ಕೊರೋನಾ ಭೀತಿ: ಸಾವಿರಾರು ಕೋಳಿಗಳ ಜೀವಂತ ಸಮಾಧಿ

Kannadaprabha News   | Asianet News
Published : Mar 11, 2020, 10:54 AM IST
ಕೊರೋನಾ ಭೀತಿ: ಸಾವಿರಾರು ಕೋಳಿಗಳ ಜೀವಂತ ಸಮಾಧಿ

ಸಾರಾಂಶ

ಹಕ್ಕಿಜ್ವರ ಭೀತಿ: 6 ಸಾವಿರ ಕೋಳಿಗಳ ಜೀವಂತ ಸಮಾಧಿ| ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಲೋಳಸೂರ ಗ್ರಾಮದಲ್ಲಿ ನಡೆದ ಘಟನೆ| ಕೇರಳದಲ್ಲಿ ಕಾಣಿಸಿಕೊಂಡ ಹಕ್ಕಿಜ್ವರ| 

ಗೋಕಾಕ(ಮಾ.11): ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ವೈರಸ್‌ ರಾಜ್ಯಕ್ಕೂ ವ್ಯಾಪಿಸಿದೆ. ಇದರ ನಡುವೆ ಹಕ್ಕಿಜ್ವರ ಕೂಡ ಬಾಧಿಸುವ ಸಾಧ್ಯತೆ ಇರುವುದರ ಜತೆಗೆ ಚಿಕನ್‌ ದರ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಲೋಳಸೂರ ಗ್ರಾಮದಲ್ಲಿ ಆರು ಸಾವಿರಕ್ಕೂ ಅಧಿಕ ಜೀವಂತ ಕೋಳಿಗಳನ್ನು ಸಮಾಧಿ ಮಾಡಿದ ಘಟನೆ ಸೋಮವಾರ ನಡೆದಿದೆ.

ಲೊಳಸೂರ ಗ್ರಾಮದ ಹೊರ ವಲಯದಲ್ಲಿರುವ ನಜೀರ್‌ ಮಕಾಂದಾರ ಅವರು ತಮ್ಮ ಕೋಳಿ ಫಾರ್ಮ್‌ನಲ್ಲಿದ್ದ  ಸಾಕಿದ್ದ ಸುಮಾರು ಆರು ಸಾವಿರಕ್ಕೂ ಹೆಚ್ಚು ಜೀವಂತ ಕೋಳಿಗಳನ್ನು ತಮ್ಮ ಜಮೀನಿನಲ್ಲಿ ಜೆಸಿಬಿಯಿಂದ ಗುಂಡಿ ತೆಗೆಸಿ ಸಮಾಧಿ ಮಾಡಿದ್ದಾರೆ. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕೋಳಿಗಳಿಗೆ ಯಾವುದೇ ಬಾಧೆ ಕಾಣಿಸದಿದ್ದರೂ ಈ ರೀತಿ ಜೀವಂತ ಸಮಾಧಿ ಮಾಡುವ ಅಗತ್ಯವೇನಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಕೇರಳದಲ್ಲಿ ಹಕ್ಕಿಜ್ವರ ಬಾಧಿಸಿದ್ದು, ಮುಂದೆ ವಿಸ್ತಾರಗೊಳ್ಳುವ ಆತಂಕ ಕಾಡಿದೆ. ಜತೆಗೆ ಕೋಳಿ ಮಾಂಸದ ಬೆಲೆ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಜೀವಂತ ಕೋಳಿಗಳ ಸಮಾಧಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
 

PREV
click me!

Recommended Stories

ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ