ಮೈಸೂರು (ಜು.12): ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿದ 17 ಮಂದಿಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ನಾನೇ ಬೇರೆ, ಅವರೇ ಬೇರೆ, ನಾನು ಅವರ ಜೊತೆ ಎಲ್ಲಿಯೂ ಗುರುತಿಸಿಕೊಂಡಿಲ್ಲ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎನ್.ಮಹೇಶ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸೇರುವವರಿಗೆ ಡಿ.ಕೆ.ಶಿವಕುಮಾರ್ ಆಹ್ವಾನ ನೀಡಿರುವ ಸಂಬಂಧ ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಆಹ್ವಾನ ಕೊಟ್ಟಿಲ್ಲ, ಆ 17 ಮಂದಿಗೆ ಆಹ್ವಾನ ಕೊಟ್ಟಿದ್ದಾರೆ. ನಾನು ಆಗ ಬಿಎಸ್ಪಿಯಲ್ಲಿದ್ದೆ, ಈಗ ಸ್ವತಂತ್ರವಾಗಿದ್ದೀನಿ ಎಂದು ಹೇಳಿದರು.
ಬಿಜೆಪಿಯದ್ದು ಯಡವಟ್ಟು ಸರ್ಕಾರ : ಶಾಸಕ ಮಹೇಶ್ ವಾಗ್ದಾಳಿ
ಸಮ್ಮಿಶ್ರ ಸರ್ಕಾರ ಕೆಡವುದರಲ್ಲಿ, ಯಡಿಯೂರಪ್ಪ ಸರ್ಕಾರ ರಚನೆಯಾಗಲೂ ನನ್ನ ಪಾತ್ರ ಇಲ್ಲ. ಯಡಿಯೂರಪ್ಪ ವಿಶ್ವಾಸ ಮತಯಾಚನೆ ಮಾಡಿದಾಗ ನಾನು ಗೈರಾಗಿದ್ದೆ ಎಂದರು.