
ಧಾರವಾಡ(ಜು.12): ಕುಡಿದ ಅಮಲಿನಲ್ಲಿದ್ದ ಪತಿ ಮಹಾಶನೊಬ್ಬ ತನ್ನ ಪತ್ನಿಯ ಮೂಗನ್ನು ಕಚ್ಚಿ ಗಾಯಪಡಿಸಿ ಪರಾರಿಯಾಗಿರುವ ಪ್ರಕರಣ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದ ನಿವಾಸಿ ಉಮೇಶ ಗಂಡಗುದರಿ(35) ಕೆಲವರ್ಷಗಳ ಹಿಂದೆ ಅಮ್ಮಿನಬಾವಿಯ ಗೀತಾ ಅವರನ್ನು ವಿವಾಹವಾಗಿದ್ದು ದಂಪತಿ ಮಧ್ಯೆ ವೈಮನಸ್ಸು ಇದ್ದದ್ದರಿಂದ ಗೀತಾ ಅಮ್ಮಿನಭಾವಿ ಗ್ರಾಮದಲ್ಲಿರುವ ತಮ್ಮ ತವರು ಮನೆ ಸೇರಿದ್ದರು.
ಜಾತಿ ಕೇಳಿ ದಲಿತ ವ್ಯಕ್ತಿಗೆ ಥಳಿತ, ಗುಪ್ತಾಂಗಕ್ಕೆ ಗಾಯ!
ಶನಿವಾರ ರಾತ್ರಿ ಗೀತಾಳ ತವರುಮನೆಗೆ ಬಂದ ಉಮೇಶ ಜಗಳ ತೆಗೆದಿದ್ದು ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಮೂಗನ್ನೇ ಕಚ್ಚಿ ಗಾಯಗೊಳಿಸಿದ್ದಾನೆ. ಜಗಳ ಬಿಡಿಸಲು ಬಂದ ಅತ್ತೆಯ ಕತ್ತನ್ನು ಹಿಸುಕಿದ್ದಾನೆ. ಈ ಗಲಾಟೆ ಕೇಳಿ ಅಕ್ಕಪಕ್ಕದವರು ಸೇರುತ್ತಿದ್ದಂತೆ ಆತ ಓಡಿ ಹೋಗಿದ್ದಾನೆ. ಸದ್ಯ ಗೀತಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಧಾರವಾಡ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.