ಡಾ.ಪದ್ಮನಾಭ ಕಾಮತ್‌ರ ಕ್ಯಾಡ್‌-ಡೋರ್‌ ಸ್ಟೆಪ್‌ ಯೋಜನೆಯ ಮಾಹಿತಿ ಬಯಸಿದ ಕೇಂದ್ರ

Kannadaprabha News   | Asianet News
Published : Jul 16, 2021, 11:25 AM IST
ಡಾ.ಪದ್ಮನಾಭ ಕಾಮತ್‌ರ ಕ್ಯಾಡ್‌-ಡೋರ್‌ ಸ್ಟೆಪ್‌ ಯೋಜನೆಯ ಮಾಹಿತಿ ಬಯಸಿದ ಕೇಂದ್ರ

ಸಾರಾಂಶ

 ಹೃದ್ರೋಗಿಗಳ ಬಳಿಗೆ ಉಚಿತ ಇಸಿಜಿ ಯಂತ್ರ ತಲುಪಿಸುವ ಮೂಲಕ ಗ್ರಾಮ ಮಟ್ಟದಲ್ಲಿ ಸಮಾಜಸೇವಾ ಕಾರ್ಯ ಪ್ರಧಾನ ಮಂತ್ರಿಗಳಿಂದ ಮೆಚ್ಚುಗೆ ಪಡೆದುಕೊಂಡ ಮಂಗಳೂರಿನ ಪ್ರಸಿದ್ಧ ಹೃದ್ರೋಗತಜ್ಞ ಡಾ.ಪದ್ಮನಾಭ ಕಾಮತ್‌  ಅವರ ಕಾರ್ಡಿಯಾಲಜಿ ಡೋರ್‌ಸ್ಟೆಫ್ಸ್‌ ಯೋಜನೆ ಕುರಿತು ಮಾಹಿತಿ ಬಯಸಿದ ನೀತಿ ಆಯೋಗ

 ಮಂಗಳೂರು (ಜು.16) :  ಹೃದ್ರೋಗಿಗಳ ಬಳಿಗೆ ಉಚಿತ ಇಸಿಜಿ ಯಂತ್ರ ತಲುಪಿಸುವ ಮೂಲಕ ಗ್ರಾಮ ಮಟ್ಟದಲ್ಲಿ ಸಮಾಜಸೇವಾ ಕಾರ್ಯಕ್ಕೆ ಪ್ರಧಾನ ಮಂತ್ರಿಗಳಿಂದ ಮೆಚ್ಚುಗೆ ಪಡೆದುಕೊಂಡ ಮಂಗಳೂರಿನ ಪ್ರಸಿದ್ಧ ಹೃದ್ರೋಗತಜ್ಞ ಡಾ.ಪದ್ಮನಾಭ ಕಾಮತ್‌ ಅವರ ಕಾರ್ಡಿಯಾಲಜಿ ಡೋರ್‌ಸ್ಟೆಫ್ಸ್‌ ಯೋಜನೆ ಕುರಿತು ಕೇಂದ್ರ ನೀತಿ ಆಯೋಗ ಮಾಹಿತಿ ಬಯಸಿದೆ.

ಒಂದು ವಾರದ ಹಿಂದೆಯಷ್ಟೆರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು ಡಾ.ಪದ್ಮನಾಭ ಕಾಮತ್‌ ಅವರಿಂದ ಪಿಪಿಟಿ ಮೂಲಕ ಸಮಗ್ರ ಮಾಹಿತಿ ಪಡೆದುಕೊಂಡಿದ್ದರು. 

ಮಂಗಳೂರು: ಗ್ರಾಪಂಗೆ ವೈದ್ಯನಿಂದ ಉಚಿತ ಇಸಿಜಿ ಯಂತ್ರ..!

ಗ್ರಾಮ ಪಂಚಾಯ್ತಿಗಳಿಗೆ ಉಚಿತ ಇಸಿಜಿ ನೀಡುವ ಇವರ ಯೋಜನೆ ಬಗ್ಗೆ ಕನ್ನಡಪ್ರಭ ಮೊದಲು ಬೆಳಕು ಚೆಲ್ಲಿತ್ತು. ಆ ಬಳಿಕ ಈ ಯೋಜನೆಯನ್ನು ರಾಜ್ಯಕ್ಕೆ ವಿಸ್ತರಿಸುವ ಕುರಿತಂತೆ ಸಮಗ್ರ ಮಾಹಿತಿ ಪಡೆಯುವಂತೆ ಇಲಾಖೆಯ ಸಚಿವ ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. 

ಮಂಗಳೂರು ವೈದ್ಯ ಪದ್ಮನಾಭ ಕಾಮತ್‌ ಶ್ಲಾಘಿಸಿದ ಪ್ರಧಾನಿ ಮೋದಿ

ಇದೀಗ ಕೇಂದ್ರ ನೀತಿ ಆಯೋಗ ಸದಸ್ಯೆ ವಿಜಯಶ್ರೀ ಎಲ್ಲಪ್ಪ ಅವರು ಈ ಯೋಜನೆಯ ಮಾಹಿತಿ ಬಯಸಿ ಟ್ವೀಟ್‌ ಮಾಡಿದ್ದಾರೆ. ನಿಮ್ಮ ಡೋರ್‌ ಸ್ಟೆಪ್‌ ಯೋಜನೆ ಉತ್ತಮವಾಗಿದೆ. ಆ ಬಗ್ಗೆ ನಮಗೆ ಮಾಹಿತಿ ಬೇಕಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಕೇಂದ್ರದ ಈ ಕೋರಿಕೆಯನ್ನು ಮನ್ನಿಸುವುದಾಗಿ ಡಾ.ಪದ್ಮನಾಭ ಕಾಮತ್‌ ಪ್ರತಿಕ್ರಿಯಿಸಿದ್ದಾರೆ.

PREV
click me!

Recommended Stories

ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!
ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?