Raichur: ರಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ!

By Suvarna News  |  First Published Feb 11, 2022, 2:02 PM IST

*ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು!
*ವೈದ್ಯರ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶು ಸಾವು ಆರೋಪ
*ಪೋಷಕರಿಂದ ರಿಮ್ಸ್ ಆಸ್ಪತ್ರೆ ವಿರುದ್ಧ ಆಕ್ರೋಶ..
*ಕೆಲಕಾಲ ರಿಮ್ಸ್ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ 


ರಾಯಚೂರು (ಫೆ. 11): ವೈದ್ಯರ ನಿರ್ಲಕ್ಷ್ಯದಿಂದ  ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವೀಗೀಡಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಬೆಳಗ್ಗೆ ಚೆನ್ನಾಗಿದ್ದ ಮಗು ರಾತ್ರಿ ವೇಳೆಗೆ ಏಕಾಏಕಿ ಸಾವಿಗೀಡಾಗಿದೆ ಎಂದು ಅರೋಪಿಸಲಾಗಿದೆ.  ಈ ಬೆನಲ್ಲೇ ಪೋಷಕರು ರಿಮ್ಸ್ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದುಆಸ್ಪತ್ರೆಯಲ್ಲಿ ಗಲಾಟೆ ನಡೆಸಿದ್ದಾರೆ. ನಾಲ್ಕು ದಿನಗಳ ಹಿಂದೆ  ತಾಯಿ ರೇಣುಕಾಗೆ ನಾರ್ಮಲ್ ಡೆಲಿವರಿಯಾಗಿತ್ತು. ನಾಲ್ಕು ದಿನದಿಂದ ಆರೋಗ್ಯವಾಗಿದ್ದ ನವಜಾತ ಶಿಶು ಏಕಾಏಕಿ ಸಾವೀಗೀಡಾಗಿದೆ.

ಮಗುವಿನ ಸಮಸ್ಯೆ ಬಗ್ಗೆ ಮೊದಲೇ ಹೇಳಿದ್ದರೆ ಬೇರೆ ಆಸ್ಪತ್ರೆಗೆ ಹೋಗುತ್ತಿದ್ದೇವು ಎಂದು ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೆಲಕಾಲ ರಿಮ್ಸ್ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು ಮಗುವಿನ ಸಾವಿನ ಬಗ್ಗೆ ವೈದ್ಯರು ನಿಖರ ಕಾರಣ ತಿಳಿಸಿಲ್ಲ. 

Tap to resize

Latest Videos

ಇದನ್ನೂ ಓದಿ: Raichur Ksheera Bhagya Scam: ಶಾಲೆಗಳ ನಕಲಿ ದಾಖಲೆ ಸೃಷ್ಟಿಸಿ ಹಾಲಿನ ಪುಡಿ ಗುಳಂ!

ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆ: ಗರದ ಪಿಡಬ್ಲ್ಯೂಡಿ ಕ್ಯಾಂಪಿನ ಬಳಿ ಇರುವ ಕೆಎಚ್‌ಬಿ ಕ್ವಾರ್ಟರ್ಸ್‌ನಲ್ಲಿ ಮಹಿಳೆಯೊಬ್ಬಳು(Woman) ವರದಕ್ಷಿಣೆ ಕಿರುಕುಳ ತಾಳಲಾರದೆ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಜರುಗಿದೆ. ಸಂಜೋತಾ ಮಲ್ಲಿಕಾರ್ಜುನ ರೆಡ್ಡಿ (30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ. ಈಕೆಯ ಗಂಡ, ಅತ್ತೆ, ಮಾವ, ಮೈದುನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು.

ಮಕ್ಕಳಾಗಿಲ್ಲ ಎಂಬ ಕಾರಣಕ್ಕಾಗಿ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಇದನ್ನು ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಸಂಜೋತಾಳ ತಂದೆ ಲಕ್ಷ್ಮಪ್ಪ ನಗರ ಪೊಲೀಸ್‌(Police) ಠಾಣೆಯಲ್ಲಿ ದೂರು(Complaint) ನೀಡಿದ್ದಾರೆ. ನಂತರ ಆಕೆಯ ಮರಣೋತ್ತರ ಪರೀಕ್ಷೆ(Post Mortem) ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿತು ಎಂದು ಶಹರ ಪೊಲೀಸ್‌ ಠಾಣೆಯ ಪಿಎಸ್‌ಐ ಸೌಮ್ಯ ಹಿರೇಮಠ ತಿಳಿಸಿದ್ದಾರೆ.

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ: ರಾಯಚೂರು(Raichur): ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸ್ಟೇಷನ್‌ ರಸ್ತೆಯಲ್ಲಿನ ಎಸ್‌ಬಿಐ ವಿಮಾ ಕಚೇರಿಯಲ್ಲಿ ಜರುಗಿದೆ. ಸ್ಥಳೀಯ ಬೋಳಮಾನದೊಡ್ಡಿ ರಸ್ತೆಲ್ಲಿರುವ ಬಡಾವಣೆ ನಿವಾಸಿ ಸುಜೀತ್‌ (30) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಕೆಲಸವಿದೆ ಎಂದು ಮನೆಯಿಂದ ಕಚೇರಿಗೆ ಬಂದಿರುವ ಯುವಕ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಈ ಕುರಿತು ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

click me!