ಹರಿಹರ ಪಂಚಮಸಾಲಿ ಪೀಠ ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಹಬ್ ಆಗಲಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ಚೆನ್ನಮ್ಮನ ಹೆಸರಿಡಿ ಎಂದು ಶ್ರೀ ವಚನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ದಾವಣಗೆರೆ (ಎ.25): ಹರಿಹರ ಪಂಚಮಸಾಲಿ ಪೀಠ ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಹಬ್ ಆಗಲಿದೆ. ಮಠದಲ್ಲಿ ಎರಡು ದಿನಗಳ ಕಾಲ ಉದ್ಯೋಗಮೇಳ ಯಶಸ್ವಿಯಾಗಿ ಜರುಗಿದ್ದು ಸಂತಸ ತಂದಿದೆ ಎಂದು ಹರಿಹರ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಂತಸ ಹಂಚಿಕೊಂಡರು. ಇದೇ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ಚೆನ್ನಮ್ಮನ ಹೆಸರಿಡಿ ಎಂದು ಆಗ್ರಹಿಸಿದ್ದಾರೆ.
ಹರಿಹರದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ಕರ್ನಾಟಕದ ವಿವಿಧ ಜಿಲ್ಲೆಗಳನ್ನೊಳಗೊಂಡು ನಮ್ಮ ಹರಿಹರ ಪಂಚಮಸಾಲಿ ಪೀಠದಲ್ಲಿ ಉದ್ಯೋಗ ದಾಸೋಹ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಪಂಚದಾಸೋಹದ ಪರಿಕಲ್ಪನೆಯನ್ನು ನಾಡಿನ ಉದ್ದಗಲಕ್ಕೂ ಬಿತ್ತಲಾಗುವುದು. ಇಲ್ಲಿ ನಡೆದ ಉದ್ಯೋಗಮೇಳದಲ್ಲಿ ಆರು ಸಾವಿರ ಮಂದಿಗೆ ಉದ್ಯೋಗ ದೊರೆತಿದೆ.
ಮಠದಲ್ಲಿ ಆರೋಗ್ಯ ದಾಸೋಹ, ಉದ್ಯೋಗ ದಾಸೋಹ ನಡೆಸಲಾಗುವುದು. ಕೇವಲ ಒಂದೇ ಜಾತಿಯವರು ಉದ್ಯೋಗ ಮೇಳದಲ್ಲಿ ಇರಲಿಲ್ಲ. ಮುಸ್ಲಿಂ ಯುವತಿ ರುಕ್ಸಾನಾ ಎಂಬುವವರಿಗೂ ಕೆಲಸಸಿಕ್ಕಿದೆ. ಭಾವೈಕ್ಯತೆ ಬಸವತತ್ವವನ್ನು ಮಾತನಾಡುವುದಕ್ಕಿಂತ ನಡೆದು ತೋರಿಸುವುದು ಹರಿಹರ ಪಂಚಮಸಾಲಿ ಪೀಠವಾಗಿದೆ. ಮೀಸಲಾತಿ ಬಗ್ಗೆ ಮುಖ್ಯಮಂತ್ರಿಗಳ ಜೊತೆ ವಿಸ್ತಾರವಾಗಿ ಮಾತನಾಡಲಾಗಿದೆ.
Boycott Muslim Jewellery Shop ಕೇರಳಕ್ಕೆ ಹೋಗಿ ಹೋರಾಡುತ್ತೇನೆಂದ ಮುತಾಲಿಕ್
ಸಮೀಕ್ಷೆ ವರದಿ ಬಂದ ಕೂಡಲೇ ಪಂಚಮಸಾಲಿ ಸಮಾಜಕ್ಕೆ ಒಳ್ಳೆಯ ದಿನಗಳು ಮೂಡಿಬರಲಿದೆ. ಸಮಾಜದ ಎಲ್ಲಾ ಮಕ್ಕಳ ಜವಾಬ್ದಾರಿ ಮಠಹೊಂದಿದೆ. ಮಠದಿಂದ ಮೀಸಲಾತಿ ಕೊಡಿಸುವ ಜವಾಬ್ದಾರಿ ಹೊಂದಿದ್ದೇವೆ. ಹರಿಹರ ಸಂಗಮ ಕ್ಷೇತ್ರವಾಗಿದೆ. ಕೆಲವೇ ವರ್ಷಗಳಲ್ಲಿ ಹರಿಹರ ಇಂಟರ್ನ್ಯಾಷನಲ್ ಹಬ್ ಆಗಲಿದೆ. ಪ್ರವಾಸೋದ್ಯಮ ತಾಣವಾಗಲಿದೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ಚೆನ್ನಮ್ಮನ ಹೆಸರಿಡಿ: ಬಸವಣ್ಣ 12 ನೇ ಶತಮಾನದಲ್ಲಿ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದರು. ಪಂಚಮಸಾಲಿ ಸಮಾಜದ ಕೆಳದಿ ರಾಣಿ ಚನ್ನಮ್ಮ ಅತ್ಯಂತ ಶ್ರೇಷ್ಠ ಮಹಾರಾಣಿಯಾಗಿದ್ದರು. ಬೆಂಗಳೂರಿನಲ್ಲಿ ಕೆಳದಿ ಚೆನ್ನಮ್ಮನ 350 ನೇ ಪಟ್ಟಾಭಿಷೇಕ ಕಾರ್ಯ ಮಾಡಲಾಗಿತ್ತು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿರಾಣಿ ಚೆನ್ನಮ್ಮನ ಹೆಸರಿಡಬೇಕು ಎಂದು ಅಂದೇ ಚರ್ಚೆ ಮಾಡಲಾಗಿತ್ತು.
ರಾಜ್ಯದಲ್ಲಿ ಸ್ತ್ರೀಯರ ಹೆಸರಿನಲ್ಲಿ ಯಾವುದೇ ವಿಮಾನ ನಿಲ್ದಾಣಗಳಿಲ್ಲ. ಭಾರತದಲ್ಲಿ ಅನೇಕ ದೃವತಾರೆಗಳಿದ್ದಾರೆ ಅದಕ್ಕೆ ಕೆಳದಿ ಚೆನ್ನಮ್ಮನ ಹೆಸರಿಡಬೇಕು ಎಂದು ಒತ್ತಾಯಿಸಿದರು. ಸಿಎಂ ಜೊತೆ ಮಾತನಾಡಿ ಬಿಎಸ್ ವೈ ಅವರೊಂದಿಗೆ ಚರ್ಚೆ ಕೂಡ ಮಾಡಲಾಗಿತ್ತು. ಸರ್ವಜನಾಂಗವನ್ನು ಒಟ್ಟಾಗಿ ತೆಗೆದುಕೊಂಡು ಹೊದವರು ಬಿಎಸ್ ವೈ.ಅವರು ಸಿಎಂ ಆದಾಗ ಮಠಗಳಿಗೆ ನೀಡಿದ ಅನುದಾನ,ದಿಟ್ಟ ಎದೆಗಾರಿಕೆ ಬಿಎಸ್ ವೈಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿಎಸ್ ವೈ ಹೆಸರಿಡಲು ನಿರ್ಧರಿಸಲಾಗಿತ್ತು. ಅದಕ್ಕೆ ತಕ್ಕಂತಹ ವರ್ಚಸ್ಸು ಅವರಿಗಿದೆ. ಆದರೆ ಬಿಎಸ್ ವೈ ಸಿಎಂಗೆ ಪತ್ರ ಬರೆದು ನನಗಿಂತಲೂ ಶ್ರೇಷ್ಠ ರಾದವರಿದ್ದಾರೆ ಅವರ ಹೆಸರಿಡಿ ಎಂದು ತಮ್ಮ ಹೆಸರು ಸೂಚಿಸುವುದು ಬೇಡ ಎಂದು ಸ್ವತಃ ಹೇಳಿದ್ದಾರೆ ಆದ್ದರಿಂದ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣ ಕ್ಕೆ ಕೆಳದಿ ರಾಣಿ ಚೆನ್ನಮ್ಮನ ಹೆಸರಿಡಬೇಕು ಎಂದು ಒತ್ತಾಯಿಸಿದರು. ಇದರಿಂದ ಸ್ವಾತಂತ್ರ್ಯ ಹೋರಾಟಗಾರರಾದ ಕೆಳದಿ ಚೆನ್ನಮ್ಮನ ಪರಿಚಯವಾಗುತ್ತದೆ. ಈ ಬಗ್ಗೆ
ಕೇಂದ್ರ ಗೃಹ ಸಚಿವರಿಗೆ ಮಾನವಿ ಮಾಡಲಾಗುವುದು ಎಂದರು.
Udupi ತಲಾಕ್ ನಂತೆ ಬಹುಪತಿತ್ವವನ್ನೂ ನಿಷೇಧಿಸಲು ಮೋದಿಗೆ ಮುಸ್ಲಿಂ ಕುಟುಂಬದ
ರಾಜ್ಯದ ಎಲ್ಲಾ ಲಿಂಗಾಯತರಿಗು ಒಂದೇ ಮೀಸಲಾತಿ ಸಿಗಬೇಕು: ಲಿಂಗಾಯತ ಸಮಾಜ ಒಗ್ಗಟ್ಟಾಗಬೇಕು. ಎಲ್ಲರಿಗೂ ಮೀಸಲಾತಿ ಬೇಕಿದೆ. ಅದಕ್ಕಾಗಿ ಎಲ್ಲರೂ ಒಂದಾಗುವ ಅವಶ್ಯಕತೆ ಇದೆ.ಸಮುದಾಯದ ಜಾಗೃತಿಗಾಗಿ ಮೊದಲು ಮನೆ ಗೆದ್ದು ಮಾರು ಗೆಲ್ಲಬೇಕು ಎನ್ನುವ ತತ್ವ ನನ್ನದು.ಅದಕ್ಕಾಗಿ ಪಂಚಮಸಾಲಿ ಸಮಾಜ ಒಗ್ಗೂಡಿಸಲಾಗುವುದು. ವಾಲ್ಮೀಕಿ ಸಮಾಜಕ್ಕೂ ಮೀಸಲಾತಿ ದೊರೆಯಬೇಕು. ನ್ಯಾ.ನಾಗಮೋಹನದಾಸ್ ವರದಿ ನೀಡಿ ವರ್ಷವಾಗಿದೆ ಆ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆಯಿದೆ. ವಾಲ್ಮೀಕಿ ಶ್ರೀಗಳ ಹೊರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಪಂಚಮಸಾಲಿ ಸಮಾಜ ಒಡೆದರು ಎಂಬ ಅಪವಾದ ಬೇಡ. ಎಲ್ಲಾ ಲಿಂಗಾಯತರು ಒಂದಾಗಬೇಕು ಬಸವಣ್ಣನವರ ವಿಚಾರಧಾರೆಯಂತೆ ನಾವೆಲ್ಲರೂ ಒಟ್ಟಾಗಬೇಕು.