*ಮಂಗಳೂರಿನ ಉಳ್ಳಾಲ ಭಾಗದ ಬೀಚ್ ಗಳಿಗೆ ಸಂಜೆ ವೇಳೆ ಪ್ರವೇಶ ನಿರ್ಬಂಧ
*25 ದಿನಗಳ ಕಾಲ ಸಂಜೆ ವೇಳೆ ಪ್ರವೇಶ ನಿರ್ಬಂಧಿಸಿ ದ.ಕ ಡಿಸಿ ಡಾ.ರಾಜೇಂದ್ರ ಆದೇಶ
*ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಬೀಚ್ ಪ್ರವೇಶ ಬಂದ್
ಮಂಗಳೂರು (ಫೆ. 11): ಉಳ್ಳಾಲದ ಇತಿಹಾಸ ಪ್ರಸಿದ್ದ ಸಯ್ಯದ್ ಮದನಿ ದರ್ಗಾದ ಉರೂಸ್ (Sayyid Madani DargaUroos) ಕಾರ್ಯಕ್ರಮ ಹಿನ್ನೆಲೆ ಮಂಗಳೂರಿನ ಉಳ್ಳಾಲ ಭಾಗದ ಬೀಚ್ ಗಳಿಗೆ ಸಂಜೆ ವೇಳೆ ಪ್ರವೇಶ ನಿರ್ಬಂಧಿಸಲಾಗಿದೆ. 25 ದಿನಗಳ ಕಾಲ ಸಂಜೆ ವೇಳೆ ಪ್ರವೇಶ ನಿರ್ಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಬೀಚ್ ಪ್ರವೇಶ ನಿರ್ಬಂಧಿಸಲಾಗಿದೆ.
ಸೆಯ್ಯದ್ ಮದನಿ ತಂಙಳ್ ರವರ 429 ನೇ ವಾರ್ಷಿಕ ಹಾಗೂ 21 ಪಂಚ ವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು ಫೆ.10ರಿಂದ ಮಾ.6ರವರೆಗೆ ಉಳ್ಳಾಲ ಸಯ್ಯದ್ ಮದನಿ ದರ್ಗಾದ ಉರೂಸ್ ಕಾರ್ಯಕ್ರಮ ನಡೆಯಲಿದೆ. ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಉರೂಸ್ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ.
undefined
ಇದನ್ನೂ ಓದಿ: Controversial Banner: ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ಬ್ಯಾನರ್ ಪಾಲಿಟಿಕ್ಸ್
ಪ್ರವಾಸಿಗರು ಊರೂಸ್ ಕಾರ್ಯಕ್ರಮ ಬಳಿಕ ಬೀಚ್ ಗಳಿಗೆ ತೆರಳುವ ಸಾಧ್ಯತೆಯಿರುವುದರಿಂದ ಸಂಜೆ ಬೀಚ್‌ಗಳಲ್ಲಿ ಜನಜಾತ್ರೆ ನಿಯಂತ್ರಣ ಮತ್ತು ಅಪಾಯಕಾರಿ ಹಿನ್ನೆಲೆ ನಿರ್ಬಂಧ ವಿಧಿಸಲಾಗಿದೆ. ಉಳ್ಳಾಲ, ಉಳಿಯ, ನೆಹರೂನಗರ, ಸೋಮೇಶ್ವರ, ಉಚ್ಚಿಲ, ಮೊಗವೀರಪಟ್ಣ, ಪೆರಿಬೈಲ್, ಬಟ್ಟಪಾಡಿ ಬೀಚ್ ಗಳಿಗೆ ಪ್ರವೇಶ ನಿರ್ಬಂಧಸಿಲಾಗಿದೆ.
ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ವಿವಾದ: ನಗರದ ಹೊರವಲಯದ ಉಳ್ಳಾಲಬೈಲ್ನಲ್ಲಿ ‘ಹಿಂದುಗಳಿಗೆ (Hindu) ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ’ ಎಂಬ ಆಕ್ಷೇಪಾರ್ಹ ಬ್ಯಾನರ್ಗಳನ್ನು ಅಳವಡಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ (Sunil Kumar) ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: Karnataka Politcs: ನನ್ನ ಹುದ್ದೆಗೂ, ಇಬ್ರಾಹಿಂ ವಿಚಾರಕ್ಕೂ ಸಂಬಂಧ ಇಲ್ಲ: ಖಾದರ್
ಆಕ್ಷೇಪಾರ್ಹ ಬ್ಯಾನರ್ ಅಳವಡಿಕೆ ಸಮರ್ಥಿಸಿಕೊಂಡ ಸಚಿವ ಸುನಿಲ್ ಕುಮಾರ್, ಬ್ಯಾನರ್ ವಿಚಾರದಲ್ಲಿ ಕಾರ್ಯಕರ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆ ಎಂದಿದ್ದರು. ಇದಕ್ಕೆ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ (UT Khader)ಆಕ್ರೋಶ ವ್ಯಕ್ತಪಡಸಿದ್ದಾರೆ. ಸರ್ಕಾರದ ಸಚಿವರಾಗಿ ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಬೇಕು. ನನ್ನ ಕ್ಷೇತ್ರದಲ್ಲಿ ಇಂಥ ಸಮಸ್ಯೆ ಬರದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸಚಿವರು ದಿಕ್ಕು ತಪ್ಪಿಸಬಾರದು: ಕಾರ್ಯಕರ್ತರು ಅಂತ ಹೇಳಿಕೊಂಡು ಸಚಿವರುಗಳು ಅವರ ದಿಕ್ಕು ತಪ್ಪಿಸಬಾರದು. ಎಷ್ಟೋ ಕಾರ್ಯಕರ್ತರ ಮಕ್ಕಳು ಫೀಸ್ ಕಟ್ಟದೇ ಮನೆಯಲ್ಲಿ ಇದ್ದಾರೆ, ಅವರ ಫೀಸ್ ಕಟ್ಟಿ. ಕಾರ್ಯಕರ್ತರ ಕುಟುಂಬ ಮನೆ ಕಟ್ಟಲಾಗದೇ ಸಂಕಷ್ಟದಲ್ಲಿದೆ, ಅವರಿಗೆ ಮನೆ ಕಟ್ಟಿ ಕೊಡಿ. ಆಸ್ಪತ್ರೆಯಲ್ಲಿರೋ ಕಾರ್ಯಕರ್ತರ ಕುಟುಂಬದ ಬಿಲ್ ಕಟ್ಟುವ ವ್ಯವಸ್ಥೆ ಮಾಡಿ ಎಂದರು.
ನಿಮಗಾಗಿ ದುಡಿಯೋ ಕಾರ್ಯಕರ್ತರು ಜೈಲು ಸೇರಿ ವಕೀಲರಿಗೂ ಕೊಡೋಕೆ ಹಣ ಇಲ್ಲ, ಅಂಥವರಿಗೆ ಸಹಾಯ ಮಾಡಿ. ಅನೇಕ ಕಾರ್ಯಕರ್ತರು ಕೆಲಸ ಇಲ್ಲದೇ ಇದ್ದಾರೆ, ಅವರಿಗೆ ಕೆಲಸ ಕೊಡಿಸಿ. ಅದು ಬಿಟ್ಟು ಚುನಾವಣೆ ಬಂದಾಗ ಇವರನ್ನ ಹುರಿದುಂಬಿಸಿ, ತಲೆ ಕೆಡಿಸಿ ಸಮಾಜದಲ್ಲಿ ವಿಭಜನೆ ಮಾಡಬೇಡಿ ಎಂದು ಸಚಿವ ಸುನೀಲ್ ಕುಮಾರ್‌ಗೆ ಸಲಹೆ ನೀಡಿದರು.
ನಾಳೆ ಅವರ ಮೇಲೆ ಕೇಸ್ ಆದಾಗ ದೂರ ನಿಂತು ನೋಡೋದು ಯಾವ ಮಂತ್ರಿಗೂ ಶೋಭೆ ತರಲ್ಲ. ನಾನು ಬ್ಯಾನರ್ ಹಾಕಿದವರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೆ. ಸಮಾಜದ ಸ್ವಾಸ್ಥ್ಯ ಕೆಡಿಸಿ ಒಬ್ಬೊಬ್ಬರು ಒಂದೊಂದು ಕಡೆ ಬ್ಯಾನರ್ ಹಾಕ್ತಾರೆ. ಬ್ಯಾನರ್ ಹಾಕಿದ ಉಳ್ಳಾಲ ದೇವಸ್ಥಾನಕ್ಕೆ ಎಲ್ಲಾ ಧರ್ಮೀಯರು ಬರ್ತಾರೆ, ನಾನೂ ಹೋಗ್ತೇನೆ. ವೈದ್ಯನಾಥ ದೇವಸ್ಥಾನಕ್ಕೆ ನಾನೇ ಕಾಂಕ್ರೀಟ್ ರಸ್ತೆ ಮಾಡಿಸಿ ಕೊಟ್ಟಿದ್ದೆ ಎಂದು ಹೇಳಿದರು.