ಕೊರೋನಾ ಭೀತಿ: ಮನೆ ಮನೆಗೆ ಭೇಟಿ, ಶೀತಜ್ವರ, ಉಸಿರಾಟದ ತೊಂದರೆ ವ್ಯಕ್ತಿಗಳ ಸಮೀಕ್ಷೆ

Kannadaprabha News   | Asianet News
Published : May 01, 2020, 07:51 AM ISTUpdated : May 01, 2020, 07:53 AM IST
ಕೊರೋನಾ ಭೀತಿ: ಮನೆ ಮನೆಗೆ ಭೇಟಿ, ಶೀತಜ್ವರ, ಉಸಿರಾಟದ ತೊಂದರೆ ವ್ಯಕ್ತಿಗಳ ಸಮೀಕ್ಷೆ

ಸಾರಾಂಶ

ಸಾರಿ, ಐಎಲ್‌ಐ ಭೀತಿ: ಮನೆ-ಮನೆ ಸಮೀಕ್ಷೆ| ಮೇ 2ರಂದು ಬಿಬಿಎಂಪಿಯ 63 ಉಪ ವಿಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ಶಾಲೆ ಹಾಗೂ ಬಿಬಿಎಂಪಿ ಶಿಕ್ಷಕರು, ಮತಗಟ್ಟೆಅಧಿಕಾರಿಗಳು ಸೇರಿದಂತೆ ಒಟ್ಟು 17,684 ಮಂದಿಗೆ ತರಬೇತಿ| ಪ್ರತಿಯೊಂದು ಮತಗಟ್ಟೆವಾರು ಆಯಾ ಮತಗಟ್ಟೆ ಅಧಿಕಾರಿಯ ನೇತೃತ್ವದಲ್ಲಿ ಸಮೀಕ್ಷೆ| 

ಬೆಂಗಳೂರು(ಮೇ.01): ಮೇ 4 ಅಥವಾ 5ರಿಂದ ನಗರದಲ್ಲಿ ಮನೆ-ಮನೆಗೂ ಭೇಟಿ ನೀಡಿ ತೀವ್ರ ಉಸಿರಾಟ ತೊಂದರೆ (ಸಾರಿ) ಹಾಗೂ ಐಎಲ್‌ಐ (ಶೀತಜ್ವರ ಮಾದರಿ ಅನಾರೋಗ್ಯ) ಸಮಸ್ಯೆಗಳನ್ನು ಹೊಂದಿರುವವರು ಸಮೀಕ್ಷೆ ಆರಂಭಗೊಳ್ಳಲಿದೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ ಬಸವರಾಜ್‌ ತಿಳಿಸಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ತೀವ್ರ ಉಸಿರಾಟ ತೊಂದರೆ ಹಾಗೂ ಐಎಲ್‌ಐ ಸಮಸ್ಯೆಗಳನ್ನು ಹೊಂದಿರುವವರು ಕೊರೋನಾ ಸೋಂಕಿಗೆ ತುತ್ತಾಗಿ, ಸಾವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮನೆ-ಮನೆಗೂ ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ಸಮೀಕ್ಷೆ ನಡೆಸಲು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಣಂಧ ಮೇ 2ರಂದು ಬಿಬಿಎಂಪಿಯ 63 ಉಪ ವಿಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ಶಾಲೆ ಹಾಗೂ ಬಿಬಿಎಂಪಿ ಶಿಕ್ಷಕರು, ಮತಗಟ್ಟೆಅಧಿಕಾರಿಗಳು ಸೇರಿದಂತೆ ಒಟ್ಟು 17,684 ಮಂದಿಗೆ ತರಬೇತಿ ನೀಡಲಾಗುವುದು ಎಂದರು.

ಕೊರೋನಾ ಆತಂಕ: ವಿದೇಶದಲ್ಲಿ ಸಿಲುಕಿದವರ ಕರೆತರಲು ಸರ್ಕಾರ ಸಿದ್ಧತೆ

ಪ್ರತಿಯೊಂದು ಮತಗಟ್ಟೆವಾರು ಆಯಾ ಮತಗಟ್ಟೆ ಅಧಿಕಾರಿಯ (ಬಿಎಲ್‌ಒ) ನೇತೃತ್ವದಲ್ಲಿ ಸಮೀಕ್ಷೆ ನಡೆಯಲಿದೆ. ಅವರಿಗೆ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಸಹಾಯಕರಾಗಿ ನೀಡಲಾಗುವುದು. ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಹೆಲ್ತ್‌ ವಾಚ್‌ ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ಸಂಗ್ರಹಿಸಲಾಗುವುದು ಎಂದರು.

ಸಿಬ್ಬಂದಿ ಸಂಖ್ಯೆ

ಬಿಎಲ್‌ಒ 6,818
ಸರ್ಕಾರಿ ಶಿಕ್ಷಕರು 8,965
ಅಂಗನವಾಡಿ ಕಾರ್ಯಕರ್ತೆಯರು 1,314
ಬಿಬಿಎಂಪಿ ಶಿಕ್ಷಕರು 587
ಒಟ್ಟು 17,684
 

PREV
click me!

Recommended Stories

ಕೋರಮಂಗಲ್ಲಿ ಜನಸಾಗರದಿಂದ ಸಾರ್ವಜನಿಕ ಪ್ರವೇಶ ಬಂದ್, ಕಿರಿಕ್ ಮಾಡಿದಾತ ಪೊಲೀಸ್ ವಶಕ್ಕೆ
ಬೆಂಗಳೂರು: ಎಂಜಿ ರೋಡ್ ರಷ್‌ನಲ್ಲಿ ಪತ್ನಿ ನಾಪತ್ತೆ; ಆಘಾತ ತಾಳಲಾರದೆ ಪತಿಗೆ ಪಿಟ್ಸ್!