ದಾವಣಗೆರೆ ನಗರಕ್ಕೆ ನೂತನ ಬಸ್‌ ಸಂಚಾರ : ಗ್ರಾಮಸ್ಥರಲ್ಲಿ ಹರ್ಷ

By Kannadaprabha News  |  First Published Oct 26, 2021, 9:32 AM IST
  • ದಾವಣಗೆರೆ ನಗರಕ್ಕೆ ನೂತನ ಬಸ್‌ ಸಂಚಾರ ಸೋಮವಾರದಿಂದ ಆರಂಭವಾಗಿದೆ.
  • ಪಶ್ಚಿಮ ತಾಲೂಕಿನ ಮಾಗಳ ಸೇರಿದಂತೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹತ್ತಾರು ಹಳ್ಳಿಗಳ ಪ್ರಯಾಣಿಕರು

 ಹೂವಿನಹಡಗಲಿ (ಅ.26):   ದಾವಣಗೆರೆ (Davanagere) ನಗರಕ್ಕೆ ನೂತನ ಬಸ್‌ ಸಂಚಾರ (Bus) ಸೋಮವಾರದಿಂದ ಆರಂಭವಾಗಿದೆ.

ಪಶ್ಚಿಮ ತಾಲೂಕಿನ ಮಾಗಳ ಸೇರಿದಂತೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹತ್ತಾರು ಹಳ್ಳಿಗಳ ಪ್ರಯಾಣಿಕರು, ದಾವಣಗೆರೆಗೆ ಹೋಗಲು ಈವರೆಗೂ ಬಸ್ಸು ಸಂಚಾರ ಇರದೇ ಪರದಾಡುವ ಸ್ಥಿತಿ ಇತ್ತು. ಈ ಹಿಂದೆ ಸಂಚರಿಸುತ್ತಿದ್ದ ಖಾಸಗಿ ಬಸ್ಸು ಕೋವಿಡ್‌ನಿಂದ (covid) ಈವರೆಗೂ ಆರಂಭಿಸಿಲ್ಲ. ಆದ್ದರಿಂದ ಮಾಗಳದಿಂದ ದಾವಣಗೆರೆ ಹೋಗಲು ಹೂವಿನಹಡಗಲಿ ಸಾರಿಗೆ ಘಟಕವು ನೂತನ ಬಸ್‌ ಸಂಚಾರ ಆರಂಭಿಸಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ.

Latest Videos

undefined

ಬೆಂಗ್ಳೂರಿಂದ 6 ನಗರಕ್ಕೆ ಎಲೆಕ್ಟ್ರಿಕ್‌ ಬಸ್‌ ಸಂಚಾರ

ಮಾಗಳ ಗ್ರಾಮದಲ್ಲಿ ಸಾಕಷ್ಟು ಭತ್ತ ಬೆಳೆಯುವ ರೈತರಿದ್ದಾರೆ (Farmers). ಭತ್ತದ ಬೆಳೆಗೆ ಅಗತ್ಯವಿರುವ ಔಷಧಿ ಖರೀದಿ, ಸೇರಿದಂತೆ ಇನ್ನಿತರ ವಾಣಿಜ್ಯ ವ್ಯಾಪಾರಕ್ಕೆ ದಾವಣಗೆರೆಯನ್ನೇ (Davanagere) ಆಶ್ರಯಿಸಿದ್ದಾರೆ. ಮಾಗಳ- ಹಿರೇಹಡಗಲಿ, ಹರಪನಹಳ್ಳಿ ಮೂಲಕ ದಾವಣಗೆರೆಗೆ ಬಸ್‌ ಸಂಚರಿಸಲಿದೆ.

ಮಾಗಳ ದಾವಣಗೆರೆ ನೂತನ ಬಸ್‌ ಸಂಚಾರ ಆರಂಭವಾಗುತ್ತಿದಂತೆಯೇ, ಗ್ರಾಮಸ್ಥರು ಸೇರಿ ನೂತನ ಬಸ್ಸಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸುವ ಮೂಲಕ ಶುಭ ಹಾರೈಸಿದ್ದೇವೆ. ಈ ಬಸ್ಸು ಸಂಚಾರದಿಂದ ಗದಗ (Gadag) ಜಿಲ್ಲೆ ಮುಂಡರಗಿ ತಾಲೂಕಿನ ಸಾಕಷ್ಟುಪ್ರಯಾಣಿಕರಿಗೂ ಅನುಕೂಲವಾಗಲಿದೆ ಎನ್ನುತ್ತಾರೆ ಮಾಗಳ ಗ್ರಾಪಂ ಅಧ್ಯಕ್ಷ ಈಟಿ ಕೋಟೆಪ್ಪ.

ಪ್ಯಾಕೇಜ್ ಟೂರ್

 ಕೆಎಸ್‌ಆರ್‌ಟಿಸಿ (KSRTC)ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ‘ಬೆಂಗಳೂರು   -ಹಂಪಿ  -ತುಗಭದ್ರ ಡ್ಯಾಮ್‌ (Bengaluru-Hampi- Tungabhdra) ಪ್ಯಾಕೇಜ್‌ನ್ನು ಪ್ರಕಟಿಸಿದೆ.

ಹವಾನಿಯಂತ್ರಣ ರಹಿತ ಸ್ಲೀಪರ್‌ ವಾಹನದೊಂದಿಗೆ ಅಕ್ಟೋಬರ್‌ 1ರಿಂದ ಪ್ಯಾಕೇಜ್‌ ಆರಂಭವಾಗುತ್ತಿದ್ದು, ಇದರಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟದ ವ್ಯವಸ್ಥೆ ಒಳಗೊಂಡಿರಲಿದೆ. ಜೊತೆಗೆ, ಹಂಪಿ ವೀಕ್ಷಣೆಯ ಪ್ರವೇಶ ಶುಲ್ಕವನ್ನು ನಿಗಮದಿಂದ ಭರಿಸಲಾಗುತ್ತಿದೆ.

ಕಾಗದ ರಹಿತ ವ್ಯವಸ್ಥೆಗೆ ಸಾರಿಗೆ ಇಲಾಖೆ ಸಿದ್ಧತೆ: ಸಚಿವ ರಾಮುಲು

ಈ ಪ್ಯಾಕೇಜ್‌ನಲ್ಲಿ ವಯಸ್ಕರಿಗೆ 2,500 ಮತ್ತು ಮಕ್ಕಳಿಗೆ 2,300 ರು.ಗಳನ್ನು ನಿಗದಿಪಡಿಸಿಸಲಾಗಿದ್ದು, ವಿಜಯ ವಿಠ್ಠಲ ದೇವಸ್ಥಾನ, ವಿರೂಪಾಕ್ಷ ಸ್ವಾಮಿ ದೇವಸ್ಥಾನ, ಸಾಸಿವೆಕಾಳು, ಕಡಲೇಕಾಳು ಗಣೇಶ, ಲಕ್ಷ್ಮೀ ನರಸಿಂಹ, ಬಡವಲಿಂಗ, ಆನೆಗಳ ಆಶ್ವಶಾಲೆ, ಕಲ್ಯಾಣಿ, ಕಮಲಮಹಲ್‌, ಮಹಾನವಮಿ ದಿಬ್ಬ, ರಾಣಿಯರ ಈಜುಕೊಳವನ್ನು ನೋಡಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

click me!