1 ತಿಂಗಳು ಸವದತ್ತಿ ಯಲ್ಲಮ್ಮ ದೇವಿ ದರ್ಶನವಿಲ್ಲ

Kannadaprabha News   | Asianet News
Published : Nov 01, 2020, 07:35 AM ISTUpdated : Nov 01, 2020, 07:57 AM IST
1 ತಿಂಗಳು ಸವದತ್ತಿ ಯಲ್ಲಮ್ಮ ದೇವಿ ದರ್ಶನವಿಲ್ಲ

ಸಾರಾಂಶ

ಒಂದು ತಿಂಗಳ ಕಾಲ ಸವದತ್ತಿ ಎಲ್ಲಮ್ಮ  ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ

ಬೆಳಗಾವಿ(ನ.01):  ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದ ಶ್ರೀ ರೇಣುಕಾದೇವಿ ಹಾಗೂ ಚಿಂಚಲಿ ಶ್ರೀ ಮಾಯಕ್ಕಾ ದೇವಿ ಸೇರಿ ಗಡಿ ಜಿಲ್ಲೆಯ ಮೂರು ದೇವಾಲಯಗಳ ಪ್ರವೇಶಕ್ಕೆ ಮತ್ತೆ ಒಂದು ತಿಂಗಳು ಭಕ್ತರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

 ಸತತ 8 ತಿಂಗಳಿಂದ ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. 

ಇದೀಗ ಮತ್ತೆ ಒಂದು ತಿಂಗಳ ಕಾಲ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಬೆಳಗಾವಿಯಲ್ಲಿ ಭಾರೀ ಮಳೆ; ಸವದತ್ತಿ ಕೋಟೆಯ ಒಂದು ಭಾಗ ಕುಸಿತ

ದೇಶದಾದ್ಯಂತ ಕೊರೋನಾ ಸೋಂಕಿನ ಹಾವಳಿ ಹಿನ್ನೆಲೆಯಲ್ಲಿ ಮಾ.22ರಿಂದ ಜಿಲ್ಲೆಯ ಪ್ರಮುಖ ಮೂರು ದೇವಸ್ಥಾನ ಬಂದ್‌ ಮಾಡಲಾಗಿದ್ದು, ಭಕ್ತರು ಇದೀಗ ಮತ್ತೊಂದು ತಿಂಗಳು ಕಾಯಬೇಕಿದೆ.

PREV
click me!

Recommended Stories

ಬಟ್ಟೆ ತೊಳೆಯಲು ಹೋದ ನಾಲ್ವರು ನೀರು ಪಾಲು, ಅರೆಬಿಳಚಿ ಭದ್ರಾ ನಾಲೆಯಲ್ಲಿ ದುರ್ಘಟನೆ
ಭಟ್ಕಳ: ಸಂಭ್ರಮದಿಂದ‌‌ ನಡೆದ ಶ್ರೀ ಜಟಗಾ ಮಹಾಸತಿ ದೇವಿ ಜಾತ್ರೆ