ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಕಾಣೆ, KDP ಸಭೆಗೆ ಮಾತ್ರ ಹಾಜರ್

By Suvarna NewsFirst Published Apr 25, 2022, 7:16 PM IST
Highlights

*  ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಾಣೆ 
* ಜಿಲ್ಲಾ ಉಸ್ತುವಾರಿ ಕಚೇರಿಯೇ ಇಲ್ಲ
* ಇದ್ದ ಕಚೇರಿಯನ್ನ ಹುಬ್ಬಳ್ಳಿಗೆ ಶಿಫ್ಟ್ ಮಾಡಿದ ಮಾಜಿ ಸಚಿವ ಶೆಟ್ಟರ್ 

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

 ಧಾರವಾಡ, (ಏ.25) :
 ಧಾರವಾಡ ಜಿಲ್ಲೆ ಅಂದ್ರೆ ಯಾಕೋ ಏನೋ ಗೊತ್ತಿಲ್ಲ ಜಿಲ್ಲಾ ಉಸ್ತುವಾರಿ ಸಚಿವರುಗಳು ಕಡೆ ಗಣಿಸುತ್ತಿದ್ದಾರೆ ಅನ್ನೋದಕ್ಕೆ‌ ಒಂದು ಉದಾಹರಣೆ ಇದೆ. ಅಷ್ಟಕ್ಕೂ ಧಾರವಾಡ ಜಿಲ್ಲೆಯನ್ನ ಯಾಕೆ ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲೆಯನ್ನ ಕಡೆಗಣಿಸುತ್ತಿದ್ದಾರೆ ಅಂದ್ರೆ ಇತ್ತಿಚಿನ ದಿನಗಳಲ್ಲಿ ಸರಕಾರದ ಬದಲಾವಣೆಗಳಲ್ಲಿ ಯಾವ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಆಗ್ತಾರೆ ಯಾವಾಗ ಆಗ್ತಾರೆ ಯಾವಾಗ ಚೇಂಜ್ ಆಗ್ತಾರೆ ಎಂಬುದು ಗೊತ್ತಾಗುತ್ತಿಲ್ಲ.

ಧಾರವಾಡ ಜಿಲ್ಲೆಯಲ್ಲಿ 2018 ರಿಂದ ಧಾರವಾಡ ಜಿಲ್ಲಾ ಉಸ್ತುವಾರಿ ಕಚೇರಿ ಕಾಣೆಯಾಗಿದೆ ಎಂದು ಸಾರ್ವಜನಿಕರು ಮಾತನಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.. 2018 ರಲ್ಲಿ ಮೈತ್ರಿ ಸರಕಾರ ಆಯ್ಕೆಯಾದ ಬಳಿಕ ಇಲ್ಲಿಯವರೆಗೆ ಯಾವೊಬ್ಬ ಜಿಲ್ಲಾ ಉಸ್ತುವಾರಿ ಸಚಿವರು ಕೇಂದ್ರ ಸ್ಥಾನದಲ್ಲಿ ಇದ್ದು ಜನರ ಸಮಸ್ಯೆಗಳನ್ನ ಆಲಿಸಬೇಕಾದ ಸಚಿವರು ಸದ್ಯ ಜನರ ಸಂಪರ್ಕಕ್ಕೆ‌ ಸಿಗ್ತಿಲ್ಲ..

Latest Videos

ಇನ್ನು 2018 ರಲ್ಲಿ ಮೈತ್ರಿ ಸರಕಾರದಲ್ಲಿ ಧಾರವಾಡದ ವಾರ್ತಾ ಭವನದ ಕಚೇರಿಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ವಿ ದೇಶಪಾಂಡೆ ಅವರು ಕಚೇರಿಯನ್ನ ಆರಂಭ ಮಾಡಿದ್ದರು. ಆದರೆ ಬಳಿಕ ರಾಜಕೀಯ ಬೆಳವಣಿಗೆಯ ನಂತರ ಮೈತ್ರಿ ಸರಕಾರ ಪತನವಾದ ನಂತರ ಬಿಜೆಪಿ ಸರಕಾರ ಆಡಳಿತದ ಚುಕ್ಕಾಣಿಯನ್ನ‌ ಹಿಡಿಯಿತು..

ಧಾರವಾಡ ಕೆಡಿಪಿ ಸಭೆಯಲ್ಲಿ ಎಣ್ಣೆ ಕಿಕ್, ಅಬಕಾರಿ, ಪೊಲೀಸ್‌ ಇಲಾಖೆಗೆ ಕ್ಲಾಸ್

 ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ : 
ತದ ನಂತರ ಬಿಜೆಪಿ ಸರಕಾರ 2019 ರಲ್ಲಿ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರು.  ಆದರೆ ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನ ಶಿಫ್ಟ್ ಮಾಡಿದ್ರು....ಆಗಲೂ ಜನರಿಗೆ ಜಿಲ್ಲಾ ಉಸ್ತುವಾರಿ ಸಚಿವರುವರುಗಳು ಸ್ಪಂದನೆ ಕೊಟ್ಟಿಲ್ಲ...

ತದ ನಂತರ 2021 ರಲ್ಲಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಬಳಿಕ ಬಸವರಾಜ ಬೊಮ್ಮಾಯಿ‌ ಅವರು ಸಿಎಂ ಆಗಿ ಅಧಿಕಾರಿ ಸ್ವಿಕಾರ ಮಾಡಿದ್ರು. ಆದ್ರೆ, ಕೋವಿಡ್ ನಿಯಂತ್ರಣಕ್ಕೆ ಅಂತ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಧಾರವಾಡ ಜಿಲ್ಲೆಯ ಉಸ್ತುವಾರಿ ಸ್ಥಾನವನ್ನ ಅಲಂಕರಿಸಿದರು..ಇನ್ನೆನೂ ಶಂಕರ ಪಾಟೀಲ್ ಮುನೇನಕೊಪ್ಪ ಅವರ ಅಭಿವೃದ್ಧಿ ಕೆಲಸ ಮಾಡಿಕ್ಕೊಳ್ಳಬೇಕು ಅನ್ನುವಷ್ಟರಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ  ಹಾಲಪ್ಪ‌ ಆಚಾರ್ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ್ರು. ಅವರು ಉಸ್ತುವಾರಿ ಸಚಿವರಾದ ಬಳಿಕ ಎರಡು ಮೂರು ಬಾರಿ ಧಾರವಾಡ ಜಿಲ್ಲೆಗೆ ಭೇಟಿ ನೀಡಿದ್ದು ಬಿಟ್ಟರೇ  ಮರಳಿ ಧಾರವಾಡದತ್ತ ಮುಖಮಾಡಿಲ್ಲ....

ಏಪ್ರಿಲ್‌ ಮೊದಲ ಮಾರದಲ್ಲಿ ಕೆಡಿಪಿ ಸಭೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಚಳಿ ಬಿಡಿಸಿದ್ದಾರೆ. ಹೌದು ಸಚಿವರು ಸಭೆ ಮಾಡಿ ಹೋಗ್ತಾರೆ ಆದರೆ ಸಚಿವರುಗಳಿಗೆ ಜಿಲ್ಲೆಯ ಸಮಸಸ್ಯೆಗಳನ್ನ ಹೇಳಿಕ್ಕೊಳ್ಳಲು ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿನೇ ಇಲ್ಲ. .ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಹುಬ್ಬಳ್ಳಿಯಲ್ಲಿದೆಯೋ, ಕೊಪ್ಪಳದಲ್ಲಿದೆಯೋ ಒಂದು ಗೊತ್ತಾಗದಂತಾಗಿದೆ.

ಬಿಜೆಪಿ ಸರಕಾರದ ವೈಫಲ್ಯದಿಂದ ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲೆಯ ಕೇಂದ್ರಸ್ಥಾನದಲ್ಲಿದ್ದು ಜನರ ಸಮಸ್ಯಗಳಿಗೆ ಸ್ಪಂದನೆ ಕೊಡಬೇಕಾಗಿತ್ತು.ಸದ್ಯ ಈಗಷ್ಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ಹಾಲಪ್ಪ‌ ಆಚಾರ್ ಅವರು ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಚೇರಿಯನ್ನ ಮತ್ತೆ ಆರಂಭ ಮಾಡ್ತಾರಾ...ಜನರ ಸಂಕಷ್ಡಕ್ಕೆ ಸ್ಪಂದನೆ ಕೊಡ್ತಾರಾ ಎಂಬುದನ್ನ ಕಾದು ನೋಡುವಂತಾಗಿದೆ ಅಂತಾರೆ  ಚಿಂತಕರು.

 ಹುಬ್ಬಳ್ಳಿಗೆ ಶಿಫ್ಟ್ ಮಾಡಿದ್ದ ಕಚೇರಿಯನ್ನು ಸಚಿವ ಹಾಲಪ್ಪ ಆಚಾರ್ ಮತ್ತೆ ಧಾರವಾಡ ಜಿಲ್ಲೆಯಲ್ಲಿ ಕಾರ್ಯಗತವಾಗುವಂತೆ ಮಾಡಬೇಕಿದೆ .

click me!