Omicron Threat: ನೈಟ್‌ ಕರ್ಫ್ಯೂ ಅನಿವಾರ್ಯ: ಸಚಿವ ಆನಂದ್‌ ಸಿಂಗ್‌

By Kannadaprabha News  |  First Published Dec 29, 2021, 8:28 AM IST

*   ಜನರ ಆರೋಗ್ಯ ಕಾಪಾಡುವುದಕ್ಕಾಗಿ ಇದು: 
*  ರೋಗ ಹರಡಿದ ಮೇಲೆ ಏನು ಮಾಡಲು ಆಗದು
*  ಹರಡುವ ಮುನ್ನವೇ ತಡೆಯುವುದಕ್ಕಾಗಿ ಕ್ರಮ
 


ಕೊಪ್ಪಳ(ಡಿ.29):  ಜನರ ಆರೋಗ್ಯ ಕಾಪಾಡುವುದಕ್ಕಾಗಿ ನೈಟ್‌ ಕರ್ಫ್ಯೂ(Night Curfew) ಅನಿವಾರ್ಯವಾಗಿದೆ. ಹೀಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಒಮಿಕ್ರೋನ್‌(Omicron) ಹರಡುವುದನ್ನು ತಪ್ಪಿಸಲು ಈ ಆದೇಶ ಮಾಡಿದ್ದಾರೆ ಎಂದು ಪ್ರವಾಸೋಧ್ಯಮ ಸಚಿವ ಆನಂದ್‌ ಸಿಂಗ್‌(Anand Singh) ಹೇಳಿದ್ದಾರೆ.  ಮುನಿರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ವಿರೋಧಿಸುತ್ತಾರೆ ಎನ್ನುವುದು ಸರಿಯಲ್ಲ. ಜನರಿಗಾಗಿಯೇ ಇದನ್ನು ಮಾಡಿರುವುದು ಹಾಗೂ ಇದು ಜನರ ಸರ್ಕಾರವೇ ಆಗಿದೆ. ಹೀಗಾಗಿ ಜನರ ಆರೋಗ್ಯದ(Health) ಹಿತದೃಷ್ಟಿಯಿಂದ ಈ ಕ್ರಮವಹಿಸಲಾಗಿದೆ. ಕೆಲವರಿಗೆ ತೊಂದರೆಯಾಗುತ್ತದೆ ಎನ್ನುವುದು ಗೊತ್ತಿದೆ. ಆದರೆ, ಅನಿವಾರ್ಯವಾಗಿರುವುದರಿಂದ ಏನು ಮಾಡಲು ಆಗುವುದಿಲ್ಲ ಎಂದರು.

ಚುನಾವಣೆ(Election) ನಡೆಸುವಾಗ ಇಲ್ಲದ ಕರ್ಫ್ಯೂ ಚುನಾವಣೆ ಮುಗಿಯುತ್ತಿದ್ದಂತೆ ಏಕೆ ಎನ್ನುವ ಪ್ರಶ್ನೆಗೆ, ಎಲ್ಲದನ್ನು ಪ್ರಶ್ನೆ ಮಾಡಲು ಬರುತ್ತದೆ ಮತ್ತು ಎಲ್ಲದಕ್ಕೂ ಉತ್ತರವೂ ಇರುತ್ತದೆ. ಕೆಲವೊಂದು ಸಾರಿ ಎಲ್ಲದಕ್ಕೂ ಉತ್ತರ ಕೊಡುವುದಕ್ಕೂ ಆಗುವುದಿಲ್ಲ. ಈಗಂತೂ ಜನರ ಆರೋಗ್ಯದ ಹಿತಕ್ಕಾಗಿ ಅನಿವಾರ್ಯವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ನಾನಂತೂ ರಾತ್ರಿ 8 ಗಂಟೆಯ ಮೇಲೆ ಮನೆಯಿಂದ ಆಚೆ ಹೋಗುವುದೇ ಇಲ್ಲ. ಅಂಥ ಪ್ರಸಂಗವೂ ಇರುವುದಿಲ್ಲ. ಜನರಿಗೂ ಅದು ಸಮಸ್ಯೆಯಾಗುವುದಿಲ್ಲ. ನೀವು ತಡರಾತ್ರಿ ಸುತ್ತಬೇಕಾಗಬಹುದೇನು ಎಂದು ಮರು ಪ್ರಶ್ನಿಸಿದರು. ಏನೇ ಇರಲಿ, ಜನರ ಒಳತಿಗಾಗಿ ತಂದಿರುವ ಕರ್ಫ್ಯೂ ಎಲ್ಲರು ಪಾಲಿಸೋಣ ಎಂದರು.

Tap to resize

Latest Videos

Omicron Threat: ಬೆಂಗ್ಳೂರಲ್ಲಿ ಹೆಚ್ಚುತ್ತಿದೆ ಕೊರೋನಾ: ಮೈಮರೆತ್ರೆ ಅಪಾಯ ಫಿಕ್ಸ್‌..!

ಅಂಜನಾದ್ರಿ ಅಭಿವೃದ್ಧಿಗೆ ಪ್ರತ್ಯೇಕ ಸಭೆ:

ಆಂಜನೇಯನ(Hanuman) ಜನ್ಮಸ್ಥಳ ಅಂಜನಾದ್ರಿ(Anjanadri0 ದಿನೇ ದಿನೇ ಪ್ರಸಿದ್ಧಿಯಾಗುತ್ತಿದ್ದು, ಇದನ್ನು ಅಭಿವೃದ್ಧಿ ಮಾಡುವ ದಿಸೆಯಲ್ಲಿ ಜನವರಿಯಲ್ಲಿ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಪ್ರವಾಸೋಧ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಅಂಜನಾದ್ರಿಯ ಅಭಿವೃದ್ಧಿಗೆ ಈಗಾಗಲೇ ಮಾಸ್ಟರ್‌ ಪ್ಲಾನ್‌ ಸಹ ಮಾಡಲಾಗಿದೆ. ರೂಪ್‌ವೇ ಸಹ ಮಾಡಲು ಚಿಂತನೆ ನಡೆಸಿ, ಕ್ರಮವಹಿಸಲಾಗಿದೆ. ಇದೆಲ್ಲವೂ ಸೇರಿದಂತೆ ಇನ್ನಷ್ಟುಅಭಿವೃದ್ಧಿ ಮಾಡುವ ಕುರಿತು ಜನವರಿಯಲ್ಲಿ ಪ್ರತ್ಯೇಕ ಸಭೆಯನ್ನು ಅಂಜನಾದ್ರಿ ಅಭಿವೃದ್ಧಿಗಾಗಿ ಮಾಡಲಾಗುವುದು ಎಂದು ತಿಳಿಸಿದರು.

ಒಮಿಕ್ರೋನ್‌ ರಾಜ್ಯದಲ್ಲಿ(Karnataka) ಪತ್ತೆಯಾಗಿರುವುದರಿಂದ ಜನರ ಆರೋಗ್ಯದ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ(Government of Karnataka) ನೈಟ್‌ ಕರ್ಫ್ಯೂ ಜಾರಿಗೊಳಿಸಿದೆ. ಜನರ ಆರೋಗ್ಯಕ್ಕಾಗಿ ವ್ಯಾಪಾರಸ್ಥರು ಸೇರಿದಂತೆ ಎಲ್ಲರು ಸಹಕಾರ ನೀಡಬೇಕು ಅಂತ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ತಿಳಿಸಿದ್ದಾರೆ. 

ಅಗತ್ಯಕ್ಕೆ ತಕ್ಕಂತೆ ಮಕ್ಕಳ ಲಸಿಕೆ ಪೂರೈಕೆ: ಸುಧಾಕರ್‌

ಬೆಂಗಳೂರು: ಮಕ್ಕಳಿಗೆ(Children) ನೀಡುವ ಕೋವ್ಯಾಕ್ಸಿನ್‌ ಲಸಿಕೆಯ(vaccine) ಲಭ್ಯತೆ ಕುರಿತು ಚರ್ಚೆ ನಡೆಸಿದ್ದು, ಕೇಂದ್ರ ಸರ್ಕಾರ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌(Dr K Sudhakar) ತಿಳಿಸಿದರು.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ(Central Government) ಮಾರ್ಗಸೂಚಿಯಲ್ಲಿ 15-18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆಯನ್ನು ನೀಡಬೇಕು ಎಂದು ಸೂಚಿಸಿದೆ. ರಾಜ್ಯದಲ್ಲಿ ಲಸಿಕೆಗೆ ಅರ್ಹ 43 ಲಕ್ಷಕ್ಕೂ ಅಧಿಕ ಮಕ್ಕಳಿದ್ದಾರೆ. ಸದ್ಯ ಕೋವಿಶೀಲ್ಡ್‌ ದಾಸ್ತಾನು ಹೆಚ್ಚಿದ್ದು, ಕೋವಾಕ್ಸಿನ್‌ ಕಡಿಮೆ ಇದೆ. ಕೇಂದ್ರ ಸರ್ಕಾರವು ಅಗತ್ಯಕ್ಕೆ ತಕ್ಕಂತೆ ಲಸಿಕೆಯನ್ನು ಪೂರೈಕೆ ಮಾಡಲಿದೆ ಎಂದರು.

Coronavirus: ಕೊರೋನಾ ವಿರುದ್ಧದ ಹೋರಾಟಕ್ಕೆ ಭಾರತದ ಬಳಿಯಿದೆ 12 ಶಸ್ತ್ರಾಸ್ತ್ರಗಳು

ಜ.3 ರಂದು ಮುಖ್ಯಮಂತ್ರಿಗಳು ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯಾದ್ಯಂತ ವಿಧಾನಸಭಾ ಕ್ಷೇತ್ರವಾರು ಅಲ್ಲಿನ ಶಾಸಕರು, ಸಚಿವರು ಚಾಲನೆ ನೀಡಲಿದ್ದಾರೆ. ದಾಸ್ತಾನು ಆಧರಿಸಿ ನೋಂದಣಿಯಾದವರಲ್ಲಿ ನಿತ್ಯ ಇಂತಿಷ್ಟುಮಂದಿಗೆ ಲಸಿಕೆ ನೀಡಲಾಗುವುದು. ಈಗಾಗಲೇ ಆರೋಗ್ಯ ಇಲಾಖೆ ಆಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕರ್ಫ್ಯೂಗೆ ಜನರು ಸಹಕರಿಸಬೇಕು:

‘ಒಮಿಕ್ರೋನ್‌ ಹತೋಟಿ ನಿಟ್ಟಿನಲ್ಲಿ ರಾಜ್ಯದಲ್ಲಿ 10 ದಿನಗಳ ಕರ್ಫ್ಯೂ ವಿಧಿಸಲಾಗಿದೆ. ಸರ್ಕಾರಕ್ಕೆ ವಾಣಿಜ್ಯ ಚಟುವಟಿಕೆ ನಿಗ್ರಹಕ್ಕೆ ಇಷ್ಟವಿಲ್ಲ. ಒಮಿಕ್ರೋನ್‌ ಹೆಚ್ಚಳವಾಗಬಾರದು ಎಂದು ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದೇವೆ. ಸಾರ್ವಜನಿಕರು ಅರ್ಥ ಮಾಡಿಕೊಂಡು ಪಾಲಿಸಬೇಕು. ಮುಂದಿನ ದಿನಗಳಲ್ಲಿ ಸೋಂಕಿನ ಏರಿಳಿತವನ್ನು ಆಧರಿಸಿ ಪರೀಕ್ಷೆಗೆ ಕ್ರಮವಹಿಸಲಾಗುವುದು. ಕೊರೋನಾ ಕಳೆದ ಎರಡು ಅಲೆಗಳಲ್ಲಿ ಪಾಸಿಟಿವ್‌ ಬಂದ ಕೂಡಲೇ ಆಸ್ಪತ್ರೆ ಸೇರುತ್ತಿದ್ದರು. ಈ ಬಾರಿ ವೈದ್ಯರ ಸಲಹೆ ಮೇರೆಗೆ ಮಾತ್ರ ದಾಖಲಾತಿ ಸೇರಬೇಕು ಎಂದು ನಿಯಮವನ್ನು ಜಾರಿಗೆ ತರಲಾಗುವುದು. ಕಳೆದ ಎರಡು ಅಲೆಗಳಂತೆ ಟೆಲಿಮೆಡಿಸಿನ್‌, ಕ್ವಾರಂಟೈನ್‌ ಶಿಸ್ತುಬದ್ಧವಾಗಿ ಜಾರಿಗೆ ತರಲಾಗುವುದು’ ಎಂದು ತಿಳಿಸಿದರು.
 

click me!