ತುಮಕೂರಿನಲ್ಲೇ ಮತ್ತೊಂದು ಕೇಸ್ : ಅಧಿಕಾರಿಗಳ ಎದುರೇ ನೂರಾರು ಮರಗಳ ಮಾರಣಹೋಮ

By Kannadaprabha NewsFirst Published Mar 11, 2020, 10:59 AM IST
Highlights

ತುಮಕೂರಿನ  ತಿಪ್ಪೂರಿನಲ್ಲಿ ತೆಂಗು ಅಡಕೆ ಮರ ಕಡಿದ ಪ್ರಕರಣ ನಡೆದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನೂರಾರು ಮರಗಳ ಮಾರಣಹೋಮ ನಡೆಸಲಾಗಿದೆ. 

ತುಮಕೂರು [ಮಾ.11]: ತುಮಕೂರು ಜಿಲ್ಲೆಯ ತಿಪ್ಪೂರಿನಲ್ಲಿ ನೂರಾರು ಅಡಕೆ ತೆಂಗಿನ ಮರಗಳ ಮಾರಣಹೋಮ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮದನಘಟ್ಟ ಗ್ರಾಮದಲ್ಲಿಯೂ ಮರಗಳನ್ನು ಕಡಿಯಲಾಗಿದೆ. 20 ತೆಂಗಿನ ಮರ, 80 ಅಡಕೆ ಮರಗಳನ್ನು ನಿರ್ಧಾಕ್ಷಿಣ್ಯವಾಗಿ ಕತ್ತರಿಸಿ ಹಾಕಲಾಗಿದೆ. 

ಕಂದಾಯ ಅಧಿಕಾರಿಗಳ ಆದೇಶದ ಮೇರೆ ಡಿಸೆಂಬರ್ 18 ರಂದೆ ಮರಗಳನ್ನು ಕಡಿದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ..

ಅಮೃತೇಶಯ್ಯ ಎಂಬುವವರಿಗೆ ಸೇರಿದ್ದ ಮರಗಳನ್ನು ಕಟ್ಟೆ ಒತ್ತುವರಿ ಮಾಡಿದ್ದಾರೆ ಎನ್ನುವ ಆರೋಪದ ಅಡಿಯಲ್ಲಿ ಮರಗಳನ್ನು ಕಡಿಯಲಾಗಿದೆ. 

ಗ್ರಾಮಲೆಕ್ಕಾಧಿಕಾರಿ ಊರ್ಮಿಳಾ, ಆರ್ ಐ ನಾರಾಯಣ್ ಸಮ್ಮುಖದಲ್ಲಿ ಮರಳ ಕಡಿಯಲಾಗಿದೆ. ಜಾಗ ತೆರವು ಮಾಡುವಂತೆ ಮಹದೇವಯ್ಯ ಎನ್ನುವವರುತಹಶೀಲ್ದಾರ್ ಮಮತಾಗೆ ನೀಡಿದ್ದ ದೂರಿನ ಅಡಿಯಲ್ಲಿ ಮರ ಕಡಿಯಾಲಗಿದೆ. .

click me!