ತಲಾಖ್ ನಿಷೇಧದಂತೆ ಬಹು ಪತ್ನಿ ಪದ್ಧತಿ ನಿಷೇಧ ಮಾಡಿ ಎಂದು ಮುಸ್ಲಿಂ ಕುಟುಂಬವೊಂದು ಪ್ರಧಾನಿ ಮೋದಿಗೆ ಮನವಿ ಮಾಡಿದೆ. ಆತನ ಪತ್ನಿಯನ್ನು ರಾಜಕೀಯ ಮುಖಂಡನೊಬ್ಬ ಪುಸಲಾಯಿಸಿ ಕರೆದೊಯ್ದಿದ್ದು, ತನ್ನ ಅಳಲು ತೋಡಿಕೊಂಡಿದ್ದಾನೆ.
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ(ಏ.25): ನನ್ನ ಪತ್ನಿಯನ್ನು ರಾಜಕೀಯ ಮುಖಂಡನೊಬ್ಬ ಪುಸಲಾಯಿಸಿ ಕರೆದೊಯ್ದಿದ್ದಾನೆ ಹೀಗಂತ ಯುವಕನೊಬ್ಬ ಮಾಧ್ಯಮಗಳ ಮುಂದೆ ಅಸಹಾಯಕತೆ ತೋಡಿಕೊಂಡಿದ್ದಾನೆ. ಅಲ್ಲದೇ ಮುಸ್ಲಿಂ ಸಮುದಾಯದ (Muslim community) ಬಹುಪತ್ನಿತ್ವ (Polygamy) ಪದ್ದತಿಯಿಂದಲೇ ಈ ರೀತಿ ನಡೆಯಬಾರದ್ದು ನಡೆಯುತ್ತಿದೆ. ಹೀಗಾಗಿ ತಲಾಖ್ (Talaq) ನಿಷೇಧದಂತೆ ಬಹು ಪತ್ನಿ ಪದ್ಧತಿ ನಿಷೇಧ ಮಾಡಿ ಎಂದು ಉಡುಪಿಯಲ್ಲಿ (Udupi) ಮುಸ್ಲಿಂ ಕುಟುಂಬವೊಂದು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.
undefined
ಹೆಸರು ಮಹಮ್ಮದ್ ಇಲಿಯಾಸ್ ವೃತ್ತಿಯಲ್ಲಿ ಡ್ರೈವರ್ ಆಗಿರುವ ಈತ ತಾನು ಹಲವು ವರ್ಷಗಳಿಂದ ಇಷ್ಟಪಟ್ಟ ಯುವತಿಯನ್ನು ನಾಲ್ಕು ವರ್ಷದ ಹಿಂದೆ ಮದುವೆಯಾಗಿ ಒಂದು ಗಂಡು ಮಗುವಿನ ಜೊತೆ ಸುಖ ಸಂಸಾರವನ್ನು ನಡೆಸುತ್ತಿದ್ದ. ಆದರೆ ಅದು ಯಾವಾಗ ಈತನ ಸಂಸಾರದ ಮೇಲೆ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಈತನ ಪತ್ನಿ ಸಂಸಾರ ತೊರೆದು, ಮದುವೆಯಾಗಿ 3 ಮಕ್ಕಳಿರುವ ಶಾಫಿ ಕಲಂದರ್ ಎಂಬಾತನ ಜೊತೆ ಹೋಗಿದ್ದಾಳೆ ಎಂದು ಇಲಿಯಾಸ್ ಆರೋಪಿಸಿದ್ದಾರೆ.
Chitradurga ಸಕ್ಕರೆ ಕಾರ್ಖಾನೆ ಮತ್ತೆ ತೆರೆಯುವಂತೆ ಹಿರಿಯೂರು ಜನರ ಆಗ್ರಹ
ಈ ಶಾಫಿ ಕಲಂದರ್ ಪಡುಬಿದ್ರಿ ಪರಿಸರದಲ್ಲಿ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯನಾಗಿದ್ದಾನೆ. ನೀನು ಜೀನತ್ ಗೆ ತಲಾಕ್ ನೀಡದೆ ಇದ್ದರೆ ನಿನ್ನ ಮಗುವನ್ನು ಸ್ಲೋ ಪಾಯೀಜನ್ ಕೊಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಕೂಡ ಶಾಫಿ ಪರ ನಿಂತಿದ್ದಾರೆ ಎಂದು ಇಲಿಯಾಸ್ ಮಾಧ್ಯಮದ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ಶಾಫಿ ಕಲಂದರ್ ಮೊದಲ ಮಗಳಿಗೆ 18 ವರ್ಷ ವಯಸ್ಸು. ಈಗ ಆತ ಕರೆದುಕೊಂಡು ಹೋಗಿರುವ ಜೀನತ್ 22 ವರ್ಷದವಳು. ತನ್ನ ಮಗಳ ವಯಸ್ಸಿನ ಯುವತಿಯ ಜೊತೆ ಮದುವೆಯಾಗಲು ಮುಂದಾಗಿರುವ ಶಾಫಿ ಕಲಂದರ್ ಗೆ ಕಾನೂನಿನ ಬೆಂಬಲವೂ ಇದೆ . ಮುಸ್ಲಿಂ ಸಮುದಾಯದಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅವಕಾಶ ಇರುವುದರಿಂದ ಆತನ ಮೊದಲ ಪತ್ನಿ ಮತ್ತು ಇತ್ತ ಕಡೆ ಹೆಂಡತಿಯನ್ನು ಕಳೆದುಕೊಂಡ ಇಲಿಯಾಸ್ ಇಬ್ಬರು ಅಸಹಾಯಕರಾಗಿದ್ದಾರೆ.
Hubballi violence ಪಾರದರ್ಶಕವಾಗಿ ತನಿಖೆ ನಡೆಸಬೇಕೆಂದು ಆಗ್ರಹ
ಪ್ರಧಾನಿ ಮೋದಿಯವರು ತ್ರಿವಳಿ ತಲಾಕ ನಿಷೇಧ ಮಾಡಿದಂತೆ ಮುಸ್ಲಿಂ ಸಮಾಜದಲ್ಲಿರುವ ಬಹುಪತ್ನಿತ್ವ ಪದ್ಧತಿಯನ್ನು ನಿಷೇಧ ಮಾಡಬೇಕು ಎಂದು ಇಲಿಯಾಸ್ ಅಕ್ಕ ಆಯೇಷಾ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಕೌಟುಂಬಿಕ ಕಲಹದ ಆರೋಪ ಕೇಳಿ ಬರುತ್ತಿದ್ದಂತೆ , ಜಿನತ್ ಅಲರ್ಟ್ ಆಗಿದ್ದಾಳೆ. ತನ್ನ ಪತಿ ಇಲಿಯಾಸ್ ಮತ್ತು ಆತನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿದಂತೆ ಕೌಟುಂಬಿಕ ಹಿಂಸೆ ಹಲ್ಲೆ ಇತ್ಯಾದಿ ಪ್ರಕರಣಗಳನ್ನು ದಾಖಲಿಸಿದ್ದಾಳೆ.
ಪತಿ, ನಾದಿನಿಯರು, ಭಾವಂದಿರು, ಅತ್ತೆ ನಾನಾ ರೀತಿಯಲ್ಲಿ ಕಿರುಕುಳ ನೀಡಿರುವುದಾಗಿ ಪಡುಬಿದ್ರಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ಒಟ್ಟಿನಲ್ಲಿ ಗಂಡನಿಗೆ ತಲಾಕ ನೀಡದೆ ಇನ್ನೊಬ್ಬನ ಜೊತೆ ಹೋಗಿರುವ ಜೀನತ್ ನಡೆ ಪೊಲೀಸರಿಗೆ ಬಗೆಹರಿಸಲಾಗದ ಕಗ್ಗಂಟಾಗಿದೆ. ಇತ್ತ ಇಲಿಯಾಸ್ ಕೂಡ ನನಗೆ ನನ್ನ ಪತ್ನಿ ಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ. ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ಪೊಲೀಸ್ ತನಿಖೆ ನಡೆಯಲಿದೆ. ಈ ಕೌಟುಂಬಿಕ ಕಲಹದ ನಡುವೆ ಬಹುಪತ್ನಿತ್ವ ರದ್ಧತಿಯ ಬೇಡಿಕೆಯೊಂದು ಮತ್ತೆ ಜೀವ ಪಡೆದುಕೊಂಡಿದೆ.
Chamarajanagara ಬ್ಯಾಗ್ ನಲ್ಲಿ ನವಜಾತ ಗಂಡು ಶಿಶು ಪತ್ತೆ!