ರಾಮನಗರ ಜಿಲ್ಲೆ ಚೆನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಮದುವೆಗೆ ಅದ್ದೂರಿ ತಯಾರಿ ಮಾಡಲಾಗುತಿತ್ತು. ಆದರೆ ಇದೀಗ ಪ್ಲಾನ್ ಫುಲ್ ಚೇಂಜ್ ಆಗುವ ಸಾಧ್ಯತೆ ಹೆಚ್ಚಾಗಿದೆ.
ಬೆಂಗಳೂರು [ಮಾ.11]: ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆಗೂ ಇದೀಗ ಕೊರೋನಾ ವೈರಸ್ ಭೀತಿ ಕಾಡುತ್ತಿದೆ.
ಏಪ್ರಿಲ್ 17 ರಂದು ನಿಖಿಲ್ ಕುಮಾರಸ್ವಾಮಿ ವಿವಾಹಕ್ಕೆ ದಿನಾಂಕ ನಿಗದಿಯಾಗಿದ್ದು, ರಾಮನಗರದ ಚನ್ನಪಟ್ಟಣ ಬಳಿ ದೊಡ್ಡ ಮೈದಾನದಲ್ಲಿ ಮದುವೆ ಮಂಟ ಸಿದ್ಧ ಮಾಡಲಾಗುತಿತ್ತು. ಆದರೆ ಇದೀಗ ಸ್ಥಳ ಬದಲಾವಣೆ ಮಾಡಲು ಚಿಂತನೆ ನಡೆದಿದೆ.
ವಿವಾಹಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದ್ದು ಈ ನಿಟ್ಟಿನಲ್ಲಿ, ಇದೀಗ ಕೊರೋನಾ ಭೀತಿಯಿಂದ ಪ್ಲಾನ್ ಬದಲಾಯಿಸುವ ಸಾಧ್ಯತೆ ಹೆಚ್ಚಿದೆ.
ಮಗನ ಮದುವೆಗೆ ಯಾವ ಗಿಫ್ಟೂ ಇಲ್ಲ : ಸಿಂಪಲ್ ಆಗಿ ಮಾಡ್ತೀವಿ ಅಷ್ಟೇ...
ರಾಮನಗರ ಬದಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಚಿಂತನೆ ನಡೆದಿದ್ದು, ಆಪ್ತರಿಗಷ್ಟೇ ಆಮಂತ್ರಣ ನೀಡುವ ಯೋಚನೆ ನಡೆದಿದೆ.
ಈಗಾಗಲೇ ಕೊರೋನಾ ಹಾವಳಿ ಹೆಚ್ಚಾಗಿದ್ದು, ಎಲ್ಲೆಡೆಯೂ ಜನರು ಆತಂಕದ ನಡುವೆ ಜೀವಿಸುವಂತಾಗಿದೆ. ಈಗಾಗಲೇ ವಿಶ್ವದಲ್ಲಿ ಸಾವಿರಾರು ಜನರನ್ನು ಬಲಿ ಪಡೆದ ಕೊರೋನಾದಿಂದ ಭಯಬೀತಿ ಹೆಚ್ಚಿದ್ದು, ಹೆಚ್ಚಿನ ಜನ ಒಂದೆಡೆ ಸೇರುವುದು ಆತಂಕಕ್ಕೆ ಎಡೆ ಮಾಡಿಕೊಡುತ್ತಿದೆ.