊರೋನಾ ಡಬಲ್‌..!

ಹೀಗೆ ಒಟ್ಟು 2.10 ಕೋಟಿ ಲೀಟರ್‌ ಹಾಲು ರಾಜ್ಯದ ಎಲ್ಲ ಜಿಲ್ಲೆಗಳ ಬಡ ಕುಟುಂಬಕ್ಕೆ ತಲಾ ಅರ್ಧ ಲೀಟರ್‌ನಿಂತೆ ಉಚಿತ ಹಂಚಲಾಗಿದೆ. ಸರ್ಕಾರದ ಸೂಚನೆಯಂತೆ ಏ.30ಕ್ಕೆ ಹಾಲು ಪೂರೈಕೆಯ ಗಡುವು ಮುಕ್ತಾಯವಾಗಿದೆ.

ಮೇ 1ರಿಂದ ಹಾಲು ಪೂರೈಕೆ ಮಾಡಬೇಕೆ ಎನ್ನುವ ಕುರಿತು ಸರ್ಕಾರದಿಂದ ಈವರೆಗೆ ಯಾವುದೇ ನಿರ್ದಿಷ್ಟಆದೇಶ ಬರದ ಹಿನ್ನೆಲೆಯಲ್ಲಿ ಕೆಎಂಎಫ್‌ ಗುರುವಾರ ಹಾಲು ಸರಬರಾಜನ್ನು ನಿಲ್ಲಿಸಿದೆ. ಜತೆಗೆ ರಾಜ್ಯ 14 ಹಾಲು ಒಕ್ಕೂಟಗಳಿಗೂ ಹಾಲು ಸರಬರಾಜು ಮಾಡದಂತೆ ಸೂಚನೆ ನೀಡಿದೆ.

ರೆಡಿಯಾಯ್ತು ದೇಶದ ಮೊದಲ ಕೊರೋನಾ ಮಾತ್ರೆ, ಪರೀಕ್ಷೆಗೆ ಕೇಂದ್ರ ಸಮ್ಮತಿ: ಪ್ರಯೋಗವಷ್ಟೇ ಬಾಕಿ

ಈವರೆಗೆ ಕೆಎಂಎಫ್‌ನಿಂದ 28 ದಿನಗಳಲ್ಲಿ ರಾಜ್ಯ ಸರ್ಕಾರ ಅಂದಾಜು 80 ಕೋಟಿ ರು.ಮೌಲ್ಯದ 2.10 ಕೋಟಿ ಲೀಟರ್‌ ಹಾಲು ಖರೀದಿಸಿದೆ. ಈ ಪೈಕಿ 25 ಕೋಟಿ ರು.ಗಳನ್ನು ಕೆಎಂಎಫ್‌ಗೆ ಸಂದಾಯ ಮಾಡಿದ್ದು, ಉಳಿದಂತೆ 65 ಕೋಟಿ ರು.ಬಾಕಿ ಬರಬೇಕಿದೆ ಎಂದು ಕೆಎಂಎಫ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!